ಪ್ರೌಢಶಾಲೆಯಲ್ಲಿ ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ
Guru Vandana, Friendship Reunion Program in High School
ಜೇವರ್ಗಿ,ಡಿ.26: ತಾಲೂಕಿನ ಜೇರಟಗಿ ಗ್ರಾಮದ ಶ್ರೀ ಅಮರ್ಪ ದೊಡ್ಡಪ್ಪ ನಿಷ್ಠಿ ದೇಶಮುಖ ಪ್ರೌಢಶಾಲೆಯಲ್ಲಿ ಶಾಲೆಯ 2000ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ವತಿಯಿಂದ 'ಗುರುವಂದನಾ ಮತ್ತು ಸ್ನೇಹ ಸಮ್ಮಿಲನ' ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳಾದ ಬಿ.ಜಿ. ಮಲ್ಲಾಡ್, ವಿ.ಬಿ. ಕಲಶಟ್ಟಿ, ಪಿ.ಎಂ. ವನರೊಟ್ಟಿ, ಜಿ.ಎಸ್. ಸುಂಬಡ್, ಗುರುಮೂರ್ತಿ ಹಿರೇಮಠ, ಗೀರೀಶ್ ಕುಲಕರ್ಣಿ, ಎಚ್.ಎಸ್. ಚೌಡಕಿ, ಪ್ರಭು ತಿಮ್ಮಾಪುರ, ಅಶೋಕ್ ಹಾಗೂ ರಿಯಾನಾ ಅವರಿಗೆ ಭಕ್ತಿಪೂರ್ವಕವಾಗಿ ಗುರುವಂದನೆ ಸಲ್ಲಿಸಿ, ಸನ್ಮಾನಿಸಿ ಸತ್ಕರಿಸಿದರು. ಸಂಭ್ರಮದ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಬಿ.ಜಿ. ಮಲ್ಲಾಡ್ ಅವರು, ಹಳೆಯ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ತಿಳಿಸಿ ಆಶೀರ್ವದಿಸಿದರು. ಹಳೆಯ ವಿದ್ಯಾರ್ಥಿಗಳಾದ ಮೌನೇಶ ನಾಗವಿ, ನಾಗೇಂದ್ರಯ್ಯ ಪುರಾಣಿಕ್, ಶಿವಾನಂದ ಹೂಗಾರ, ಸುಮಂಗಲಾ ಘಂಟಿ, ಕಾಳಮ್ಮ ಜೋಗೂರ ಹಾಗೂ ಸಂತೋಷ ವಾಲಿಕಾರ ಅವರು ತಮ್ಮ ವಿದ್ಯಾರ್ಥಿ ಜೀವನದ ಸವಿ ನೆನಪುಗಳನ್ನು ಹಂಚಿಕೊಂಡರು. ಪ್ರಕಾಶ ಯಾತನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿಎಚ್ ಡಿ ಪದವಿ ಪಡೆದ ಹಳೆಯ ವಿದ್ಯಾರ್ಥಿ ಡಾ.ಸಿದ್ರಾಮಯ್ಯ ಸಿದ್ದೇಶ್ವರಮಠ ಅವರಿಗೆ ಸನ್ಮಾನಿಸಲಾಯಿತು. ಹಳೆಯ ವಿದ್ಯಾರ್ಥಿಗಳಾದ ಶಿವಾನಂದ ದಿವಾಣಿ, ಗುಡುಸಾಬ ಬಾಗವಾನ, ನಿಂಗಣ್ಣ ಯಾತನೂರ, ಲಕ್ಷ್ಮಣ ಕಲ್ಲೂರ, ಮಹಿಬೂಬಸಾಬ ಮಯೂರ, ಮಂಜುನಾಥ ಅಂಕಲಗಿ, ಈರಣ್ಣ ಅಂಬೇವಾಡಿ, ಮಹಾಂತಯ್ಯ ಬಿಲ್ಲಾಡ, ಭೀಮರಾಯ ಬೇಲೂರ್, ಶಿವಾನಂದ ರಂಜಣಗಿ, ಬಾಗಣ್ಣ ರಂಜಣಗಿ, ಭಗವಂತರಾಯ, ಅಶೋಕ ಮಳ್ಳಿಗೇರಿ, ಶಿವಶರಣ ಯಾತನೂರ, ಸೊಂದಪ್ಪ ಯಾತನೂರ, ಯಲ್ಲಪ್ಪ ಪೂಜಾರಿ, ಬಡೆಸಾಬ, ವೀರಭದ್ರಯ್ಯ ಕೂಕನೂರ, ಬಸವರಾಜ ಚೌದರಿ, ಖಾದರಬಾಷಾ, ಪ್ರಕಾಶ ನೇದಲಗಿ, ಶಿವಲೀಲಾ ಹಿರೇಮಠ, ಶಾಂತಾಬಾಯಿ ನಾಯ್ಕೋಡಿ, ಜಯಶ್ರೀ ಹಿರೇಮಠ, ರಿಯಾನಾ ಬೇಗಂ, ಸವಿತಾ ಗೋಗಿ, ನೂರಜಾನ ಬೇಗಂ, ಶಹಾಬಾನ ಬೇಗಂ, ಫರ್ಜಾನಾ ಬೇಗಂ ಇದ್ದರು. ವಿಶ್ವನಾಥ ವಾಲಿಕಾರ ನಿರೂಪಿಸಿದರು. ಸಂತೋಷ ವಾಲಿಕಾರ ಸ್ವಾಗತಿಸಿದರು. ಶರಣಬಸಪ್ಪ ನೇದಲಗಿ ವಂದಿಸಿದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 