ಆನಂದಾಶ್ರಮದಲ್ಲಿ ಶ್ರದ್ಧಾ ಭಕ್ತಿಯ ಗುರುಪೂರ್ಣಿಮೆ
Guru Purnima of devotion at Anandashram
ತಾಳಿಕೋಟಿ 31: ಪಟ್ಟಣದ ಶ್ರೀಮನ್ನಿಜಗುಣ ಶಿವಯೋಗಿಗಳ ಆನಂದಾಶ್ರಮದಲ್ಲಿ ಗುರು ಪೂರ್ಣಿಮೆ ಆಚರಣೆಯನ್ನು ಬುಧವಾರ ಬೆಳಿಗ್ಗೆ ಆಯೋಜಿಸಲಾಗಿತ್ತು. ಬೆಳಿಗ್ಗೆ ನಿಜಗುಣ ಶಿವಯೋಗಿಗಳ ಪಾದಗಳಿಗೆ ರುದ್ರಾಭಿಷೇಕವನ್ನು ಘನಮಠೇಶ ಬೇನಾಳಮಠ ನೆರವೇರಿಸಿದರು. ಬೆಳಿಗ್ಗೆ 9ಗಂಟೆಗೆ ಆಶ್ರಮದಲ್ಲಿ ಗುರುಪಾದಪೂಜೆ ಕಾರ್ಯಕ್ರಮದಲ್ಲಿ ಕೋರವಾರದ ಮುರಿಗೆಂದ್ರ ಸ್ವಾಮೀಜಿಗಳ ಪಾದಪೂಜೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿದ್ದ ಎಚ್.ಎಸ್.ಪಾಟೀಲ ಕಾಲೇಜಿನ ಉಪನ್ಯಾಸಕ ಪರಶುರಾಮ ಚೌಡಕೇರ ಮಾತನಾಡಿ, ವ್ಯಾಸ ಪೌರ್ಣಿಮೆಯನ್ನು ಗುರುಪೂರ್ಣಿಮೆ ಎನ್ನಲಾಗುತ್ತದೆ. ವ್ಯಾಸರನ್ನು ಮನುಷ್ಯರಿಗೆ ಅಧ್ಯಾತ್ಮದ ಜ್ಞಾನ ನೀಡಿದ ಆದಿಗುರುವೆಂದು ಪರಿಗಣಿಸಲಾಗಿದೆ. ಅವರ ಸ್ಮರಣೆಯ ಪವಿತ್ರದಿನ ಇದಾಗಿದೆ ಎಂದರು.
ಜ್ಞಾನದ ಬೆಳಕನ್ನು ನೀಡುವ ಶಕ್ತಿ ಹೊಂದಿರುವವರೆಲ್ಲ ಗುರುಗಳೆ, ಅವರ ಸ್ಮರಣೆಯ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ಹುಬ್ಬಳ್ಳಿಯ ಸಿದ್ಧಾರೂಢರು, ಸಜ್ಜಲಗುಡ್ಡದ ಶರಣಮ್ಮನವರು, ತಾಳಿಕೋಟೆ ಖಾಸ್ಗತರಂತವರೆಲ್ಲ ಗುರುವಿನ ಸ್ಥಾನದಲ್ಲಿದ್ದು ಅಂತಹ ಶರಣರು ಸಂತರನ್ನು ಮನದೊಳಗೆ ನಿತ್ಯ ಸ್ಮರಣೆ ಮಾಡುವುದರಿಂದ ಮಾನವ ಜನ್ಮ ಸಾರ್ಥಕತೆ ಪಡೆಯುತ್ತದೆ ಎಂದರು. ವಿವಿಧ ತತ್ವಪದಗಳನ್ನು ಹಾಡುತ್ತ ಪ್ರವಚನ ಮಾಡಿದರು.
ಸಾನ್ನಿಧ್ಯವನ್ನು ವಹಿಸಿದ್ದ ಖಾಸ್ಗತೇಶ್ವರಮಠದ ಆಡಳಿತಾಧಿಕಾರಿ ಮುರುಗೇಶ ವಿರಕ್ತಮಠ. ಅಧ್ಯಕ್ಷತೆ ವಹಿಸಿದ್ದ ನಿಜಗುಣ ಶಿವಯೋಗಿಗಳ ಆನಂದಾಶ್ರಮದ ಅಧ್ಯಕ್ಷ ಎಸ್.ಎಂ.ಬೇನಾಳಮಠ ಮಾತನಾಡಿದರು.
ವಿಜಯಾ ಲೊಕರೆ ಪ್ರಾರ್ಥನೆ, ಉಮಾ ಘಿವಾರಿ ಸ್ವಾಗತಿಸಿದರು. ಕಾರ್ಯದರ್ಶಿ ಮಲ್ಲಿಕಾರ್ಜುನ ಹಿಪ್ಪರಗಿ ನಿರ್ವಹಿಸಿದರು. ಪಟ್ಟಣ ಸೇರಿದಂತೆ ತಮದಡ್ಡಿ, ಮೈಲೇಶ್ವರ, ಮಿಣಜಗಿ ಬಳಗಾನೂರ ಮೊದಲಾದ ಗ್ರಾಮಗಳಿಂದ ಭಕ್ತಾದಿಗಳು ಪಾಲ್ಗೊಂಡಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 