ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕು ನೀಡುವ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವೇ ಗುರು ಪೂರ್ಣಿಮೆ

ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕು ನೀಡುವ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವೇ ಗುರು ಪೂರ್ಣಿಮೆ  Guru Purnima is the sacred day to express gratitude to the Gurus who dispel the darkness of ignoranc

ಲೋಕದರ್ಶನ ವರದಿ 

ಆಲಮೇಲ 29 :    ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ಗುರು ಪೂರ್ಣಿಮೆ ಹಾಗೂ ದಿ.ಶಿವಕಾಂತ ಬಡದಾಳ ರವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಚರಿಸಲಾಯಿತು.  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ  ಶೈಲಪ್ಪ ಜೋಗೂರ ರವರು ಪುರಾಣ ಕಾಲದಿಂದಲೂ ಗುರು ಸ್ಮರಣೆ ಬೆಳೆದುಕೊಂಡು ಬಂದಿದ್ದು. ಇಂದು ಪ್ರತಿ ವ್ಯಕ್ತಿಯ ಜೀವನದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಬಹಳಷ್ಟು ಜನರಿಂದ ಶಿಕ್ಷಣ ಹಾಗೂ ಮಾರ್ಗದರ್ಶನ ಪಡೆದಿರುತ್ತೇವೆ. ಅಂತಹ ಗುರುಗಳಿಗೆ ಸ್ಮರಣೆ ಮಾಡಿ ಅವರಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಇದುವೇ ಗುರು ಪೂರ್ಣಿಮೆಯ ಆಚರಣೆಯ ಉದ್ದೇಶ.

ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ಮಾತನಾಡಿ ಗುರು ಪೂರ್ಣಿಮೆಯು ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕು ನೀಡುವ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವಾಗಿದೆ. ಆಷಾಢ ಮಾಸದ ಹುಣ್ಣಿಮೆಯಂದು ಬರುವ ಈ ಹಬ್ಬವು ಮಹರ್ಷಿ ವೇದವ್ಯಾಸರ ಜನ್ಮದಿನ ಹಾಗೂ ಆದಿಯೋಗಿಯಾದ ಶಿವನು ಮೊದಲ ಗುರುವಾಗಿ  ಜ್ಞಾನ ಬೋಧನೆ ಆರಂಭಿಸಿದ ದಿನವೆಂದು ನಂಬಲಾಗಿದೆ.  ಇಂದು ಸಂಸ್ಥೆಯ ಅಧ್ಯಕ್ಷರು ಎಸ್‌.ಆಯ. ಜೋಗೂರ ರವರು ಪ್ರತಿನಿತ್ಯ ಎಲ್ಲಾ ಶಿಕ್ಷಕ ರಿಗೂ ಹಾಗೂ ವಿದ್ಯಾರ್ಥಿಗಳಿಗೂ ಹಲವು ತರಹದ ಜ್ಞಾನ ತಮ್ಮ ಅನುಭವ ಹಾಗೂ ಸಂಶೋಧನಾ ಮೂಲಕ ಶಾಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಮೂಲಕ ಗುರುವಿನ ಸ್ಥಾನಕ್ಕೆ ಘನತೆ ತಂದಿದ್ದಾರೆ ಹಾಗಾಗಿ ಅವರ ಸೇವೆಯನ್ನು ಶ್ಲಾಘಿಸಿ ಅವರನ್ನು ಗೌರವಿಸಲಾಗಿದೆ.

ಇದೆ ವೇಳೆ ಸಿಂದಗಿ ತಾಲ್ಲೂಕಿನ ದೈಹಿಕ ಶಿಕ್ಷಣದ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆ ಆದ ಶಾಲೆಯ ದೈಹಿಕ ಶಿಕ್ಷಕಿ ಸೀತಾ ಆರೇಶಂಕರ ರವನ್ನು ಗೌರವಿಸಲಾಯಿತು. ಈ ವೇಳೆ ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ಸರುಬಾಯಿ ಬಂಡಗರ, ಸುನೀತಾ ಗುಂಡದ, ಪ್ರಶಾಂತ ಗಡದೆ, ಐಶ್ವರ್ಯ ಬೇಪಾರಿ, ಅಂಜಲಿ ಕನ್ನೊಳ್ಳಿ ಮುಂತಾದವರು ಉಪಸ್ಥಿತರಿದ್ದರು.