ಧಾರವಾಡ 12: ಇಲ್ಲಿನ ಕೆಲಗೇರಿಯ ಶಿರಡಿ ಸಾಯಿ ಬಾಬಾ ಸಂಸ್ಥೆಯ ವತಿಯಿಂದ ಸಾಯಿಬಾಬಾ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಜು. 14ರಿಂದ ಜು. 16ರವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿರಡಿ ಸಾಯಿ ಬಾಬಾ ಸಂಸ್ಥೆಯ ಅಧ್ಯಕ್ಷ ಮಹೇಶ ಶೆಟ್ಟಿ ತಿಳಿಸಿದರು.
ಅವರು ಶುಕ್ರವಾರ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
33 ಅಡಿ ಎತ್ತರದ ಅನ್ನ ಬ್ರಹ್ಮ ಮೂರ್ತಿ ಇದಾಗಿದೆ. ಇದು ಶಿರಡಿ ಸಾಯಿಬಾಬಾ ಮಂದಿರದ ಅನ್ನ ಬ್ರಹ್ಮ ಮೂರ್ತಿಗಿಂತ ಮೂರು ಅಡಿ ಎತ್ತರವಿದೆ. ಇದು ಭಾರತದ ಅತಿ ಎತ್ತರದ ಮೂರ್ತಿಯಾಗಿದೆ. ಅಹ್ಮದ್ ನಗರದ ಇಂಜಿನಿಯರ್ ಸಂತೋಷ ಶಂಕರ್ ರೋಹಕಲೆ ತಯಾರಿಸಿದ್ದಾರೆ ಎಂದರು.
ಮೊದಲ ದಿನ ಜು. 14ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಅನ್ನ ಬ್ರಹ್ಮ ಮೂರ್ತಿಯ ಅನಾವರಣ ಸಮಾರಂಭ ಜರುಗಲಿದೆ. ಇದರ ದಿವ್ಯ ಸಾನಿಧ್ಯವನ್ನು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಧರ್ಮದರ್ಶಿ ಭೀಮೇಶ್ಚರಿ ಜೋಶಿ ವಹಿಸುವರು. ಮೂರ್ತಿ ಅನಾವರಣವನ್ನು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಹಾಗೂ ಗಣಿ ಸಚಿವರಾದ ಪ್ರಹ್ಲಾದ ಜೋಶಿ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎನ್.ಹೆಚ್. ಕೋನರಡ್ಡಿ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಆಗಮಿಸುವರು. ಮಹಾದಾನಿಗಳಿಗೆ ಸನ್ಮಾನಿಸಲಾಗುವುದು. ಮಧ್ಯಾಹ್ನ 12. 30ರಿಂದ ಬಸಪ್ಪ ಮುಶಿಗೇರಿ ಅವರಿಂದ ಪ್ರಸಾದ ಸೇವೆ ಜರುಗಲಿದೆ. ಇದರ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಮಹೇಶ ಶೆಟ್ಟಿಯವರು ವಹಿಸುವರು. ಸಂಜೆ 6.30ರಿಂದ ಶ್ರೀ ಸಾಯಿ ಸಚ್ಛರಿತ್ರೆ ಪಾರಾಯಣದ ಮುಕ್ತಾಯ ಸಮಾರಂಭ ನಡೆಯುವುದು. ಉಪಸ್ಥಿತಿ ಶ್ರೀಶೈಲ ಸಾಣಿಕೊಪ್ಪ ವಹಿಸುವರು. ರಾತ್ರಿ 8ರಿಂದ ತುಮಕೂರಿನ ಸಾಯಿರಾಮನ್ ನೃತ್ಯ ಕೇಂದ್ರದ ನಿರ್ದೇಶಕರಾದ ವಿದ್ವಾನ್ ಸಾಗರ ಟಿ.ಎಸ್. ಅವರಿಂದ ಸಾಯಿ ಚರಿತ್ರೆ ನೃತ್ಯ ರೂಪಕ ನಡೆಯಲಿದೆ.
ರಾತ್ರಿ 9.30ರಿಂದ ವೀರನಗೌಡ ಪಾಟೀಲ ಮತ್ತು ವಾಗೀಶ ಹಿರೇಮಠ ಅವರಿಂದ ಅನ್ನ ಪ್ರಸಾದ ಸೇವೆ ನಡೆಯಲಿದೆ.
ಜು.15ರಂದು ಸೋಮವಾರ ಸಂಜೆ 6.30ಕ್ಕೆ ಗುರು ಪೂರ್ಣಿಮೆ ಉತ್ಸವದ ಉದ್ಘಾಟನಾ ಸಮಾರಂಭ ಜರುಗಲಿದೆ. ಉದ್ಘಾಟಕರಾಗಿ ಮಾಜಿ ಮೇಯರ್ ಪೂರ್ಣಾ ಪಾಟೀಲ ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ವಿಜಯಾನಂದ ಶೆಟ್ಟಿ ಆಗಮಿಸುವರು. ಬಳಿಕ ದಾನಿಗಳಿಗೆ ಸನ್ಮಾನಿಸಲಾಗುವುದು. ಸಂಜೆ 7 ಗಂಟೆಗೆ ಭಜನ ಸಂಧ್ಯಾ ಕಾರ್ಯಕ್ರಮವನ್ನು ಅಂತರ್ ರಾಷ್ಟ್ರೀಯ ಖ್ಯಾತಿ ಯ ಶಿರೆಇಯ ಕಲಾವಿದ ಪಾರಸಜಿ ಜೈನ ಅವರಿಂದ ಜರುಗಲಿದೆ. ರಾತ್ರಿ 9.30ರಿಂದ ಪ್ರದೀಪ ಪಕ್ಕಳ ಅವರಿಂದ ಅನ್ನ ಪ್ರಸಾದ ನಡೆಯಲಿದೆ. ಜು. 16ರಂದು ಮಂಗಳವಾರ ಬೆಳಗ್ಗೆ 9ರಿಂದ ವಿಶೇಷ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ಜರುಗಲಿದೆ. ಮಧ್ಯಾಹ್ನ 12.30ರಿಂದ ಅನ್ನ ಪ್ರಸಾದ ಜರುಗಲಿದೆ. ಸಂಜೆ 6.30ಕ್ಕೆ ಮಹಾದ್ವಾರದ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದರ ದಿವ್ಯ ಸಾನಿಧ್ಯವನ್ನು ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ವಹಿಸುವರು. ಉದ್ಘಾಟಕರಾಗಿ ವಿಧಾನ ಪರಿಷತ್ ಹಿರಿಯ ಸದಸ್ಯ ರಾದ ಬಸವರಾಜ ಹೊರಟ್ಟಿ, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ವಿನಯ ಕುಲಕರ್ಣಿ, ಧಾರವಾಡ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ ಆಗಮಿಸುವರು. ಎಂದು ಸಂಸ್ಥೆ ಅಧ್ಯಕ್ಷ ಮಹೇಶ ಶೆಟ್ಟಿ ಅವರು ತಿಳಿಸಿದರು.
ಸಂಜೆ 7.30ರಿಂದ ಧಾರವಾಡದ ನಾಟ್ಯ ಸ್ಫೂರ್ತಿ ಕಲ್ಚರಲ್ ಅಕಾಡೆಮಿ ಮತ್ತು ಶಾಂತಲಾ ನೃತ್ಯಾಲಯ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ರಾತ್ರಿ 8.30ರಿಂದ ಪಲ್ಲಕ್ಕಿ ಸೇವೆ ರಾತ್ರಿ 10ಕ್ಕೆ ಶೇಜಾರತಿ ನಡೆಯಲಿದೆ ಎಂದು ವಿವರಿಸಿದರು. ಮಹಾದಾನಿಗಳಾದ ಶ್ರೀ ಮತಿ ಸುಮಿತ್ರಾ ಹಾಗೂ ಡಾ. ಶಂಕರಗೌಡ ಪಾಟೀಲ, ಶಾಂತಾದೇವಿ ಪಾಟೀಲ, ಮಂದಾಕಿನಿ ಮತ್ತು ಮಧುಕರ್ ಮಹೇಂದ್ರಕರ, ಪ್ರಶಾಂತಿ ಮತ್ತು ಬಿ.ಟಿ. ರೆಡ್ಡಿ, ಚಂದನಾ ಮತ್ತು ಆನಂದ ಕಾಲವಾಡ, ಮಾಲತಿ ಅಣ್ವೇಕರ, ಲಲಿತಾದೇವಿ ಗುತ್ತಲ್ ಅವರನ್ನು ಗೌರವಿಸಲಾಗುವುದು.
ಪತ್ರಿಕಾಗೋಷ್ಠಿ ಯಲ್ಲಿ ಉಪಾಧ್ಯಕ್ಷ ಉದಯ ಶೆಟ್ಟಿ, ಕಾರ್ಯದರ್ಶಿ ಗುರುಪಾದಯ್ಯ ಹೊಂಗಲ್ ಮಠ, ಉಪಕಾರ್ಯದರ್ಶಿ ನಾರಾಯಣ ಕದಂ, ಖಜಾಂಚಿ ಕಿರಣ ಶಹಾ,ಉಪ ಖಜಾಂಚಿ ಸುರೇಶ ಹಂಪಿಹೊಳಿ, ಸಮಿತಿ ಸದಸ್ಯರಾದ ಟಿ.ಟಿ. ಚವ್ಹಾಣ, ಭಾಸ್ಕರ್ ರಾಯ್ಕರ್, ಸದಸ್ಯರಾದ ಸಂತೋಷ ಮಹಾಲೆ, ಅಮೃತ ನರೇಂದ್ರ ಉಪಸ್ಥಿತರಿದ್ದರು.