ಗುರುಪೌರ್ಣಿಮೆ: ಗುರುವಿನ ಸನ್ಮಾರ್ಗದಲ್ಲಿ ನಡೆಯುವುದು ಒಳಿತು
Guru Purnima: It is good to follow the path of the Guru
ಶಿಗ್ಗಾವಿ 15: ಪ್ರತಿಯೋಬ್ಬರ ಜೀವನದಲ್ಲಿ ಗುರುವಿನ ಮಹತ್ವ ಅರಿಯಬೇಕು, ಅಜ್ಞಾನವನ್ನ ಓಡಿಸುವವರೇ ಗುರುಗಳಾಗಿದ್ದು ಸನ್ಮಾರ್ಗ ತೋರಿ ಎಲ್ಲರ ಪರಿಪೂರ್ಣ ಜೀವನಕ್ಕೆ ಗುರುವಿನ ಮಾರ್ಗದರ್ಶನ ಅವಶ್ಯವಾಗಿದೆ ಎಂದು ಬೆಂಗಳೂರ ಆರ್ಟ್ ಅಫ್ ಲಿವಿಂಗ್ ಸಂಸ್ಥೆಯ ಶಿಕ್ಷಕ ಕುಮಾರ್ ಸಿಂಹ ಹೇಳಿದರು.
ಪಟ್ಟಣದ ಸಾಯಿ ಮಂದಿರದಲ್ಲಿ ಗುರುಪೌರ್ಣಿಮೆ ಪ್ರಯುಕ್ತ ಹಮ್ಮಿಕೊಂಡ ಸತ್ಸಂಗ, ಜ್ಞಾನ ಹಾಗೂ ದ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಟ್ಟಿನ ರಹಸ್ಯವನ್ನ ಬಲ್ಲವರು ಗುರುಗಳು, ಸತ್ಯದ ಅರ್ಥವನ್ನ ತಿಳಿಸುವವರೇ ಗುರುಗಳು, ಗುರುಗಳ ಆಶೀರ್ವಾದವೋಂದಿದ್ದರೆ ಅಸಾದ್ಯವೂ ಸಾದ್ಯವಿದೆ, ಜೀವನದ ಸತ್ಯವನ್ನ ತಿಳಿಸಲೇಂದೇ ಗುರುಗಳು ಇರುವುದು ಎಂದರು.
ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿ ಭಾರತಿ ಜಂಬಗಿ ಮಾತನಾಡಿ, ಸಮಯದ ಮಹತ್ವ ತಿಳಿಸುವವರು ಗುರುಗಳು, ಪಾಶ್ಚಿಮಾತ್ಯರ ಪ್ರಭಾವದಿಂದ ನಮ್ಮ ಗುರುಗೌರವ ಕಡಿಮೆಯಾಗುತ್ತಿದೆ, ಸಮಯದ ಮಹತ್ವ ಅರಿತು ನಡೆಯೋಣ, ನಮ್ಮ ಸಂಸ್ಕೃತಿ, ಆಚಾರ ವಿಚಾರವನ್ನ ನಮ್ಮ ಮಕ್ಕಳಿಗೆ ಕಲಿಸೋಣ ಗುರು ಗೌರವವನ್ನ ಮೆರೆಯೋಣ ಎಂದರು.
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಹಿರಿಯ ಶಿಕ್ಷಕ ಮಂಜುನಾಥ ರಾಜಾರಾಂ ಮಾತನಾಡಿದರು, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕುಮಾರ್ ಸಿಂಹ ಹಾಗೂ ಗೌತಮಿ ತಂಡದವರಿಂದ ಸಂಗೀತ, ಭಜನೆ ಜೊತೆಗೆ ದ್ಯಾನ ಕಾರ್ಯಕ್ರಮ ಜರುಗಿತು.
ಹಾವೇರಿ ಆರ್ಟ್ ಆಫ್ ಲೀವಿಂಗ್ ಶಿಕ್ಷಕಿ ಶೋಭಾ ಅಳಗವಾಡಿ, ಶಶಿಧರ ಸುರಗೀಮಠ, ಬಸವರಾಜ ಹೆಸರೂರ, ಕೇದಾರ್ಪ ಬಗಾಡೆ, ವಿಶ್ವನಾಥ ವಾಲಿಶೆಟ್ಟರ್, ಕವಿತಾ ಪಾಟೀಲ, ನಾಗರತ್ನ ಚಕ್ರಸಾಲಿ, ಗೋದಾವರಿ ಭಟ್, ಕಾಂಚನ ಪಾಟೀಲ, ಪಾರ್ವತಿ ಪಾಟೀಲ ಸೇರಿದಂತೆ ಸ್ವಯಂ ಸೇವಕರು ಕಾರ್ಯಕ್ರಮ ಉಪಸ್ಥಿತದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 