ಗುರುಪೂರ್ಣಿಮೆ: ಶಿವಶಕ್ತಿಯರ ಸಂಗಮ ಕಾರ್ಯಕ್ರಮ
Guru Purnima: Confluence of Shiva and Shakti
ಕೊಪ್ಪಳ 23: ಗುರುಪೂರ್ಣಿಮೆ ಅಂಗವಾಗಿ ಏರ್ಪಡಿಸಿದ ಚೈತನ್ಯ ಶಿವಶಕ್ತಿಯರ ಸಂಗಮ ಕಾರ್ಯಕ್ರಮ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಭಾಭವನದಲ್ಲಿಅತ್ಯಂತ ವಿಜ್ರಂಭಣೆಯಿಂದ ಜರುಗಿತು. ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಧಾರವಾಡ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕರಾದ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ತಿಳಿಸುತ್ತಾ ಗುರುವಿನ ಹೆಸರಲ್ಲಿ ಪೂರ್ಣಿಮೆ ಆಚರಿಸುವುದರ ಉದ್ದೇಶವೇನೆಂದರೆ ನಮ್ಮನ್ನು ಪೂರ್ಣ ಮಾಡಬಲ್ಲವನೆ ಗುರು ಮುಕ್ತಿಯನ್ನು ನೀಡಬಲ್ಲವನೇಗುರು ಶ್ರೇಷ್ಠ ಗುರಿತಲುಪಿಸುವವನೇ ಗುರು ಜಗತ್ತಿನ ಎಲ್ಲಾ ಆತ್ಮಗಳ ಕಲ್ಯಾಣ ಮಾಡುವವನೇ ಗುರು ಸರ್ವರನ್ನು ಬಂಧನ ಮುಕ್ತಗೊಳಿಸುವವನೇ ಗುರು ಎಂದರು. ಶಿಕ್ಷಕರ ದಿನಾಚರಣೆಯ, ಮಕ್ಕಳ ದಿನಾಚರಣೆ, ಯುವಕರ ದಿನಾಚರಣೆ, ಕಾರ್ಮಿಕರ ದಿನಾಚರಣೆಎನ್ನುತ್ತೇವೆಆದರೆ ಗುರುಗಳ ಪೂರ್ಣಿಮೆಎನ್ನದೆ ಕೇವಲ ಗುರುಪೂರ್ಣಿಮೆಎನ್ನಬೇಕಾದರೆಅಜ್ಞಾನ ಅಂಧಕಾರ ಹೋಗಲಾಡಿಸುವಂತಗುರುವೊಬ್ಬನೇ ಅವನೇ ಜ್ಞಾನ ಸಾಗರ, ಜ್ಞಾನ ಸೂರ್ಯ, ಜ್ಞಾನೇಶ್ವರ, ಜ್ಞಾನದಾತ ಪರಮಾತ್ಮಆಗಿದ್ದಾನೆ.
ಪರಮಾತ್ಮಈಶ್ವರನೇತನ್ನ ವಿಶ್ವ ವಿದ್ಯಾಲಯತೆರೆದು ಸತ್ಯಜ್ಞಾನದ ಬೆಳಕನ್ನು ನೀಡುತ್ತಿದ್ದಾನೆ. ಧ್ಯಾನಾಮೃತದ ಕಳಶ ಅಕ್ಕಂದಿರಕೈಯಲ್ಲಿಕೊಟ್ಟು ಶಿವ ಶಕ್ತಿಯರನ್ನ ಮುಂದಿಟ್ಟು ವಿಶ್ವ ಪರಿವರ್ತನೆಯಕಾರ್ಯವನ್ನು ಸ್ವಯಂ ಪರಮಾತ್ಮನೇ ಸದ್ಗುರುವಾಗಿಕೈಗೆತ್ತಿಕೊಂಡಿದ್ದಾರೆಎಂದುಗುರುಪೂರ್ಣಿಮೆಯ ದಿವ್ಯ ಸಂದೇಶ ನೀಡಿದರು.ಕರ್ನಾಟಕದ ವಿವಿಧ ಜಿಲ್ಲಾ ತಾಲೂಕುಗಳ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಆಗಮಿಸಿದ ಬ್ರಹ್ಮಕುಮಾರಿ ಸಮರ್ಿತಅಕ್ಕಂದಿರನ್ನು ವೇದಿಕೆ ಮೇಲೆ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಬಾಳಪ್ಪ ಭೂತೆ ನಿವೃತ್ತ ಸಿವಿಲ್ ನ್ಯಾಯಾಧೀಶರು ಮಾತನಾಡುತ್ತಾ ಗುರುವಿಗೆ ಗುಲಾಮನಾಗದತನಕ ತೊರೆಯದಣ್ಣ ಮುಕ್ತಿ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಪರಮ ಸದ್ಗುರು ಪರಮಾತ್ಮನಆದೇಶಕ್ಕೆ ನಾವೆಲ್ಲರೂ ಅಜ್ಞಾಕಾರಿಗಳಾಗಿ ನಡೆಯೋಣಎಂದರು. ನಗರಾಭಿವೃದ್ಧಿ ಪ್ರಾಧಿಕಾರದಅಧ್ಯಕ್ಷರಾದ ಶ್ರೀನಿವಾಸ್ ಗುಪ್ತ ಅವರು ಮಾತನಾಡುತ್ತ ನಗರದ ಅಭಿವೃದ್ಧಿಗೆ ಬಾಹ್ಯ ಶರೀರಕ್ಕೆ ನೀರು, ಗಾಳಿ, ಆಹಾರ ಎಷ್ಟು ಮುಖ್ಯವೋಆಂತರಿಕ ಮನಸ್ಸಿಗೆ ಶಾಂತಿ, ನೆಮ್ಮದಿ ಅಷ್ಟೇ ಮುಖ್ಯಅದನ್ನು ಪಡೆದುಕೊಳ್ಳಲು ಇಂತಹ ಅಧ್ಯಾತ್ಮ ಸ್ಥಳಕ್ಕೆ ಸಮಯ ಬಿಡುವು ಮಾಡಿಕೊಂಡು ಬರಬೇಕು ಎಂದರು.
ನಗರಸಭೆ ಮಾತನಾಡುತ್ತಇವತ್ತಿನ ಮಾನಸಿಕ ಒತ್ತಡದ ಸಮಯದಲ್ಲಿ ಮನುಷ್ಯತನ್ನ ಶರೀರದ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾನೆ ಒತ್ತಡದಿಂದ ಮುಕ್ತರಾಗಲು ಮೆಡಿಟೇಶನ್ ಒಳ್ಳೆ ಮಾರ್ಗಎಂದುಅಭಿಪ್ರಾಯ ಪಟ್ಟರು ವೇದಿಕೆ ಮೇಲೆ ಹಿರಿಯ ವಕೀಲರಾದ ವಿ ಎಂ ಭೂಸನೂರಮಠ ರಾಘವೇಂದ್ರ ಪಾನ್ಗಂಟಿ ಉಪಸ್ಥಿತರಿದ್ದರು. ಬಿಕೆ ಯೋಗಿನಿ ಸ್ವಾಗತಿಸಿದರು. ಬಿಕೆ ರಶ್ಮಿ ಕಾರ್ಯಕ್ರಮ ನಿರೂಪಿಸಿದರು. ಬಿಕೆ ಸ್ನೇಹ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 