ಗುರುವಿನ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಅಗತ್ಯ

ಲೋಕದರ್ಶನವರದಿ

ರಾಣೇಬೆನ್ನೂರು-ಫೆ.4: ಗುರುವಿನ ಮಾರ್ಗದರ್ಶನ ಹಾಗೂ ಪಾಲಕರಿಂದ ದೊರೆಯುವ ಸಂಸ್ಕಾರದಿಂದ ನಿಷ್ಠೆಯಿಂದ ನಿರಂತರ ಪ್ರಯತ್ನ ಮುಂದುವರೆಸಿದಾಗ ಮಾತ್ರ ವಿದ್ಯಾಥರ್ಿಗಳು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

 ಸೋಮವಾರ ತಾಲೂಕಿನ ಕವಲೆತ್ತು ಗ್ರಾಮದ ಶ್ರೀ ದುಗರ್ಾದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ, ಮಾಕನೂರು ಕ್ಲಸ್ಟರ್ ಹಾಗೂ ದೇವಸ್ಥಾನ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಎಸ್ಎಸ್ಎಲ್ಸಿ ವಿದ್ಯಾಥರ್ಿಗಳ ತರಬೇತಿ ಕಾಯರ್ಾಗಾರ ಹಾಗೂ ಮುಕ್ತ ಸಮಾಲೋಚನಾ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

  ತಂದೆ-ತಾಯಿ, ಗುರು ಹಿರಿಯರ, ಶಿಕ್ಷಕರ ಗೌರವ ಉಳಿಸಬೇಕಾದರೆ ವಿದ್ಯಾಥರ್ಿಗಳು ಶಿಕ್ಷಣದ ಜೊತೆಗೆ ಸಂಸ್ಕಾರವಂತರಾಗಿ, ನಯವಿನಯದಿಂದ ವತರ್ಿಸುವ, ಗೌರವದಿಂದ ಕಾಣುವ, ಪೂಜ್ಯನೀಯ ಭಾವನೆಯಲ್ಲಿ ನೋಡುವ ಮನೋಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯ ಎಂದರು.

  ಜಿಲ್ಲಾ ಡಯಟ್ ಪ್ರಾಚಾರ್ಯ ಜಿ.ಎಂ.ಬಸವಲಿಂಗಪ್ಪ ಮಾತನಾಡಿ, ಕೃತಕ ಓದಿನಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಸಹಜ ಓದಿನ ಮೂಲಕ ಪಠ್ಯವನ್ನು ಅರಿಯಬೇಕು. ತಮ್ಮ ಹಸ್ತರೇಖೆಯನ್ನೇ ಬದಲಾಯಿಸುವ ಸಾಮಥ್ರ್ಯ ನಿಮ್ಮಲ್ಲಿದೆ. ನಿಮ್ಮ ಭವಿಷ್ಯವನ್ನು ನೀವೇ ಬದಲಾಯಿಸಿಕೊಳ್ಳಬೇಕು ಎಂದರು.

 ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ ಮಾತನಾಡಿ, ಪರೀಕ್ಷೆ ಎಂಬುದು ಜ್ಞಾನವನ್ನು ಅಳೆಯುವ ಮಾನದಂಡವಷ್ಟೆ ಇದಕ್ಕೆ ಭಯ ಪಡುವ ಅಗತ್ಯವಿಲ್ಲ. ಪರೀಕ್ಷೆಯನ್ನು ಹಬ್ಬದಂತೆ ಉತ್ಸಾಹದಿಂದ ಎದುರಿಸಬೇಕು. ಕಷ್ಟಪಟ್ಟು ಓದುವುದಕ್ಕಿ ಇಷ್ಟಪಟ್ಟು ಓದಿದಾಗ ಪರೀಕ್ಷೆಯನ್ನು ಇನ್ನೂ ಸುಲಭವಾಗಿ ಎದುರಿಸಬಹುದು ಎಂದರು..

  ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳು ಹೆಚ್ಚು ಮಹತ್ವ ಹೊಂದಿದ್ದು ಧನಾತ್ಮಕಧೋರಣೆಯಿಂದ ಅಧ್ಯಯನ ಮಾಡಬೇಕು. ಸೋಲುತ್ತೇನೆ ಎಂಬುದರ ಬದಲಾಗಿ ಗೆಲ್ಲುತ್ತೇನೆ ಎನ್ನುವ ವಿಶ್ವಾಸ ಹೊಂದಬೇಕು ಅಂದಾಗ ಸುಲಭವಾಗಿ ಎಲ್ಲ ವಿಷಯಗಳಲ್ಲೂ ನೀವು ಉತ್ತಮ ಅಂಕಗಳಿಸಲು ಸಾಧ್ಯ ಎಂದರು.

  ದೈಹಿಕ ಶಿಕ್ಷಣಾಧಿಕಾರಿ ಎ.ಬಿ.ಚಂದ್ರಶೇಖರ್, ವಿಷಯ ಪರಿವೀಕ್ಷಕ ಆರ್.ಮಂಜಪ್ಪ, ಗ್ರಾಪಂ ಅಧ್ಯಕ್ಷ ಅಷ್ಟಮೂತರ್ಿ ಓಲೇಕಾರ, ದೇವಸ್ಥಾನ ಸಮಿತಿ ಅಧ್ಯಕ್ಷ ಬುಳ್ಳಪ್ಪ ಹೊನ್ನಪ್ಪನವರ, ಗ್ರಾಸಿಂ ಜನಸೇವಾ ಟ್ರಸ್ಟಿನ ವ್ಯವಸ್ಥಾಪಕ ದಿನೇಶ್ ನಾಯ್ಕ್, ಮುಖಂಡರಾದ ಚೋಳಪ್ಪ ಕಸವಾಳ, ಗೋಣಿಬಸಪ್ಪ ಜಾಡರ, ಸಿಆರ್ಪಿ ಅಶೋಕ್.ಬಿ.ಕೆ., ಮುಖ್ಯ ಶಿಕ್ಷಕಿ ಮಂಜುಳಾ ಕುಲಕಣರ್ಿ, ಶ್ರೀನಿವಾಸ ರಾಯಚೂರ, ಜಿ.ಆರ್.ಹನುಮಂತಪ್ಪ, ದೇವೇಂದ್ರಪ್ಪ ಬಿಸಲಹಳ್ಳಿ, ಜಿ.ಎಸ್.ಓಲೇಕಾರ, ನಾಗರಾಜ ಮತ್ತೂರ, ಶಶಿಧರ ಅಡಿವೆಪ್ಪನವರ, ರವಿಕುಮಾರ್ ನಾಯ್ಕ್, ಬಂಗಾರಪ್ಪ ಬಡಿಗೇರ, ಜಗದೀಶ್ ಮಳೀಮಠ,  ಉಮಾ, ಮೋಯಿನ್, ಸಂತೋಷ ನಾಯ್ಕ್ ಸೇರಿದಂತೆ ಮತ್ತಿತರರು ಇದ್ದರು.