ಮನುಷ್ಯ ಅಂಧಕಾರ ಕಳೆಯಲು ಗುರುಗಳ ಮಾರ್ಗದರ್ಶನ ಅವಶ್ಯ: ಅರಳಲೆಮಠ

ಲೋಕದರ್ಶನವರದಿ

ಶಿಗ್ಗಾವಿ : ಮನುಷ್ಯನಲ್ಲಿ ಅಡಗಿರುವ ಅಂಧಕಾರವನ್ನು ಕಳೆಯಲು ಗುರುಗಳ ಮಾರ್ಗದರ್ಶನದ ಅವಶ್ಯಕತೆಯಿದೆ. ಗುರುಗಳ ಮಾರ್ಗದರ್ಶನದಿಂದ ಮಾತ್ರ ಮನುಷ್ಯನಲ್ಲಿ ಅಡಗಿರುವ ಅಂಧಕಾರವನ್ನು ದೂರಮಾಡಬಹುದಾಗಿದೆ ಎಂದು ಡಾ.ಸುಖಿನ್ ಅರಳಲೆಮಠ ಹೇಳಿದರು.

     ತಾಲೂಕಿನ ಬಂಕಾಪುರ ಪಟ್ಟಣದ ಅರಳಲೆಮಠದ ಆವರಣದಲ್ಲಿ ನಡೆದ ರೇವಣಸಿದ್ಧೇಶ್ವರ ಶ್ರೀಯವರ 62 ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿ  ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ ಅರಳಲೆಮಠ ಭಕ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಲಿದೆ. ಶ್ರೀಮಠದ ನೂರನೇ ಪೀಠಾದಿಪತಿಗಳಾದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳು ಕೃಷಿ ಕಾಯಕ ಯೋಗಿಗಳಾಗಿ ಭಕ್ತರು ಧರ್ಮದ ದಾರಿಯಲ್ಲಿ ನಡೆಯುವಂತೆ ಮಾಡಲು ನಾಡಿನಾದ್ಯಂತ ಸಂಚರಿಸಿ ಜ್ಞಾನ ದಾಸೋಹದೊಂದಿಗೆ ಅನ್ನ ದಾಸೋಹವನ್ನು ನಡೆಸುವ ಮೂಲಕ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

     ಶಿವಕುಮಾರ ಆದವಾನಿಮಠ ಮಾತನಾಡಿ ಶ್ರೀಗಳು ತಮ್ಮ ಹುಟ್ಟುಹಬ್ಬವನ್ನು ಹಾವೇರಿಯ ವೃದ್ಧಾಶ್ರಮಕ್ಕೆ ತೆರಳಿ ವೃದ್ಧರ ಆರೋಗ್ಯ ತಪಾಸಣೆಯೊಂದಿಗೆ ಔಷದೋಪಚಾರ ನೀಡಿ, ಸಿಹಿ ಊಟ ಊಣಬಡಿಸಿ ಹೊಸ ಬಟ್ಟೆ, ಸೀರೆಗಳನ್ನು ವಿತರಿಸಿ ದಿನಪೂತರ್ಿ ಅವರೊಂದಿಗೆ ಕಳೆಯುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಿಕೊಂಡಿರುವುದು ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವಂತಾಗಿದೆ ಎಂದು ಹೇಳಿದರು.

     ನೀಲಕಂಠಪ್ಪ ನರೇಗಲ್ ಮಾತನಾಡಿ ಮಾನವ ಜನ್ಮ ಪಾವನವಾಗಬೇಕಾದರೆ ಗುರು ಮಾರ್ಗದರ್ಶನ ಪಡೆದು ಧರ್ಮದ ದಾರಿಯಲ್ಲಿ ನಡೆಯುವ ಅವಶ್ಯಕತೆಯಿದೆ. ಮಠ, ಮಾನ್ಯಗಳ ಮಠಾದೀಶರು ಧರ್ಮ ಬೋದನೆ ಮಾಡದೇ ಇದ್ದರೆ ಸಮಾಜ ಅದೋಗತಿ ತಲುಪುತ್ತಲಿತ್ತು. ಸಮಾಜದಲ್ಲಿ ಮಠಾದೀಶರ ಕೊಡುಗೆ ಅಪಾರವಾಗಿದ್ದು, ಮನುಷ್ಯ ಮಾನವನಾಗಿ ಮಹದೇವನಾಗಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯೂ ಗುರು ಮಾರ್ಗದರ್ಶನದಲ್ಲಿ ನಡೆಯುವ ಅವಶ್ಯಕತೆಯಿದೆ ಎಂದು ಹೇಳಿದರು.

     ಬಸವರಾಜ ನಾರಾಯಣಪುರ ಮಾತನಾಡಿ ಗುರುಮಾರ್ಗದರ್ಶನದಲ್ಲಿ ನಡೆದ ಭಕ್ತರ ಬಾಳು ಬಂಗಾರವಾಗಲಿದೆ. ಲಿಂ.ರುದ್ರಮುನಿ ಶಿವಾಚಾರ್ಯರು ವಾಕ್ ಸಿದ್ಧಿಯನ್ನು ಪಡೆದವರಾಗಿದ್ದರು.

  ಮಹಾ ತಪಸ್ವಿಗಳಾದ ಅವರು ವಾಹನ ಸೌಲಬ್ಯವಿಲ್ಲದ ಕಾಲದಲ್ಲಿ ನಡೆದಿಕೊಂಡೆ ಭಕ್ತರಲ್ಲಿಗೆ ಹೋಗಿ ಗಿಡಮೂಲಿಕೆ ಔಷಧಿಯನ್ನು ನೀಡಿ ಭಕ್ತರ ರೋಗಗಳನ್ನು ದೂರಮಾಡುವ ಜೊತೆಗೆ, ಧರ್ಮ ಬೋಧನೆ ಮಾಡಿ ಭಕ್ತರನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುತ್ತಿದ್ದ ನಡೆದಾಡುವ ದೇವರಾಗಿ ಪರಿಣಮಿಸಿದ್ದರು. ಲಿಂಗೈಕ್ಯ ರುದ್ರಮುನಿ ಶ್ರೀಗಳವರಿಂದ ಅವರ ವಂಶಸ್ತರಿಗೆ ಬಳುವಳಿಯಾಗಿ ಬಂದ ವೈದ್ಯಕೀಯ ವೃತ್ತಿ ಇಂದಿನ ನಾಲ್ಕನೇ ತಲೆಮಾರಿನವರೆಗೂ ಸೇವಾ ಮನೋಭಾವನೆಯಿಂದ ಮುಂದುವರೆದುಕೋಂಡು ಬರುತ್ತಿದೆ ಎಂದು ಹೇಳಿದರು.

     ರುದ್ರಮುನಿ ಸೇವಾ ಸಮಿತಿ ಸದಸ್ಯರು ರೇವಣಸಿದ್ದೇಶ್ವರ ಶ್ರೀಗಳವರನ್ನು ಗುರು ಕಾಣಿಕೆ ನೀಡಿ ಸನ್ಮಾನಿಸಿದರು. ರುದ್ರಮುನಿ ಸೇವಾ ಸಮಿತಿ ಸದಸ್ಯರಾದ ನಾಗರಾಜ ಚಿಲ್ಲೂರ, ರವಿ ಕುರಗೋಡಿ, ಗಣೇಶ ಕುರಗೋಡಿ, ಚಂದ್ರು ಏಳಮಗ್ಗದ, ಕಿರಣ ಸಕ್ರಿ, ಸಂತೋಷ ಸವಣೂರ, ರಾಜು ಕುರಗೋಡಿ, ಈರಣ್ಣ ವಳಗೇರಿ, ಕುಮಾರ ಉಂಕಿ, ಸಿದ್ದು ಸವಣೂರ, ಶಂಕರಗೌಡ ಪಾಟೀಲ, ರಾಮಣ್ಣ ವಳಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.