ಶಿಗ್ಲಿ ಗ್ರಾಮದಲ್ಲಿ ವರುಣ ಕೃಪೆಗಾಗಿ ಗುರ್ಜಿ ಪೂಜೆ
Gurji puja for the blessings of Varuna in Shigli village
ಲಕ್ಷ್ಮೇಶ್ವರ 26: "ಸಮೀಪದ ಶಿಗ್ಲಿ ಗ್ರಾಮದಲ್ಲಿ ಗುರ್ಜಿ ಗುರ್ಜಿ ಅಲ್ಲಾಡಿ ಬಂದೆ. ಹಳ್ಳಕೊಳ್ಳ ತಿರುಗಾಡಿ ಬಂದೆ. ಕಾರ ಮಳೆಯೋ ಕಪ್ಪತ್ತ ಮಳೆಯೋ ಸುರಿಯೋ ಸುರಿ ಮಳೆಯೋ ಎಂದು ಹಾಡು ಹಾಡುತ್ತ ತಲೆ ಮೇಲೆ ಗುರ್ಜಿ ಹೊತ್ತುಕೊಂಡು ಪ್ರತಿ ಮನೆಗಳಿಗೆ ತೆರಳಿ ಗುರ್ಜಿ ಮೇಲೆ ನೀರು ಹಾಕಿಸಿಕೊಳ್ಳುವುದೇ ಒಂದು ಜಾನಪದ ಆಚರಣೆ ತಾಲ್ಲೂಕಿನಾದ್ಯಂತ ಮಳೆಯಾಗದ ಕಾರಣ ತಾಲೂಕಿನ ಶಿಗ್ಲಿ ಗ್ರಾಮದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಗುರ್ಜಿ ಪೂಜೆ ಆಚರಿಸಿದರು.ಸಗಣಿಯಿಂದ ಗುರ್ಜಿ ತಯಾರಿಸಿ ರೊಟ್ಟಿ ಹೆಂಚಿನ ಮೇಲೆ ಇಟ್ಟು ಮನೆ ಮನೆಗೆ ತೆರಳಿದ ಗುರ್ಜಿ ತಮ್ಮ ಮನೆ ಎದುರು ಬಂದಾಗ ಮನೆಯವರು ಹಂಚಿನ ಮೇಲೆ ನೀರು ಹಾಕಿ ದವಸಧಾನ್ಯ ನೀಡುತ್ತಾರೆ.
ಸಂಗ್ರಹವಾದ ದವಸಧಾನ್ಯವನ್ನು ಮಾರಾಟ ಮಾಡಿ ಚುರುಮರಿ ತಂದು ಎಲ್ಲರೂ ದೇವಸ್ಥಾನದಲ್ಲಿ ಕುಳಿತು ತಿನ್ನುವುದು ಒಂದು ವಾಡಿಕೆ ಇಂದಿನಿಂದ ನಡೆದುಕೊಂಡು ಬರುತ್ತಿದೆ ಅದರಂತೆ ಇಂದು ಸಿಗಲಿ ಗ್ರಾಮದಲ್ಲಿ ವರಣನ ಕೃಪೆಗಾಗಿ ಗುರ್ಜಿ ಪೂಜೆ ನಡೆಯಿತು ಈ ಸಮಯದಲ್ಲಿ ಗ್ರಾಮದ ಬಸಪ್ಪ ಹಂಜಿ.ಶಿವಪ್ಪ ಕೆಸರಳ್ಳಿ,ರಾಜು ಮುಳಗುಂದ.ಎನ್ ಎನ್ ನೆಗಳೂರ.ಶ್ರೀಧರ ಜನಿವಾರದ. ವಿಷ್ಣಪ್ಪ ಮಾಳೋದಿ, ಗೌರಮ್ಮ ಹಂಜಿ, ಶಾಂತ’ ಎ ತೋಟದ’ ಈರಮ್ಮ ಕೆಸರಳ್ಳಿ.ಪ್ರಭಾವತಿ ಮಾಳೋದಿ ಮಾಲಾ ಮುಳಗುಂದ. ಗಿರಿಜಮ್ಮ ಕೆಸರಳ್ಳಿ .ಕಮಲಮ್ಮ ಮೂಲಿಮನಿ, ಬಸವಣ್ಣಿಮ್ಮ ಹುಲಗೂರ.ಸಾವಿತ್ರಮ್ಮ ಮುಳಗುಂದ ಗ್ರಾಮದ ಗುರು ಹಿರಿಯರು ಯುವಕರು ಮಹಿಳೆಯರು ಮುದ್ದು ಮಕ್ಕಳು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 