ಗನ್ ಮ್ಯಾನ್ ವಿಷಯದಲ್ಲಿ ರಾಜಕೀಯ ಮಾಡಬಾರದು: ಡಿ.ಕೆ. ಶಿವಕುಮಾರ್

ಕಲಬುರಗಿ,  ಜ 30, ನನಗೆ ಗನ್‌ಮ್ಯಾನ್ ಅವಶ್ಯಕತೆಯಿಲ್ಲ. ಆದರೆ, ಸರ್ಕಾರ ಈ ವಿಚಾರದಲ್ಲಿ  ರಾಜಕೀಯ ಮಾಡಬಾರದು ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 27  ಮಾಜಿ ಸಚಿವರಿಗೆ ಸರ್ಕಾರದಿಂದ ಗನ್‌ಮ್ಯಾನ್ ವಾಪಾಸ್ಸು ಪಡೆದ ವಿಚಾರಕ್ಕೆ  ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ತನಗಿಷ್ಟದ ಪ್ರಕಾರ ಕೆಲಸ ಮಾಡುತ್ತಿದೆ‌. ಈ  ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಹೀಗೇ ಮಾಡಿದ್ದೆವಾ ? ಎಂದು ಅವರು ಪ್ರಶ್ನಿಸಿದರು.

ಕೆಪಿಸಿಸಿಗೆ ಅಧ್ಯಕ್ಷರ ನೇಮಕ ವಿಚಾರ ಹಾದಿಬಿದಿಯಲ್ಲಿ ಮಾತನಾಡುವಂತಹದ್ದಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ತಾವು ಜೈಲುವಾಸದ ವೇಳೆ ಕಾರ್ಯಕರ್ತರು ಅಭಿಮಾನಿಗಳಿಂದ ಪ್ರತಿಭಟನೆ ನಡೆದಿದ್ದು, ಈ ವೇಳೆ‌ ಸಾರ್ವಜನಿಕ ಆಸ್ತಿ ನಷ್ಟ ವಿಚಾರವಾಗಿ ಹೈಕೋಟ್೯ಗೆ ಪಿಐಎಲ್ ಸಲ್ಲಿಸಲಾಗಿದೆ. ಈ ಹಿಂದೆ ಯಾರ ಕೈವಾಡ ಇದೆ ಎಂಬುದು ತಮಗೆ ಗೊತ್ತಿದೆ ಎಂದರು.ಈ ಹಿಂದೆ ಅನೇಕ ಹೋರಾಟ, ಕಲ್ಲು ತುರಾಟಗಳಾಗಿವೆ, ಯಾರು ಕೂಡ ಪಿಐಎಲ್ ಹಾಕಿರಲಿಲ್ಲ. ನನಗೆ ತೊಂದರೆ ನೀಡುವುದೇ ಕೆಲವರ ಕೆಲಸವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ನನಗೆ ತೊಂದರೆ ಕೊಡುವುದರಲ್ಲಿಯೇ ಅವರಿಗೆ  ಖುಷಿಯಾಗುತ್ತದೆ. ಆದರೆ, ಈ ಬಗ್ಗೆ ತಾವು ತಲೆ ಕೆಡಿಸಿಕೊಳ್ಳುವುದಿಲ್ಲ.  ಎಲ್ಲಿ ನೋವಿರುತ್ತದೆಯೋ ಅಲ್ಲಿ ಸಂತೋಷ ಇರುತ್ತದೆ ಎಂದರು.