ಬಂದೂಕುದಾರಿಗಳಿಂದ ಗುಂಡಿನ ದಾಳಿ: ನೈಜೀರಿಯಾದಲ್ಲಿ 21 ಮಂದಿ ಸಾವು

ಮಾಸ್ಕೋ,  ಫೆ 13 :    ಮಧ್ಯ ನೈಜೀರಿಯಾದ ಕಡುನಾ ಎಂಬ ಹಳ್ಳಿಯಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ 21 ಜನರು ಸಾವನ್ನಪ್ಪಿದ್ದಾರೆ ಎಂದು  ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

ಫಿಕಾ  ಜಿಲ್ಲೆಯ ಬಕಾಲಿ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎಂದು ಪೊಲೀಸ್ ವಕ್ತಾರ  ಮುಹಮ್ಮದ್ ಜಲೀಗ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದಾಳಿಯ ಸಮಯದಲ್ಲಿ ಸುಮಾರು 100ರಷ್ಟಿದ್ದ ಉಗ್ರರ ಗುಂಪು ಕಾರುಗಳು ಮತ್ತು ಮೋಟರ್ ಸೈಕಲ್‌ಗಳಿಗೆ ಬೆಂಕಿ ಹಚ್ಚಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದುವರೆಗೆ ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

ಇಸ್ಲಾಮಿಕ್ ಗುಂಪು ಬೊಕೊ ಹರಮ್ ಉಗ್ರರಿಂದ ನಿರಂತರ ಬಾಂಬ್ ದಾಳಿ ಮತ್ತು ಅಪಹರಣ ಕೃತ್ಯಗಳಿಂದಾಗಿ ನೈಜೀರಿಯಾ ಜರ್ಜರಿತವಾಗಿದೆ.  ಬೊಕೋ ಹರಮ್‌ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್, ರಷ್ಯಾದಲ್ಲಿ ನಿಷೇಧಿತ ಭಯೋತ್ಪಾದಕ ಗುಂಪು)ಗೆ ನಿಷ್ಠೆಯನ್ನು ಘೋಷಿಸಿದೆ. ನೈಜೀರಿಯಾ ಜೊತೆಗೆ, ನೈಜರ್, ಕ್ಯಾಮರೂನ್ ಮತ್ತು ಚಾಡ್ ಕೂಡ ಬೊಕೊ ಹರಮ್‌ನ ಹಿಂಸಾಚಾರದಿಂದ ಜರ್ಜರಿತಗೊಂಡಿದೆ.