ಕಣ್ಮನ ಸೆಳೆಯುತ್ತಿರುವ ಗುಲ್ ಮಹೋರ

ಜಿ.ಪಿ.ಘೋರ್ಪಡೆ

ತಾಳಿಕೋಟೆ23: ಅತೀ ಆಕರ್ಷಣೆಯ ಬಿಂದು ಎನ್ನಿಸಿಕೊಂಡಿರುವ ಗುಲ್ ಮೋಹರ್ ಹೂವುಗಳು ಪಟ್ಟಣದ ಎಸ್.ಕೆ.ಕಾಲೇಜ್ ಆವರಣದಲ್ಲಿ ಮೈದುಂಬಿ ಅರುಳುವದರೊಂದಿಗೆ ನೊಡುಗರಿಗೆ ಆಕಷರ್ಿಸುತ್ತಿದೆ.

  ಪಟ್ಟಣದ ಆಕರ್ಷಕ ಒಳ್ಳೆಯ ಶಿಕ್ಷಣ ಸಂಸ್ಥೆಗಳಸಾಲಿನಲ್ಲಿರುವ ಎಸ್.ಕೆ.ಕಾಲೇಜ್ ಮೈಧಾನದಲ್ಲಿ ಇಂತಹ ಆಕರ್ಷಕ ಗುಲ್ ಮೋಹರ್ ಹೂವುಗಳು ತನ್ನತ್ತ ಜನರನ್ನು ಸೇಳುತ್ತಾ ಸಾಗಿದೆ ಈ ಮೊದಲು 20 ವರ್ಷಗಳ ಹಿಂದೆ ಪಟ್ಟಣದ ಬಹುತೇಕ ರಸ್ತೆಯ ಎಡಭಲದಲ್ಲಿ ಇಂತಹ ಗುಲ್ ಮೋಹರ್ ಹೂವಿನ ಗಿಡಗಳು ಕಾಣುತ್ತಿದ್ದವು ಆದರೆ ಪಟ್ಟಣವು ಬೆಳೆದಂತೆ ರಸ್ತೆ ಅಗಲಿಕರಣಕ್ಕಾಗಿ ಮತ್ತು ಕೇಲವರು ಮನೆಗಳ ಕಟ್ಟಡದ ಸಂದರ್ಭದಲ್ಲಿ ಈ ಗಿಡಗಳನ್ನು ಕೊಡಲೇಪೆಟ್ಟಿನಿಂತ ಕಣ್ಮರೆ ಮಾಡಿದ್ದಾರೆ.ಸದ್ಯ ಇಂತಹ ಗುಲ್ ಮೋಹರ್ ಹೂವಿನ ಗಿಡಗಳು ಎಸ್.ಕೆ.ಕಾಲೇಜ್ ಆವರಣದಲ್ಲಿ ಬಿಟ್ಟರೆ ಎಲ್ಲೋ ಒಂದು ಗಿಡ ಸಿಗುವದು ಅಪರೂಪವೆಂಬಂತಾಗಿದೆ ಇಂತಹ ಗಿಡಮರಗಳನ್ನು ಹೆಚ್ಚು ಹೆಚ್ಚಿಗೆ ಹಚ್ಚಿ ಬೆಳೆಸುವದರೊಂದಿಗೆ ಪಟ್ಟಣದ ಸೌಂದರ್ಯ ಕರಣದ ಜೊತೆಗೆ ಪರಿಸರ ರಕ್ಷಣೆಗೆ ಎಲ್ಲರೂ ಸಾಕ್ಷೀಕರಿಸಬೇಕಿದೆ.