ವೀರಭದ್ರ ದೇವರ ಗುಗ್ಗುಳೊತ್ಸವ: ಭದ್ರಕಾಳಿ-ವೀರಭದ್ರ ಕಲ್ಯಾಣ ಮಹೋತ್ಸವ

Guggulu Festival of Veerabhadra God: Bhadrakali-Veerabhadra Kalyana Mahotsava

ವೀರಭದ್ರ ದೇವರ ಗುಗ್ಗುಳೊತ್ಸವ: ಭದ್ರಕಾಳಿ-ವೀರಭದ್ರ ಕಲ್ಯಾಣ ಮಹೋತ್ಸವ  

ಮಾಂಜರಿ 15: ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಇಂದು ನಡೆದ ವೀರಭದ್ರ ದೇವರ ಗುಗ್ಗುಳೊತ್ಸವ ಮತ್ತು ಭದ್ರಕಾಳಿ-ವೀರಭದ್ರ ಕಲ್ಯಾಣ ಮಹೋತ್ಸವ ಹಾಗೂ ಪುರವಂತರ ಮಹಾಮೇಳದಲ್ಲಿ ಈ ಬಾರಿ ವಿವಿಧ ಸ್ಥಳಗಳಿಂದ ಬಂದಿದ್ದ ಪುರವಂತರ ವೈವಿಧ್ಯಮಯವಾದ ಕಲೆಗಳ ಪ್ರದರ್ಶನದಿಂದ ವಿಶೇಷ ಗಮನ ಸೆಳೆಯಿತು ವಿರಭದ್ರೇಶ್ವರ ದೇವರ ನಾಮಾವಳಿಗಳನ್ನು ಹೆಳುತ್ತಾ, ಹರಿತವಾದ ಖಡ್ಗಗಳು, ವಿವಿಧ ಆಯುಧಗಳನ್ನು ಗಾಳಿಯಲ್ಲಿ ಝಳಪಿಸುತ್ತಾ ವೀರಾವೇಶದಲ್ಲಿ ಹೆಜ್ಜೆಗಳೊಂದಿಗೆ ಮಾಡಿದ ನರ್ತನವು ವಿಸ್ಮಯ ಲೋಕದೊಂದಿಗೆ ಜಾನಪದ ಲೋಕವನ್ನು ಸೃಷ್ಟಿಸಿತು ಕೆಲ ಪುರವಂತರು ಎಂಟು ಅಡಿ ಉದ್ದದ ಸಲಾಕೆ ಮತ್ತು ಕಿರು ಬೆರಳಿನಷ್ಟು ದಪ್ಪಣೆಯ ದಾರವನ್ನು ಕೆನ್ನೆ, ತುಟಿಗಳಲ್ಲಿ ಹಾಯಿಸಿಕೊಂಡು ಜನರನ್ನು ಅಚ್ಚರಿಗೊಳಿಸಿದರು ಕೆಲವರು ತಮ್ಮ ಅಂಗೈ, ತುಟಿ, ಬೆನ್ನು, ಪಕ್ಕೆ, ಕಿವಿ, ಹೊಟ್ಟೆ, ಭಾಗದಲ್ಲಿಯೂ ಉದ್ದವಾದ ಸೂಜಿಗಳನ್ನು ಚುಚ್ಚಿಕೊಂಡು ಭಕ್ತಿ ಪ್ರದರ್ಶನ ಮೆರೆದರು ಶಿವನ ಭಕ್ತರಾದ ಪುರವಂತರು ಪ್ರದರ್ಶಿಸುವ ಕಲೆ ಪುರವಂತಿಕೆ ಇದು ಜಾನಪದ ಕ್ಷೇತ್ರದ ಮಹತ್ವದ ಗಂಡು ಕಲೆಯಾಗಿದೆ ಧಾರ್ಮಿಕ ಆಚರಣೆ ಹಿನ್ನಲೆಯಲ್ಲಿ ಪುರವಂತಿಕೆಯು ನಾಡಿನ ಸಂಸ್ಕೃತಿಯ ಪ್ರತಿಕವಾಗಿದ್ದು ಉತ್ತರ ಕರ್ನಾಟಕದಲ್ಲಿ ವಿಶೇಷ ಸ್ಥಾನಮಾನ ಗಳಿಸಿದೆ ಕಾವಿ ಧೋತರ, ತಲೆಗೆ ಕಾವಿಯ ಪೇಟ, ತೋಳಿದ ಬೆಳ್ಳಿಯ ನಾಗರ, ಕಿವಿಗೆ ರುದ್ರಾಕ್ಷಿ, ಹಣೆಗೆ ವಿಭೂತಿ, ಸೊಂಟಕ್ಕೆ ಗಂಟೆ, ಕತ್ತಿಗೆ ರುದ್ರಾಕ್ಷಿ ಮಾಲೆ, ಎದೆಯ ಮೇಲೆ ನರಸಿಂಹನ ಮುಖ, ಮುಂಗೈ, ತೋಳಿಗೂ ರುದ್ರಾಕ್ಷಿ ಸರ, ಸೊಂಟಕ್ಕೆ ಬಣ್ಣದ ಬಟ್ಟೆ ಧರಿಸಿ ಬಲಗೈಯಲ್ಲಿ ಖಡ್ಗ, ಎಡಗೈಯಲ್ಲಿ ನಿಂಬೆಹಣ್ಣಿನ ಶಸ್ತ್ರ ಹಿಡಿದು ಅಹಹಾ.... ವೀರ ಅಹಹ ರುದ್ರಾ,.., ಕರುಣಾ ಸಮುದ್ರ,.,.,. ಶ್ರೀ ವಿರಭದ್ರ ಕತಕ್ಕಡೆ, ಎಂದು ಹೆಜ್ಜೆ ಹಾಕುತ್ತಿದ್ದರೆ ನೋಡುಗರ ಮೈನವರೆಳತ್ತದೆ ಯಡೂರಿನಲ್ಲಿ ಬಹಳಗಳಿಂದ ಪುರವಂತರ ಕುಣಿತದ ಪ್ರದರ್ಶನ ನಡೆದು ಬಂದಿದೆ ಸದ್ಯ ಮೂಡಲಗಿಯ ಕಲ್ಲಪ್ಪಾ ಅಂಗಡಿ, ಈರಯ್ಯ ಹಿರೇಮಠ, ಮಲ್ಲಪ್ಪ ಗುದಗಪ್ಪನ್ನವರ, ಶಿವರಾಯಪ್ಪ ನಿಂಗನೂರ, ಮಹಾದೇವ ಅಲಗುಂಡಿ ಅವರು ಪುರವಂತರ ಕಲೆಯನ್ನು ಬೆಳೆಸುತ್ತಿದ್ದಾರೆ. ಹೊಸ ಪೀಳಿಗೆಗೆ ತರಬೇತಿ, ಮಾರ್ಗದರ್ಶನ ನೀಡಿ ಸಿದ್ಧಗೋಳಿಸುತ್ತಿದ್ದಾರೆ ಮೂಡಲಗಿಯ ಪುರವಂತರ ತಂಡವು ಬಾಗಲಕೋಟೆ, ಮುದೋಳ, ಯಡೂರ, ಗೊಡಚಿ ಸೇರಿದಂತೆ ವಿವಿಧಡೆಯಲ್ಲಿ ಪುರವಂತರ ಮತ್ತು ಸಾಹಿತ್ಯ, ಸಮ್ಮೇಳನಗಳನ್ನೂ ಮಾಹಿತಿ ತಂತ್ರಜ್ಞಾನದ ವ್ಯಾಪಕ ಬೆಳವಣಿಗೆಯಲ್ಲಿ ಜಾನಪದ ಕಲೆಗಳು ಕಳೆಗುಂದುತ್ತಿವೆ ಪುರವಂತರ ಕಲೆ ಇದಕ್ಕೆ ಹೊರತಾಗಿಲ್ಲ ಆದರೆ ಅದರ ನಡುವೆಯೂ ಧಾರ್ಮಿಕ ಆಚರಣೆಯ ಭಾಗವಾಗಿ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಹಬ್ಬ ಹರಿದಿನ, ವೀರಭದ್ರೇಶ್ವರ ಜಾತ್ರೆ, ಸಾಂಸ್ಕೃತಿಕ ಉತ್ಸವ ಮಾತ್ರವಲ್ಲದ ಭಕ್ತರ ಹರಕೆಯ ಭಾಗವಾಗಿಯೂ ಆಚರಣೆಯಲ್ಲಿದೆ ಹೀಗಾಗಿ ಪುರವಂತಿಕೆ ಕೇವಲ ಜಾನಪದ ಕಲೆಯಾಗಿ ಮಾತ್ರವಲ್ಲ ಭಕ್ತಿ ಸಮರೆ​‍್ಣಯಾಗಿಯೂ ಗುರುತಿಸಿ ಕೊಂಡು ತನ್ನ ಆಸ್ತಿತ್ವ ಉಳಿಸಿಕೊಂಡಿದೆ ಆದರೆ ಕಲೆಯ ಜೊತೆಗೆ ಕಲಾವಿದರ ಬದುಕು ಹಸನುಗೊಳಿಸುವ ಅವರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನವಾದರೆ ಕಲೆಗೆ ಉತ್ತಮ ಭವಿಷ್ಯ ರೂಪಿಸಲು ಸಹಾಯಕವಾಗುತ್ತದೆ ಎನ್ನುತ್ತಾರೆ ಕಲಾವಿದ ಕಲ್ಲಪ್ಪ ಅಂಗಡಿ ಗುಗ್ಗಳದಲ್ಲಿಯೂ ವೈಜ್ಞಾನಿಕ ವಿಚಾರಗಳಿವೆ ಅದರ ಉಳಿವಿಗೆ ಜನರ ಜೊತೆಗೆ ಸರ್ಕಾರದ ಪ್ರೋತ್ಸಾಹವೂ ಅತ್ಯಗತ್ಯ ಎಂದು ಹೇಳಿದರು.