ಲಕ್ಷ್ಮೇಶ್ವರದಲ್ಲಿ ಯುವಕನ ಭೀಕರ ಕೊಲೆ: ಕಾಂಗ್ರೆಸ್ ಮುಖಂಡ ಸೇರಿ 8 ಮಂದಿ ವಿರುದ್ಧ ಎಫ್‌ಐಆರ್
Gruesome murder of a youth in Lakshmeshwar: FIR registered against 8 people, including a Congress le
ಲಕ್ಷ್ಮೇಶ್ವರ, ಸೆ.24: ಪಟ್ಟಣದ ತಟ್ಟಿಯವರ ಲೇಓಟ್ನಲ್ಲಿ ಸೆ.23ರಂದು ನಡೆದ ಇರ್ಫಾನ್ ತಹಶೀಲ್ದಾರ್ (34) ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಸೇರಿದಂತೆ ಒಟ್ಟು ಎಂಟು ಮಂದಿಯ ವಿರುದ್ಧ ಲಕ್ಷ್ಮೇಶ್ವರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತಟ್ಟಿಯವರ ಲೇಓಟ್ನಲ್ಲಿ ಬುಧವಾರ ಮಧ್ಯಾಹ್ನ ಇರ್ಫಾನ್ ತಹಶೀಲ್ದಾರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಮೃತನ ಸಹೋದರ ಮೈನುುದ್ದೀನ್ ತಹಶೀಲ್ದಾರ್ ನೀಡಿದ ದೂರಿನ ಮೇರೆಗೆ ಃಓಖ ಕಾಯ್ದೆಯ ವಿವಿಧ ಕಲಂಗಳಡಿ (ಪ್ರಕರಣ ಸಂಖ್ಯೆ 179/2026) ಪ್ರಕರಣ ದಾಖಲಾಗಿದೆ. ಪಿಎಸ್‌ಐ ಆನಂದ ಕಾರಕಟ್ಟಿ ತನಿಖೆ ಮುಂದುವರಿಸಿದ್ದಾರೆ.
ದೂರಿನಲ್ಲಿ ಎಂಟು ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ಅವರನ್ನು ನೇರ ಹಲ್ಲೆ ಮತ್ತು ಪ್ರಚೋದನೆ ನೀಡಿದವರು ಎಂದು ವಿಂಗಡಿಸಲಾಗಿದೆ. ನೇರ ಹಲ್ಲೆ ಆರೋಪಿಗಳಾದ ಅಯ್ಯಾಜ್ (ಅಬ್ದುಲ್ರೆಹಮಾನ್ ಮುಲ್ಲಾ), ಮಹಮ್ಮದ್ ವಸೀಮ್ (ಮಹಮ್ಮದ್ ಜಾಫರ್ಸಾಬ್ ಮುಲ್ಲಾ) ಹಾಗೂ ಮಹಮ್ಮದ್ ಸೂಫಿಯಾನ್ (ಜಬೀವುಲ್ಲಾ) ಅವರು ಚಾಕು ಮತ್ತು ಕೊಡಲಿಯಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಚೋದನೆ ಆರೋಪಿಗಳಾಗಿ ಅಬ್ದುಲ್ (ಮೈನುುದ್ದೀನ್ ಆಡೂರ್), ಕಾಂಗ್ರೆಸ್ ಮುಖಂಡ ಹಾಗೂ ಪುರಸಭೆಯ ಮಾಜಿ ಸದಸ್ಯ ಫಿರ್ದೋಸ್ (ಮೈನುುದ್ದೀನ್ ಆಡೂರ್), ಸುಲೇಮಾನ್, ಅತ್ತಾರ್ ಮತ್ತು ಗೌಸ ಸವಣೂರು ಅವರ ಹೆಸರುಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಳೆಯ ವೈಷಮ್ಯವೇ ಕಾರಣ?
ಮೃತ ಇರ್ಫಾನ್ ಹಾಗೂ ಆರೋಪಿಗಳ ನಡುವೆ ಈ ಹಿಂದೆ ಗಲಾಟೆಗಳು ನಡೆದಿದ್ದು, ಪ್ರಕರಣವೊಂದು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು. ಪ್ರಕರಣವನ್ನು ರಾಜಿ ಮಾಡಿಕೊಳ್ಳುವಂತೆ ಆರೋಪಿಗಳು ಇರ್ಫಾನ್ಗೆ ನಿರಂತರ ಒತ್ತಡ ಹೇರುತ್ತಿದ್ದರು ಹಾಗೂ ಕೊಲೆ ಬೆದರಿಕೆಯನ್ನೂ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಹೆಸರು ಕೇಳಿಬಂದಿರುವುದು ಸ್ಥಳೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ 