ಅಂತರ್ಜಲ ಅಭಿವೃದ್ಧಿ, ಸದ್ಭಳಕೆ ಜನಜಾಗೃತಿ ಶಿಬಿರ

ಗದಗ 08: ಅಂತರ್ಜಲ ನಿದರ್ೇಶನಾಲಯ, ಬೆಂಗಳೂರು ಹಾಗೂ ಜಿಲ್ಲಾಅಂತರ್ಜಲ ಕಛೇರಿ, ಗದಗ ಇವರ ವತಿಯಿಂದ ಅಂತರ್ಜಲ ಸದ್ಬಳಕೆ, ಅತೀಬಳಕೆ ನಿಯಂತ್ರಣ ಹಾಗೂ ಅಂತರ್ಜಲ ಅಭಿವೃದ್ಧಿ, ಸದ್ಭಳಕೆ, ಸಂರಕ್ಷಣೆ,  ಮಳೆ ನೀರು ಸಂಗ್ರಹಣೆ, ಮರುಬಳಕೆ,  ಅಂತರ್ಜಲ ಕಲುಷಿತತೆ ತಡೆಗಟ್ಟುವಿಕೆ ಮತ್ತು ತೆರೆದ ತ್ಯಕ್ತ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬೀಳುವ ಅವಘಡಗಳನ್ನು ನಿಯಂತ್ರಿಸುವ ಕುರಿತು ಜನಜಾಗೃತಿ ಶಿಬಿರವು ಗದಗ ತಾಲೂಕಿನ ಹೊಂಬಳದ ಲಿಂಗಪ್ಪ ಶಂಕರಪ್ಪ ಮೈಲಾರ ಸಕರ್ಾರಿ ಫ್ರೌಡಶಾಲೆಯಲ್ಲಿ ಹಾಗೂ ರೋಣ ತಾಲೂಕಿನ ನರೇಗಲ್ನ ಸಕರ್ಾರಿ ಫ್ರೌಡಶಾಲೆಗಳಲ್ಲಿ ದಿ. 04ರಂದು ಜರುಗಿತು.  

ಕಾರ್ಯಕ್ರಮದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯ ಪ್ರಾಧ್ಯಾಪಕರಾದ ಡಾ. ಕೆ. ಲೋಕೇಶ್ ಇವರು ಅಂತರ್ಜಲದ ಬಗ್ಗೆ ಅರಿವು ನೀರಿನ ಸದ್ಬಳಕೆ ಕುರಿತು ಮನವರಿಕೆ ಮತ್ತು ನೀರಿನ ಅತೀ ಬಳಕೆ ನಿಯಂತ್ರಣ ಹಾಗೂ ಅಂತರ್ಜಲ ಅಭಿವೃದ್ಧಿ ಪಡಿಸುವ ಸರಳ ವಿಧಾನಗಳು ಮತ್ತು ಕಲುಷಿತ ನೀರಿನ ಬಗ್ಗೆ ಶಾಲಾ ಮಕ್ಕಳಿಗೆ ಮನಮುಟ್ಟುವಂತೆ ವಿವರಣೆಯನ್ನು ನೀಡಿ, ನೀರಿನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದಾಗ ಅವರು ಮನೆಯಲ್ಲಿ ಪೋಷಕರಿಗೆ ತಿಳಿ ಹೇಳಬೇಕು ಈ ಮೂಲಕ ಪ್ರಾರಂಭಿಕವಾಗಿ ನೀರಿನ ಸಂರಕ್ಷಣೆ ಆಗಬೇಕಿದೆ ಎಂಬುದಾಗಿ ಮಕ್ಕಳಿಗೆ ತಿಳಿಸಿದರು.

ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬಾಗಲಕೋಟೆ ಜಿಲ್ಲೆಯ ಹಿರಿಯ ಭೂವಿಜ್ಞಾನಿ ಶ್ರೀಯುತ ಬಿ, ವ್ಹಿ, ದೇಸಾಯಿ ಇವರು ಅಂತರ್ಜಲ ಅಭಿವೃದ್ಧಿ, ಸದ್ಭಳಕೆ, ಸಂರಕ್ಷಣೆ, ಮಳೆ ನೀರು ಸಂಗ್ರಹಣೆ, ಮರುಬಳಕೆ, ಅಂತರ್ಜಲ ಕಲುಷಿತತೆ ತಡೆಗಟ್ಟುವಿಕೆ ಮತ್ತು ಚಿಕ್ಕಮಕ್ಕಳು ಯಾವ ರೀತಿಯಲ್ಲಿ ತ್ಯಕ್ತ ಬಾವಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂಬುದನ್ನು ಅದರಿಂದ ಚಿಕ್ಕಮಕ್ಕಳು ಬೀಳದಂತೆ ನಿಯಂತ್ರಿಸುವ ಕುರಿತು  ವಿವರಣೆ ನೀಡಿದರು. 

ಸದರಿ ಶಿಬಿರದಲ್ಲಿ ಲಿಂಗಪ್ಪ ಶಂಕರಪ್ಪ ಮೈಲಾರ ಸಕರ್ಾರಿ ಫ್ರೌಡಶಾಲೆಯ ಮುಖ್ಯೋಪಾಧ್ಯಾಯರು ಟಿ ಹೆಚ್ ಹಂಚಿನಾಳ, ಸದರಿ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು ಹಾಗೂ ಶಾಲಾ ಭೂದಾನಿಗಳಾದ ಹೇಮರಡ್ಡಿ, ಹೈತಾಪುರ, ನರೇಗಲ್ನ ಸಕರ್ಾರಿ ಫ್ರೌಡಶಾಲೆಯ ಶಾಲಾ ಮುಖ್ಯೋಪಾಧ್ಯಾಯರು ಎಸ್ ಬಿ ನಿಡಗುಂದಿ, ಜಗದೀಶ್ ಸಂಕನಗೌಡರ, ಕೃಷಿಕರು, ನರೇಗಲ್ ಮತ್ತು ಸಂತೋಷ ಪ್ಯಾಟಿಗಾಣಗೇರ ಹಿರಿಯ ಭೂವಿಜ್ಙಾನಿಗಳು ಜಿಲ್ಲಾ ಅಂತರ್ಜಲ ಕಛೇರಿ ಗದಗ ಇವರು ಉಪಸ್ಥಿತರಿದ್ದರು.