ಬಸವೇಶ್ವರ ದೇವಸ್ಥಾನದ ಮಂಗಲ ಭವನ ಹಾಗೂ ದಾಸೋಹ ಭವನ ನಿರ್ಮಾಣಕ್ಕೆ ಭೂಮಿಪೂಜೆ
Groundbreaking ceremony for the construction of Mangala Bhavan and Dasoha Bhavan of Basaveshwara Tem
ಹಾನಗಲ್ 28: ನಮ್ಮೊಳಗಿನ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು, ವೈಮನಸ್ಸುದೂರ ಮಾಡಬೇಕಿದೆ. ಎಲ್ಲರೂಒಂದುಎನ್ನುವ ಭಾವದಿಂದ ಸ್ವಸ್ಥ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಹೊಂಬಳಿ ಗ್ರಾಮದಲ್ಲಿ ರಾಮಲಿಂಗ ಬಸವೇಶ್ವರದೇವಸ್ಥಾನದ ಮಂಗಲ ಭವನ ಹಾಗೂ ದಾಸೋಹ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಆಧುನಿಕತೆ ಪ್ರತಿಯೊಂದುಕ್ಷೇತ್ರಕ್ಕೂಕಾಲಿಟ್ಟಿದೆ. ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಆದರೂಕೂಡ ನಾವೆಲ್ಲರೂ ಭಗವಂತನಲ್ಲಿ ಭಕ್ತಿ, ಶ್ರದ್ಧೆ, ನಂಬಿಕೆ ಹೊಂದಿದ್ದೇವೆ. ಸೃಷ್ಟಿಯ ಮುನಿಸಿನಿಂದ ಕಳೆದ ಹಲವು ವರ್ಷಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ರೈತನ ಬದುಕುಚಿಂತಾಜನಕವಾಗಿದೆ.ಇಂಥ ಸಂದಿಗ್ಧ ಸನ್ನಿವೇಶದಲ್ಲಿಬೇಧ, ಭಾವ ಮಾಡದೇಜೊತೆಗೂಡಿ ಹೆಜ್ಜೆ ಹಾಕುವ ದೃಢಸಂಕಲ್ಪ ಮಾಡಬೇಕಿದೆಎಂದು ಹೇಳಿದ ಅವರುಸಮುದಾಯ ಭವನಕ್ಕೆ 10 ಲಕ್ಷರೂ.,ಗ್ರಾಮದರಸ್ತೆ ಸುಧಾರಣೆಗೆ 15 ಲಕ್ಷರೂ. ಹಾಗೂ ರಾಮಲಿಂಗೇಶ್ವರದೇವಸ್ಥಾನಜೀರ್ಣೋದ್ಧಾರಕ್ಕೆ 5 ಲಕ್ಷರೂ. ಅನುದಾನದೊರಕಿಸಲಾಗಿದೆಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಕೂಡಲದಗುರುನಂಜೇಶ್ವರ ಮಠದಗುರುಮಹೇಶ್ವರ ಸ್ವಾಮೀಜಿ, ಹೇರೂರಿನಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿಭೌತಿಕವಾದುದನ್ನು ಹಾಳು ಮಾಡಬಹುದು.ಭಕ್ತಿಯ ಮನಸ್ಸನ್ನು ನಾಶ ಪಡಿಸುವುದು ಎಂದಿಗೂ ಸಾಧ್ಯವಿಲ್ಲ. ಮನಸ್ಸೇ ಮಂದಿರಎನ್ನುತ್ತೇವೆ. ಧಾರ್ಮಿಕ ಸಂಸ್ಕಾರಗಳು ಮನಸ್ಸಿನಲ್ಲಿ ಭಕ್ತಿಯನ್ನು ಶಾಶ್ವತಗೊಳಿಸುತ್ತವೆ. ಭಾರತ ಭಕ್ತಿ ಪ್ರಧಾನದೇಶ. ಧಾರ್ಮಿಕ ಕ್ರಿಯಾದಿಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಪ್ರಕೃತಿ ಹಾಗೂ ದೇವರನ್ನು ಸಮನಾಗಿ ಕಂಡ ನಾಡುಇದಾಗಿದೆ. ಧರ್ಮ ಸಂಸ್ಕಾರಗಳನ್ನು ಅಳವಡಿಸಿಕೊಂಡು ಎಲ್ಲರೂಒಂದಾಗಿ ಬದುಕಲು ದೇವಸ್ಥಾನಗಳು ಸಹಕಾರಿಯಾಗಿವೆ. ಜಾತಿ, ಮತ ಮೀರಿದದೇವರ ಮೇಲಿನ ಭಕ್ತಿಎಲ್ಲ ಕಾಲಕ್ಕೂ ತನ್ನದೇಆದ ಮಹತ್ವ ಹೊಂದಿದೆಎಂದರು.
ಮಾರನಬೀಡ ಗ್ರಾಪಂ ಉಪಾಧ್ಯಕ್ಷೆ ನಗೀನಾ ಹರವಿ, ಬಗರ್ ಹುಕುಂ ಸಮಿತಿಅಧ್ಯಕ್ಷ ಪುಟ್ಟಪ್ಪ ನರೇಗಲ್, ಮುಖಂಡರಾದಟಾಕನಗೌಡ ಪಾಟೀಲ, ಮಂಜುಗೊರಣ್ಣನವರ, ಈರಣ್ಣ ಬೈಲವಾಳ, ಆದರ್ಶ ಶೆಟ್ಟಿ, ಗನಿ ಪಟೇಲ್, ಭರಮಣ್ಣ ಶಿವೂರ, ಎಂ.ಎ.ನೆಗಳೂರ, ಕುಮಾರಣ್ಣ ಮಿರ್ಜಿ, ಬಸಪ್ಪಚನ್ನಕ್ಕನವರ, ಬಸವರಾಜಖೇಮಾಜಿ, ಬಸವರಾಜ ಬೆಡಗಿ, ಯಲ್ಲಪ್ಪ ಹಾನಗಲ್,ಸಿದ್ದಪ್ಪ ಚೆಂಗಳಮ್ಮನವರ, ಮಹಲಿಂಗಪ್ಪ ಹಾದಿ, ಶಂಕರಗೌಡ ಪಾಟೀಲ ಸೇರಿದಂತೆಇನ್ನೂ ಹಲವರುಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 