ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ  Groundbreaking ceremony for construction of bus passenger shelter

ಬೆಳಗಾವಿ 24: ಬೆಳಗಾವಿ ಮಹಾನಗರ  ವ್ಯಾಪ್ತಿಯ ಸಮೀಪದಲ್ಲಿರುವ ಗ್ರಾಮೀಣ ಪ್ರದೇಶ ಜನ ಸಮಾನ್ಯರು ತಮ್ಮ ಅಗತ್ಯಗಳ ಖರೀದಿಗಾಗಿ ಬೆಳಗಾವಿ ನಗರ ಪ್ರದೇಶಕ್ಕೆ ಬರಬೇಕಾಗುತ್ತದೆ. ಅಂತವರು ಬಸ್ ನ್ನು ಆಶ್ರಯ ಮಾಡುತ್ತಾರೆ ಹೀಗಾಗಿ ಬಸ್ ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ತಂಗುದಾಣಗಳನ್ನು ನಿರ್ಮಾಣ ಮಾಡುವ ಮೂಲಕ ಜನ ಸಾಮಾನ್ಯರ ನೆರವಿಗೆ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯನ್ನು ಸದುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. 

ಸೋಮವಾರ ನ-24 ರಂದು ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಬೆಕ್ಕಿನಕೇರಿ, ಬೆಳಗುಂದಿ ಹಾಗೂ ಸಾವಗಾಂವ ಗ್ರಾಮಗಳಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ  ಯೋಜನೆಯಡಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು. 

ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಲ್ಲಿ ಈಗಾಗಲೇ ಕುಕಡೊಳ್ಳಿ ಗ್ರಾಮದಲ್ಲಿ ಗರಡಿ ಮನೆ (ವ್ಯಾಯಾಮ ಶಾಲೆ) ನಿರ್ಮಾಣಕ್ಕೆ 10 ಲಕ್ಷ ರೂ, ನಂದಿಹಳ್ಳಿ ಗ್ರಾಮದ ವಿಠ್ಠಲ್ ಬೀರದೇವ್ ದೇವಸ್ತಾನದ ಹತ್ತಿರ  ಸಮುದಾಯ ಭವನ ನಿರ್ಮಾಣಕ್ಕೆ 05 ಲಕ್ಷ ರೂ, ಅತಿವಾಡ ಗ್ರಾಮದ ಸರಕಾರಿ ಮರಾಠ ಶಾಲೆಯ ಹತ್ತಿರ ವ್ಯಾಯಾಮ ಶಾಲೆ ಕಟ್ಟಡ ನಿರ್ಮಾಣಕ್ಕೆ 05 ಲಕ್ಷ ರೂ, ಶಿಂದೋಳ್ಳಿ ಗ್ರಾಮದಲ್ಲಿ ಸಾಂಸ್ಕೃತಿ ಭವನ ನಿರ್ಮಾಣಕ್ಕೆ 05 ಲಕ್ಷ ರೂ, ಬಾಳೇಕುಂದ್ರಿ ಕೆ.ಎಚ್‌. ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 05 ಲಕ್ಷ ರೂ, ಕುಕಡೊಳ್ಳಿ ಗ್ರಾಮದ ಗ್ರಾಮ ಪಂಚಾಯತ ಆವರಣದಲ್ಲಿ ಫೇವರ್ಸ್‌ ಅಳವಡಿಕೆಗೆ 05 ಲಕ್ಷ ರೂ, ನಾಗೇನಹಟ್ಟಿ ಗಾಮದಲ್ಲಿ ಬಸ್ ಪ್ರಯಾಣಿಕರ ತಂಗುದಾಣಕ್ಕೆ 5 ಲಕ್ಷ ರೂ, ಕಲ್ಲೆಹೊಳ ಗಾಮದಲ್ಲಿ ಬಸ್ ಪ್ರಯಾಣಿಕರ ತಂಗುದಾಣಕ್ಕೆ 5 ಲಕ್ಷ ರೂ, ಬೆಕ್ಕಿನಕೇರಿ ಗಾಮದಲ್ಲಿ ಬಸ್ ಪ್ರಯಾಣಿಕರ ತಂಗುದಾಣಕ್ಕೆ 5 ಲಕ್ಷ ರೂ, ಬೆಳಗುಂದಿ ಗಾಮದಲ್ಲಿ ಬಸ್ ಪ್ರಯಾಣಿಕರ ತಂಗುದಾಣಕ್ಕೆ 5 ಲಕ್ಷ ರೂ, ಸಾವಗಾಂವ ಗಾಮದಲ್ಲಿ ಬಸ್ ಪ್ರಯಾಣಿಕರ ತಂಗುದಾಣಕ್ಕೆ 5 ಲಕ್ಷ ರೂ, ಒಟ್ಟು ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಲ್ಲಿ 60 ಲಕ್ಷ ರೂ.ಗಳ ಅನುದಾನವನ್ನು ನೀಡಿದ್ದೇನೆ. ನನ್ನ ಸೇವಾಧಿಯಲ್ಲಿ ಎಷ್ಟು ಸಾಧ್ಯವೊ ಅಷ್ಟು ಜನರಿಗೆ ರಾಜ್ಯಸಭಾ ಸಂಸದರ ಅನುದಾನವನ್ನು ಮುಟ್ಟಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು. 

ಬೆಕ್ಕಿನಕೇರಿ ಗ್ರಾ.ಪಂ ಅಧ್ಯಕ್ಷ ಚಬ್ಬುಬಾಯಿ ಕಾಂಬಳೆ, ಲಕ್ಷ್ಮೀ ಸಾವಂತ, ಧನಂಜಯ ಜಾಧವ, ಸನತಕುಮಾರ ಪಾಟೀಲ, ಸುರೇಶ ಸಾವಂತ, ಅರ್ಜುನ ಡೋಮಲೆ, ರಾಜು ಸಾವಂತ, ಭರಮಾ ಹೊರಕೇರಿ, ಬಾಹುಕು ಸಾವಂತ, ಲಕ್ಷ್ಮೀ ಗಾವಡೆ, ಬೆಳಗುಂದಿ ಗ್ರಾ.ಪಂ ಅಧ್ಯಕ್ಷ ಪ್ರತಾಪ ಸುತಾರ,  ಚಂಗಪ್ಪ ಪಾಟೀಲ, ನಾನಾ ಕಂಗ್ರಾಳಕರ, ಸೂರ್ಯಕಾಂತ ಚೌಗಲೆ, ಮನೋಜ ಬಿಡಗಿಕರ, ಶಂಕರ ಶಹಾಪೂರಕರ, ಸಂತೋಷ ಬೆಳಗಾಂವಕರ, ಸಾವಗಾಂವ ಗ್ರಾ.ಪಂ ಅಧ್ಯಕ್ಷ ಡಾ. ಯಲ್ಲಪ್ಪ ಪಾಟೀಲ, ಸನತಕುಮಾರ ಪಾಟೀಲ, ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಯುವರಾಜ ಜಾಧವ,  ಧನಂಜಯ ಜಾಧವ,  ಚೇತನ ಪಾಟೀಲ, ಕಲ್ಲಪ್ಪ ಪಾಟೀಲ, ಸಂಗೀತಾ ಬಾನೇಕರ, ಕಲ್ಲಪ್ಪ ಪಾಟೀಲ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.