ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ
Groundbreaking ceremony for CC road work
ಯರಗಟ್ಟಿ 02 : ಸಮೀಪದ ಕೊರಕೊಪ್ಪ ಗ್ರಾಮದಲ್ಲಿ 45.50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿಶ್ವಾಸ ವೈದ್ಯ, ಗ್ರಾಮದಲ್ಲಿ ರಸ್ತೆ ಸಂಪರ್ಕ ಸುಧಾರಿಸುವ ಹಾಗೂ ಗ್ರಾಮಸ್ಥರ ಸಂಚಾರಕ್ಕೆ ಸುಸಜ್ಜಿತ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗ, ಸವದತ್ತಿ ಇದರ ಅನುಷ್ಠಾನ ಏಜೆನ್ಸಿಯಾಗಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಕಾರ್ಯಕ್ರಮದಲ್ಲಿ ರೇವಣಸಿದ್ದೇಶ್ವರ ಸ್ವಾಮೀಜಿ, ಬೆಮೂಲ್ ನಿರ್ದೇಶಕ ಶಂಕರ ಇಟ್ಟಣ್ಣವರ, ತಾ.ಪಂ. ಇಒ ಬಸವರಾಜ ಅಯ್ಯನಗೌಡರ, ಪಿಡಿಒ ಎಸ್.ಎಸ್. ಮುಲ್ಲಾ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಂ.ಬಿ. ಕುರಿ, ದ್ವಿತೀಯ ಲೆಕ್ಕ ಸಹಾಯಕ ಎಲ್.ಯು. ಮಾದರ, ಪಿಕೆಪಿಎಸ್ ಅಧ್ಯಕ್ಷ ವೆಂಕಣ್ಣ ಕಳ್ಳಿಗುದ್ದಿ ಸೇರಿದಂತೆ ಮಹಾಂತೇಶ ಕೊಟ್ರಶೆಟ್ಟಿ, ಬಸನಗೌಡ ಪಾಟೀಲ, ಸುರೇಶ ಸನಿಗಣ್ಣವರ, ಬಸವಂತಗೌಡ ಗೌಡರ, ಬಿ.ಆರ್. ಪಾಟೀಲ, ಸಿದ್ದಪ್ಪ ಕುರಿ, ಸಿದ್ರಾಮಪ್ಪ ಇಟಗೌಡರ, ಬಸವರಾಜ ತೋರಗಲ, ವೀರ್ಪ ಬಡಿಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 