ಕ್ರಿಸ್ತ ಜಯಂತಿಗೆ ನಾಡಿನ ಗಣ್ಯರ ಶುಭಾಶಯ

ಬೆಂಗಳೂರು, ಡಿ. 25 ಕ್ರಿಸ್ತ ಜಯಂತಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವಿಪಕ್ಷ ನಾಯಕ  ಸಿದ್ದರಾಮಯ್ಯ, ಸಂಸದ ಪ್ರಜ್ವಲ್‌ ರೇವಣ್ಣ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ.ಏಸುಕ್ರಿಸ್ತನ ಸಹನೆ,ತಾಳ್ಮೆ, ಕ್ಷಮಾಗುಣಗಳು ನಮ್ಮೆಲ್ಲರಲ್ಲಿ ಮೇಳೈಸಲಿ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಶುಭಕೋರಿದ್ದಾರೆ. ಶುಭಕೋರಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ನಾವೆಲ್ಲರೂ ಈ ಕ್ರಿಸ್‌ಮಸ್‌ನಲ್ಲಿ ಮಾನವೀಯತೆಗಾಗಿ ಸೇವೆಯ ಉತ್ಸಾಹವನ್ನು ಆಚರಿಸೋಣ. ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.ಕ್ರಿಸ್ಮಸ್ ಹಬ್ಬಕ್ಕೆ ಶುಭಕೋರಿದ ಸಂಸದ  ಪ್ರಜ್ವಲ್ ರೇವಣ್ಣ, ಎಲ್ಲರನ್ನು ಪ್ರೀತಿಸು, ಎಲ್ಲರನ್ನು ಕ್ಷಮಿಸು. ಸ್ನೇಹ, ಸಹಬಾಳ್ವೆಯೇ  ಬದುಕಿನ ಉಸಿರು ಎಂದು ಸರಳ ಜೀವನ ಸಂದೇಶ ಸಾರಿದ ಏಸುಕ್ರಿಸ್ತರ ಜನ್ಮದಿನವಾದ ಇಂದು  ನಾಡಿನ ಸಮಸ್ತ ಜನತೆಗೆ ಸಡಗರದ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.ಈ ಕ್ರಿಸ್ಮಸ್ ಹಬ್ಬವು ತಮ್ಮೆಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ತರಲೆಂದು ಪ್ರಾರ್ಥಿಸುವುದಾಗಿ‌ ಪ್ರಜ್ವಲ್ ಹೇಳಿದ್ದಾರೆ.