ಅಜ್ಜ-ಅಜ್ಜಿಯರ ದಿನಾಚರಣೆ

ಲೋಕದರ್ಶನವರದಿ

ರಬಕವಿ-ಬನಹಟ್ಟಿ08 : ನಗರದ ಪದ್ಮಾವತಿ ಇಂಟರನ್ಯಾಷನಲ್ ಶಾಲೆಯಲ್ಲಿ ಅಜ್ಜ-ಅಜ್ಜಿಯರ ದಿನಾಚರಣೆಯನ್ನು ಅತಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬನಹಟ್ಟಿಯ ಎಸ್.ಟಿ.ಸಿ ಕಲಾ ಮತ್ತು ವಾಣಿಜ್ಯ ವಿಭಾಗದ ನಿವೃತ್ತ ಪ್ರಾಚಾರ್ಯರಾದ ಡಾ.ಸುರೇಶ ಬಿ.ಸುಗಮದ ಮತ್ತು ಮಹಾಲಿಂಗಪುರದ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಬಸಪ್ಪ ಅ. ಬಂತಿಯವರು ಆಗಮಿಸಿದ್ದರು.

ಡಾ. ಸುರೇಶ ಬಿ. ಸುಗಮದಯವರು ಸನ್ಮಾನ ಸ್ವೀಕರಿಸಿ ಮಾತನಾಡಿ "ಇಂದಿನ ದಿನಮಾನಗಳಲ್ಲಿ ಯುವ ಪೀಳಿಗೆ ಸಮಾಜದ್ರೋಹಿಗಳಾಗುತ್ತಿದ್ದಾರೆ. ಇದಕ್ಕೆ ಕಾರಣ ಕುಟುಂಬದಲ್ಲಿ ಅವರಿಗೆ ಹಿರಿಯರಿಂದ ದೊರೆಯಬೇಕಾದ ಪ್ರೀತಿ ಮತ್ತು ಮಾರ್ಗದರ್ಶನ ಕೊರತೆ ಎಂದರಲ್ಲದೆ, ಮಕ್ಕಳನ್ನು ಅಜ್ಜ-ಅಜ್ಜಿಯರ ಜೊತೆ ಬೆರೆಯಲು ಬಿಟ್ಟು ಅವರೊಂದಿಗೆ ರಸ ಕ್ಷಣಗಳನ್ನು ಹಂಚಿಕೊಂಡಲ್ಲಿ ಉತ್ತಮ ಯುವಕರು ರೂಪುಗೊಳ್ಳುತ್ತಾರೆ" ಎಂದರು.

ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಾತೋಶ್ರೀ ಪದ್ಮಾವತಿ ವಿ. ಹಜಾರೆ, ಆಡಳಿತಾಧಿಕಾರಿಗಳಾದ ಭಾರತಿ ತಾಳಿಕೋಟೆ ಹಾಗೂ ಪ್ರಾಂಶುಪಾಲರಾದ ಬಸವರಾಜ ಕಲಾದಗಿ ಉಪಸ್ಥಿತರಿದ್ದರು. ಸಸಿಗೆ ನೀರುಣಿಸುವ ಮೂಲಕ ಚಾಲನೆಗೊಂಡ ಕಾರ್ಯಕ್ರಮದಲ್ಲಿ ಕೆ ಜಿ ವಿಭಾಗದ ಹಿರಿಯ ಪಾಲಕಚಿರಿಗೆ ಹುಮೇರಾ ಸಾಂಗ್ಲಿಕರ ನೇತೃತ್ವದಲ್ಲಿ ಮೋಜಿನ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು. ರೇಶ್ಮಾ ಗುಣಕಿ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.