ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಶಾಲೆಯಲ್ಲಿ ಅದ್ದೂರಿ ರಾಜ್ಯೋತ್ಸವ, ದೀಪಾವಳಿ ಸಂಭ್ರಮ
Grand Rajyotsava, Diwali celebrations at St. Francis of Assisi School
ಚಿಕ್ಕೋಡಿ, 04 : ವಿದ್ಯಾರ್ಥಿಗಳು ಕೇವಲ ಪಾಠಗಳಲ್ಲಿ ಮಾತ್ರವಲ್ಲ, ಮೌಲ್ಯಗಳಲ್ಲಿ ಕೂಡಾ ಮುಂಚೂಣಿಯಲ್ಲಿರಬೇಕು ಎಂದು ಚಿಕ್ಕೋಡಿಯ ಡಿ.ಎಸ್.ಪಿ. ಗೋಪಾಲಕೃಷ್ಣ ಗೌಡರ ಹೇಳಿದರು. ಇಲ್ಲಿಯ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಶಾಲೆಯಲ್ಲಿ ದೀಪಾವಳಿ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಸ್ಸಿಸಿ ಶಾಲೆ ಉತ್ತಮ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಬೆಳವಣಿಗೆಗೂ ಆದ್ಯತೆ ನೀಡುತ್ತಿದೆ. ಪಾಲಕರು ಮಕ್ಕಳ ವಿದ್ಯಾಭ್ಯಾಸದಲ್ಲಿ ಸಕ್ರಿಯ ಸಹಕಾರ ನೀಡಿದರೆ, ಈ ವಿದ್ಯಾರ್ಥಿಗಳು ನಾಳೆಯ ನಾಯಕರು ಆಗಬಹುದು ಎಂದು ಶ್ಲಾಘಿಸಿದರು.ರಾಜಸ್ಥಾನದಿಂದ ಆಗಮಿಸಿದ್ದ ಸಮಾಜ ಸೇವಕಿಯರಾದ ಎಂಟು ಮಂದಿ ಸಿಸ್ಟರ್ಸ್‌ಗಳು ಮತ್ತು ಶಾಲೆಯ ಪ್ರಾಂಶುಪಾಲ ಫಾದರ್ ಜೇಸನ್ ಫನಾಂರ್ಡಿಸ್ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ನಾಡಗೀತೆ ಹಾಡಿ, ಪ್ರಾರ್ಥನಾ ನೃತ್ಯ ಪ್ರದರ್ಶಿಸಿದರು. ನಂತರ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು.ಪಿ.ಎಸ್.ಐ. ಬಸಗೌಡ ನೇರ್ಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಶಾಲೆಯ ಸಾಧಕರನ್ನು ಗೌರವಿಸಿದರು. ರಾಜ್ಯೋತ್ಸವ ಸಮಿತಿಯು ಆಯೋಜಿಸಿದ್ದ “ಸ್ತಬ್ಧ ಚಿತ್ರ ಪ್ರದರ್ಶನ”ದಲ್ಲಿ ಅಸ್ಸಿಸಿ ಶಾಲೆಯ “ಮೈಸೂರು ದಸರಾ ವೈಭವ” ಪ್ರದರ್ಶನ ಪ್ರಥಮ ಬಹುಮಾನ ಗಳಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ, ಕಲಾಭಾರತಿ ಚೈಲ್ಡ್ ಆರ್ಟ್ ಇನ್ಸ್ಟಿಟ್ಯೂಟ್, ಮಹಾರಾಷ್ಟ್ರ ಆಯೋಜಿಸಿದ್ದ ರಾಷ್ಟ್ರೀಯ ಚಿತ್ರಕಲೆ ಸ್ಪರ್ಧೆಯಲ್ಲಿ ಮೂರನೇ ತರಗತಿಯ ಕುಮಾರ ಅಶಿತೋಷ ಹೊಳೆಪ್ಪನವರಿಗೆ ದೊರೆತ 25 ಗ್ರಾಂ ಶುದ್ಧ ಬೆಳ್ಳಿಯ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಗೌಡರ ಅವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಫಾದರ್ ಸ್ಟೆನಿಸ್ ಲೋಪಿಸ್, ವಿಮುಕ್ತಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕ ಫಾದರ್ ವಿನ್ಸೆಂಟ್ ಡಿಸೋಜ, ಶಿಕ್ಷಕ-ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 