ಅಂಬಿಗರ ಚೌಡಯ್ಯನವರ ನೂತನ ಪಲ್ಲಕ್ಕಿ ಮೆರವಣಿಗೆ

ಅಂಬಿಗರ ಚೌಡಯ್ಯನವರ ನೂತನ ಪಲ್ಲಕ್ಕಿ ಮೆರವಣಿಗೆ Grand Procession of New Ambigar Choudaia Palanquin

ತಾಳಿಕೋಟೆ, ಆ. 18: ಪಟ್ಟಣದ ಅಂಬಿಗರ ಚೌಡಯ್ಯನವರ ನೂತನವಾಗಿ ನಿರ್ಮಿಸಲಾದ ಪಲ್ಲಕ್ಕಿಯ ಭವ್ಯ ಮೆರವಣಿಗೆಯು ಸೋಮವಾರ ಭಕ್ತಿ ಹಾಗೂ ಶ್ರದ್ಧೆಯಿಂದ ನಡೆಯಿತು.

ಸಮಾಜದ ದಾನಿಗಳಾದ ಶಾಂತಾಬಾಯಿ ಹಾಗೂ ಅಯ್ಯಪ್ಪ ಬಸವಂತಪುರ ದಂಪತಿ ಕೊಡುಗೆಯಾಗಿ ನೀಡಿದ ಪಲ್ಲಕ್ಕಿಯನ್ನು ಹುಣಸಗಿ ರಸ್ತೆಯಲ್ಲಿರುವ ಕಲಾವಿದ ಲಕ್ಷ್ಮೀಕಾಂತ ಬಡಿಗೇರ ಬಿಳೇಭಾವಿ ಅವರು ನಿರ್ಮಿಸಿದ್ದಾರೆ.

ಪಲ್ಲಕ್ಕಿಯ ಮೆರವಣಿಗೆಯು ಹುಣಸಗಿ ರಸ್ತೆಯಿಂದ ಆರಂಭಗೊಂಡು ಡಾ. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಸಾಗಿ ಅಂಬಿಗರ ಚೌಡಯ್ಯನವರ ಸಮುದಾಯ ಭವನವನ್ನು ತಲುಪಿತು. ಬಳಿಕ ಪಲ್ಲಕ್ಕಿ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಾದ ಶಾಂತಾಬಾಯಿ ಹಾಗೂ ಅಯ್ಯಪ್ಪ ಬಸವಂತಪುರ ದಂಪತಿಯನ್ನು ಸಮಾಜದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪರಶುರಾಮ ತಂಗಡಗಿ, ನಗರ ಘಟಕದ ಅಧ್ಯಕ್ಷ ರಮೇಶ ಮೂಕಿಹಾಳ, ಶಶಿ ಮೂಕಿಹಾಳ, ಭೀಮಾಶಂಕರ ಅಂಬಿಗೇರ, ಮಲ್ಲು ರುದ್ರಪ್ಪ ನಾಯ್ಕೋಡಿ, ಮಲ್ಲು ಅಸ್ಕಿ, ಅಶೋಕ ಮೂಕಿಹಾಳ, ಕೃಷ್ಣಾ ಹದಗಲ್ಲ, ಈಶ್ವರ ನಾಯ್ಕೋಡಿ, ಬಸವರಾಜ ಯಡಹಳ್ಳಿ, ಮಲ್ಲಿಕಾರ್ಜುನ ಯಡಹಳ್ಳಿ, ಕಾಶಿನಾಥ ಮದರಿ, ಮಾಣಪ್ಪ ನಾಯ್ಕೋಡಿ, ತೋಟಪ್ಪ ಏವೂರ, ರೇವಪ್ಪ ಕಲ್ಲೂರ, ಭೀಮಣ್ಣ ತಳವಾರ, ಮಲ್ಲು ರಾಮಪ್ಪ ನಾಯ್ಕೋಡಿ, ಚಂದ್ರು ಗೊರಗುಂಡಗಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.