ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ವರ್ಗವಾರು ಮೀಸಲಾತಿಯನ್ನು ನಿಗದಿ


ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ  ವರ್ಗವಾರು  ಮೀಸಲಾತಿಯನ್ನು ನಿಗದಿ


ಕಾರವಾರ.ಜ. 17 : ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ  ವರ್ಗವಾರು  ಮೀಸಲಾತಿಯನ್ನು ನಿಗದಿಪಡಿಸಲು ವೇಳಾಪಟ್ಟಿಯನ್ನು ನಿಗದಿಪಡಿಸಿದೆ. ಅದರಂತೆ ಆಯಾ ತಾಲ್ಲೂಕಿಗೆ ಭೇಟಿಮಾಡಿ  ಗ್ರಾಮ ಪಂಚಾಯತಿಗೆ ಆಯ್ಕೆಯಾದ ಸದಸ್ಯರ ಸಮಕ್ಷಮದಲ್ಲಿ ಚುನಾವಣಾ ಆಯೋಗ ನಿರ್ದೇಶಿಸಿದ software ನ್ನು ಬಳಸಿ ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು.  Softwareನಲ್ಲಿಯೇ ಲಾಟರಿ ಎತ್ತಲು ತಿಳಿಸಿದ ಪ್ರಕರಣಗಳಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಎದುರಲ್ಲಿ ಲಾಟರಿ ಎತ್ತಲಾಗುವದು. ಆದ್ದರಿಂದ ಯಾರೂ ಊಹಾಪೋಹಗಳಿಗೆ ಒಳಗಾಗಬಾರದು ಎಂದು ತಿಳಿಸಿದೆ. ನಿಗಧಿ ಪಡಿಸಿದ ದಿನದಂದು ಅಯಾ ತಾಲ್ಲೂಕಿನಲ್ಲಿ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರು ಹಾಜರಾಗಲು ಕೋರಿದೆ.
ಎಲ್ಲಾ EOs and PDOs ಆಯ್ಕೆಯಾದ ಸದಸ್ಯರುಗಳಿಗೆ ತಿಳುವಳಿಕೆಯನ್ನು ನೀಡಿ ಆ ದಿನದಂದು ಸದಸ್ಯರು ಹಾಜರಾಗಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ..
ಕೋವಿದ್ ಸಂಬಂಧ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತಹಸೀಲ್ದಾರರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ ರವರು ಕೈಗೊಳ್ಳಲು ಸೂಚಿಸಿದೆ ಮತ್ತು ಆ ದಿನದಂದು ಪೋಲಿಸ್ ಇಲಾಖೆಯ ಅಧಿಕಾರಿಗಳು ಸಭೆ ನಡೆಯುವ ಸ್ಥಳದಲ್ಲಿ  ಕಾನೂನು ಸುವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಸೂಚನೆ ನೀಡಲಾಗಿದೆ.. ಯಾರಾದರೂ ಶಾಂತತೆ ಭಂಗ ಮಾಡಿದ್ದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು  ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ರವರು ತಿಳಿಸಿದ್ದಾರೆ..