ಬಿಸಿ ತುಪ್ಪವಾದ ಗ್ರಹಲಕ್ಷ್ಮೀ ಗ್ಯಾರಂಟಿ ಯೋಜನೆ : ರಾಘವೇಂದ್ರ ಪಾಲನಕರ ವಿಷಾದ
Grahalakshmi Guarantee Scheme is a hot mess: Raghavendra Palanak regrets
ಗದಗ 02: ರಾಜ್ಯದಲ್ಲಿ ಬಡತನ ರೇಖೆಯಲ್ಲಿರುವ ನಾಗರಿಕ ಬಂಧುಗಳಿಗೆ ಆರ್ಥಿಕವಾಗಿ ನೆರವುದಾಯಕವಾಗಲು ಆಡಳಿತಾರೋಢ ಘನ್ ರಾಜ್ಯ ಸರಕಾರದಿಂದ ಐತಿಹಾಸಿಕ ಪಂಚ ಗ್ಯಾರಂಟಿ ಯೋಜನೆಗಳಾದ ಗ್ರಹ ಲಕ್ಸ್ಮಿ ಯೋಜನೆ, ಅನ್ನಭಾಗ್ಯ ಯೋಜನೆ, ಗ್ರಹ ಜ್ಯೋತಿ ಯೋಜನೆ, ಯುವ ನಿಧಿ ಯೋಜನೆ ಹಾಗೂ ಶಕ್ತಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಮಸ್ತ ರಾಜ್ಯದ ಮಹಿಳೆಯರಿಗೆ ಆಶಾದಾಯಕವಾಗಿ ಒಂದು ವಿನೂತನ ನೈತಿಕ ಬೆಂಬಲ ನೀಡಿ ಆರ್ಥಿಕ ಸಬಲೀಕರಣಕ್ಕೆ ನೆರವುದಾಯಕವಾಗಿತ್ತು.
ಆದರೆ ಮೊದಲನೆಯದಾಗಿ ಗ್ರಹಲಕ್ಷ್ಮೀ ಪಂಚ ಗ್ಯಾರಂಟಿ ಯೋಜನೆಯ ಮಾಸಿಕ 2000/- ಹಣ, ಪ್ರತಿ ತಿಂಗಳು ನಿರಂತರ ನಿಗದಿತ ಸಮಯದಲ್ಲಿ ಪಾವತಿಯಾಗದೇ ಇರುವುದು ಇದರಿಂದ ಗ್ರಹ ಲಕ್ಷ್ಮೀ ಹಣವನ್ನೇ ನಂಬಿಕೊಂಡಿರುವ ಗ್ರಹಿಣಿಯರು ಆರ್ಥಿಕ ಮುಗ್ಗಟ್ಟನ್ನು ಎದುರಿಸುವಂತಾಗಿದೆ. ಅದರಂತೆ ಇನ್ನೂ ವಿವಿಧ ತಾಂತ್ರಿಕ ತೊಂದರೆಗಳಿಂದಾಗಿ ಗ್ರಹಲಕ್ಹ್ಮೀ ಯೋಜನೆಯಿಂದ ವಂಚಿತರಾಗಿರುವರು.
ಜಿ ಎಸ್ ಟಿ ಅಡಕ ಹಾಗೂ ಕಂದಾಯ ಇಲಾಖೆಯಿಂದ ನೀಡಲಾದ ಆದಾಯ ಪ್ರಮಾಣ ಪತ್ರ:- ಜನಸಾಮಾನ್ಯರು ತಮ್ಮ ಮಕ್ಕಳ ಸೈಕ್ಷಣಿಕ ವಿದ್ಯಾಭ್ಯಾಸದ ಸಲುವಾಗಿ ಹಾಗೂ ವಿವಿಧ ಸರಕಾರಿ ಯೋಜನೆಗಳ ಸದುಪಯೋಗ ಪಡೆಯಲು ಅಗತ್ಯವಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಮುಂದಾದರೆ ಕಂದಾಯ ಅಧಿಕಾರಿಗಳು ನೀಡುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳಲ್ಲಿ ಕಾಣಿಸಲಾದ ವ್ಯೆತಿರಿಕ್ತ ಆದಾಯ ಹಾಗೂ ಯಾವುದೋ ಒಂದು ಕಾರಣದಿಂದಾಗಿ ಜಿ ಎಸ್ ಟಿ ಅಡಕವಾಗಿ ಅಮಾಯಕ ಬಡ ಕೂಲಿ ಕಾರ್ಮಿಕ, ಸಣ್ಣ ಪುಟ್ಟ ಬೀದಿ ವ್ಯಾಪಾರಸ್ಥರ, ವ್ಯಾಪಾರಿ ಮಳಿಗೆಗಳಲ್ಲಿ ದಿನಗೂಲಿ ಕೆಲಸಗಾರರ ಸ್ವ-ಉದ್ಯೋಗವಾದ ಸೈಕಲ್ ರಿಪೇರಿ, ಪಂಚರ್ ಶಾಪ್ ಕೆಲಸಗಾರರ ಪಡಿತರ ಚೀಟಿ ಅವೈಜ್ಞಾನಿಕವಾಗಿ ರದ್ದುಪಡಿಸಲಾಗಿರುವದು.
ಇದರಿಂದಾಗಿ ಅವಿಸ್ಮರಣೀಯ ಐತಿಹಾಸಿಕ ಪಂಚ ಗ್ಯಾರಂಟಿ ಯೋಜನೆಯ ಅರ್ಹ ಫಲಾನುಭವಿಗಳ ಪಡಿತರ ಚೀಟಿಗಳು ರದ್ದು ಪಡಿಸಲಾದ ಪ್ರಯುಕ್ತ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಮಾಸಿಕ ಪಡಿತರ, ಗ್ರಹ ಲಕ್ಷ್ಮೀ 2000/- ಹಣದಿಂದ ವಂಚಿತರಾಗಿ ಆರ್ಥಿಕವಾಗಿ ದುರ್ಬಲರಾಗಿರುವರು. ಇದೆಲ್ಲ ತಾಂತ್ರಿಕ ತೊಂದರೆಗಳನ್ನು ಪರಿಹರಿಸಿಕೊಳ್ಳಲು ಸರಿಯಾದ ಮಾರ್ಗದರ್ಶನದ ಕೊರತೆಯಿಂದ ಬಳಲುವಂತಾಗಿರುತ್ತದೆ.
ಸದರ ಕಾರಣಗಳಿಂದ ಘನ್ ರಾಜ್ಯ ಸರಕಾರದ ಅವಿಸ್ಮರಣೀಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿಯೇ ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ನೆರವುದಾಯಕವಾಗಬೇಕಾದ ಗ್ರಹಲಕ್ಷ್ಮೀ ಪಂಚ ಗ್ಯಾರಂಟಿ ಯೋಜನೆಯು ಅರ್ಹ ಫಲಾನುಭವಿಗಳಿಗೆ ಬಿಸಿ ತುಪ್ಪವಾಗಿ ಪರಿಣಾಮಿಸಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ವಿಷಾದವನ್ನು ವ್ಯಕ್ತಪಡಿಸಿರುತ್ತಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 