ದೇಶದಲ್ಲಿ ಮುಖಗವುಸು ಉತ್ಪಾದನೆ ಹೆಚ್ಚಸಲು ತಯಾರಕರಿಗೆ ಸರ್ಕಾರ ಸೂಚನೆ

ನವದೆಹಲಿ, ಮಾ 24, ದೇಶದಲ್ಲಿ  ಕೊರೊನಾ  ವೈರಾಣು ಹರಡುವುದನ್ನು ತಡೆಗಟ್ಟಲು  ಮುಖಗವುಸು, ಸ್ಯಾನಿಟೈಸರ್ ಹಾಗೂ ಸಂಬಂಧಿತ ಉತ್ಪಾದನೆ   ಹೆಚ್ಚಿಸುವಂತೆ ಸರ್ಕಾರ   ಇವುಗಳ  ತಯಾರಕರಿಗೆ  ಸೂಚನೆ ನೀಡಿದೆ.ಪ್ರಸ್ತುತ  ದೇಶದಲ್ಲಿ   ನಿತ್ಯ ಒಂದೂವರೆ ಕೋಟಿ  ಮುಖಗವುಸುಗಳನ್ನು  ಉತ್ಪಾದಿಸಲಾಗುತ್ತಿದೆ. ಇವುಗಳ ಉತ್ಪಾದನೆ ಮತ್ತಷ್ಟು ಹೆಚ್ಚಿಸಲು ಸರ್ಕಾರ  ಸೂಚಿಸಿದೆ  ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮೂಲಗಳು  ಹೇಳಿವೆ.
ಮುಖ ಗವುಸು  ತಯಾರಿಸಲು ಅಗತ್ಯವಿರುವ  ಕಚ್ಚಾ ಪದಾರ್ಥಗಳು ಕಾರ್ಖಾನೆಯಲ್ಲಿ ಲಭ್ಯವಿದ್ದು,   ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್  ಲಭ್ಯತೆಯನ್ನು ಹೆಚ್ಚಿಸಲು  ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿವೆ.ದೇಶದ ಮಾರುಕಟ್ಟೆಗಳಲ್ಲಿ  ಮುಖಗವುಸು, ಸ್ಯಾನಿಟೈಸರ್ ಲಭ್ಯತೆ ಹೆಚ್ಚಿಸಲು ಇವುಗಳ ರಪ್ತು ನ್ನು ಸರ್ಕಾರ ನಿಷೇಧಿಸಿದೆ.ಮುಖಗವುಸು, ಸ್ಯಾನಿಟೈಸರ್ಗಳನ್ನು  ಅಕ್ರಮದಾಸ್ತಾನು ಮಾಡಿ ಲಾಭಮಾಡಿಕೊಳ್ಳುವ  ವ್ಯಾಪಾರಿಗಳ ವಿರುದ್ದ  ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿವೆ. ಕೇಂಧ್ರ  ಸರ್ಕಾರ ಮುಖಗವುಸು ಬೆಲೆಯನ್ನು 8 ರೂಪಾಯಿ, 10 ರೂಪಾಯಿ  ಎಂದು ನಿಗದಿಪಡಿಸಿದ್ದು, 200 ಮಿಲಿ ಲೀಟರ್ ಸ್ಯಾನಿಟೈಸರ್  ಬೆಲೆಯನ್ನು 100 ರೂಪಾಯಿಗೆ  ನಿಗದಿಪಡಿಸಿದೆ.