ಕಾರವಾರ ಬಳಿಯ ನೌಕಾನೆಲೆ ಐಎನ್ಎಸ್ ಕದಂಬಕ್ಕೆ ರಾಜ್ಯಪಾಲ ವಜುಭಾಯಿವಾಲಾ ಭೇಟಿ ನೀಡಿದರು. ಈ ವೇಳೆ ಅವರ ಜೊತೆ ಕಾರವಾರ ಶಾಸಕಿ ರೂಪಾಲಿ ನಾಯ್ಕ ಹಾಗೂ ನೌಕಾ ಅಧಿಕಾರಿಗಳು , ಅವರ ಕುಟುಂಬದವರು ಇದ್ದರು. ಇಂದು ಬೆಳಿಗ್ಗೆ 10-10ಕ್ಕೆ ಗೋವಾಕ್ಕೆ ಆಗಮಿಸಿ, ರಸ್ತೆ ಮಾರ್ಗವಾಗಿ ರಾಜ್ಯಪಾಲರು ಕಾರವಾರ ತಲುಪಿದರು. ಜಿಲ್ಲಾಧಿಕಾರ ಎಸ್.ಎಸ್.ನಕುಲ್ ಅವರು ರಾಜ್ಯಪಾಲರನ್ನು ಸ್ವಾಗತಿಸಿ, ಏಷ್ಯಾದಲ್ಲೇ ಅತೀ ದೊಡ್ಡದಾದ ಭಾರತದ ನೌಕಾನೆಲೆಗೆ ಕಳುಹಿಸಿಕೊಟ್ಟರು.
ಡಿ.7 ರಂದು ಉದ್ಯೋಗ ಮೇಳ
ಕಾರವಾರ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಡಿಸೆಂಬರ 7 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 3.30 ರ ವರೆಗೆ "ಉದ್ಯೋಗ ಮೇಳ"ವನ್ನು ಹಮ್ಮಿಕೊಳ್ಳಲಾಗಿದೆ. ಐ.ಟಿ.ಐ, ಡಿಪ್ಲೋಮಾ (ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್), ಪಿ.ಯು.ಸಿ., ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಸಿ.ಎ., ಬಿ.ಬಿ.ಎ., ಎಂ.ಬಿ.ಎ (ಪೈನಾನ್ಸ್) ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವವರು ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ, ಅರ್ಹ ಹಾಗೂ ಆಸಕ್ತ ಅಭ್ಯಥರ್ಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಉದ್ಯೋಗ ವಿನಿಮಯ ಕಛೇರಿಯನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ +91-9481274298, +91-9481403800 ಸಂಪಕರ್ಿಸಬಹುದಾಗಿರುತ್ತದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.