ಲೋಕದರ್ಶನ ವರದಿ
ಬೆಳಗಾವಿ 19: ಸ್ಥಳೀಯ ಜೈನ ಹೆರಿಟೇಜ ಶಾಲೆಯು ಕನರ್ಾಟಕದ ಸ್ಕೌಟ್ಸ ಹಾಗೂ ಗೈಡ್ಸ ಬೆಳಗಾವಿ ಜಿಲ್ಲಾ ಸಂಘಕ್ಕಾಗಿ ಕಬ್ಸ, ಬುಲ್ಬುಲ್ಸ, ಸ್ಕೌಟ್ಸ ಹಾಗೂ ಗೈಡ್ಸ ರೋವರ್ಸ ಹಾಗೂ ರೇಂಜರ್ಸ ಗಳಿಗಾಗಿ ದಿ.17ರಂದು ಬುಧವಾರ ರಾಜ್ಯಪಾಲರ ಪ್ರಶಸ್ತಿ ಸಟರ್ಿಫಿಕೇಟ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಅತಿಥಿಗಳಾಗಿ ಸೀಮಾ ಲಾಟ್ಕರ (ಡಿ ಎಸ್ ಪಿ ಕ್ರೈಮ ಹಾಗೂ ಆರ್ಡರ) ಹಾಗೂ ಗೌರವ ಅತಿಥಿಗಳಾಗಿ ಯಶೋಧಾ ವಂಟಗೊಡಿ (ಡಿ ಎಸ್ ಪಿ ಕ್ರೈಮ ಆ್ಯಂಡ ಟ್ರಾಫಿಕ್) ಆಗಮಿಸಿದ್ದರು. ಪಾಟೀಲ ಸ್ಕೌಟ್ಸ ಹಾಗೂ ಗೈಡ್ಸಗಳನ್ನು ಪರಿಚಯಿಸಿದರು. ಶ್ರದ್ಧಾ ಖಟವಟೆ (ಜೆ.ಎಚ್.ಎಸ್ ನಿದರ್ೇಶಕಿ) ಅಧ್ಯಕ್ಷೀಯ ನುಡಿಗಳನ್ನಾಡಿ, ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿದ 30 ವಿದ್ಯಾಥರ್ಿಗಳನ್ನು ಪ್ರಶಂಸಿದರು. ಪ್ರಾಂಶುಪಾಲ ಮನಜೀತ ಜೈನ ಸಮ್ಮೇಳನಕ್ಕೆ ಸ್ವಾಗತ ಕೋರಿದರು. 130 ಸ್ಕೌಟ್ಸ ಹಾಗೂ ಗೈಡ್ಸಗಳನ್ನು ಹೆಚ್ಚುವರಿ ಡಿ.ಸಿ ಹಾಗೂ ಇದರ ಗೌರವಾನ್ವಿತರ ಮಧ್ಯದಲ್ಲಿ ಸತ್ಕರಿಸಲಾಯಿತು.
ಎಂಟು ವರ್ಷದ ಬಾಲಕ ದೈವಿಕನನ್ನು ವಿದ್ಯುತ್ ಅಪಘಾತದಿಂದ ಬದುಕಿಸಿದ್ದಕ್ಕಾಗಿ ಶ್ರೀಮತಿ ಸುಖೀ ಇವರನ್ನು ಸತ್ಕರಿಸುವುದು ಅವಶ್ಯವಾಗಿಯೂ ಒಂದು ಗೌರವದ ಸಂಗತಿಯಾಗಿದೆ.
ಬೆಳಗಾವಿ ಜಿಲ್ಲೆಯ ಸ್ಕೌಟ್ಸ ಹಾಗೂ ಗೈಡ್ಸನವರು ಅತೀ ಮಹತ್ವದ ಪ್ರಸಂಗಗಳಾದಂಥ ಬಾಹುಬಲಿಯ ಮಹಾ ಮತ್ಸಕಾಭೀಷೇಕ, ಚುನಾವಣೆ ಕರ್ತವ್ಯದಲ್ಲಿ ಭಾಗಿಯಾಗುವಂಥ ಕೆಲಸ ಹಾಗು ಇನ್ನೂ ಹಲವಾರು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೈನ ಹೆರಿಟೇಜ ಶಾಲೆಯ ಸ್ಕೌಟ್ಸ ಹಾಗೂ ಗೈಡ್ಸ ವಿದ್ಯಾಥರ್ಿಗಳು ಹಲವಾರು ಸಾಮಾಜಿಕ ಕಾರ್ಯಕ್ರಮಗಳಾದಂಥ ಸ್ವಚ್ಛ ಭಾರತ ಅಭಿಯಾನ, ವೃದ್ಧರ ಮನೆಗಳಿಗೆ ಭೇಟಿ ನೀಡುವುದು ಹಾಗೂ ಈ ಪಟ್ಟಿ ಇನ್ನೂ ಬೆಳೆಯುತ್ತಲೇ ಹೋಗುತ್ತದೆ.
ಗೌರವಾನ್ವಿತರು ಹಾಗು ಶಿಕ್ಷಣನೇತ್ತರು ಮಕ್ಕಳಿಗೆ ಸ್ಪೂತರ್ಿ ನೀಡಿ, ಗ್ರಂಥಗಳನ್ನು ಓದಿ ಒಳ್ಳೇಯ ನಾಗರೀಕರಾಗುವಂತೆ ಧೈರ್ಯ ತುಂಬುತ್ತಾರೆ ಹಾಗೂ ಪಾಲಕರು ತಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡಬಾರದೆಂದು ಹೇಳಿದರು. ಸ್ಕೌಟ್ಸ ತರಬೇತಿಯು ಮಗುವಿಗೆ ಸಕಲ ಕ್ಷೇತ್ರಗಳಲ್ಲಿ ಪರಿಣಿತಿ ಹೆಚ್ಚಿಸಿಕೊಳ್ಳಲು ಸಹಾಯ ನೀಡುತ್ತದೆ. ಶಾಲೆಯ ಆಡಳಿತ ಮಂಡಳಿಯು ಈ ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದ ಶಿಕ್ಷಕೀಯರಾದಂಥ ಪಲ್ಲವಿ ನಾಡಕಣರ್ಿ, ಶಾಮಲ ಪಾಟೀಲ ಹಾಗೂ ಶಿವಾನಂದ ಹಿರೇಮಠ ಇವರುಗಳಿಗೆಲ್ಲ ದಣಿವಿಲ್ಲದೇ ಶ್ರಮಿಸಿದುದಕ್ಕಾಗಿ ಗುಣಗಾನ ಮಾಡಿದರು.