ಮುಸ್ಲಿಂ ಸಮಾಜವನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡಲಿ - ಯುಸುಫ ನಮಾಜಿ
Governments should work towards mainstreaming the Muslim community socially, economically and educat
ಮುಸ್ಲಿಂ ಸಮಾಜವನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡಲಿ - ಯುಸುಫ ನಮಾಜಿ
ಗದಗ-26, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಸ್ಲಿಂ ಸಮಾಜವನ್ನು ಕೇವಲ ಓಟ್ ಬ್ಯಾಂಕವೆಂದು ಉಪಯೋಗಿಸಿ ಸಂವಿಧಾನ ಬಧ್ದ ಯೋಜನೆಗಳನ್ನು ನೀಡುವಲ್ಲಿ ತಾರತಮ್ಮ ನೀತಿಯನ್ನು ಅನುಸರಿಸುತ್ತಿದ್ದಾರೆ. ಇದನ್ನು ಕೊಡಲೇ ನಿಲ್ಲಿಸಿ ಮುಸ್ಲಿಂ ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಲು ಹಾಗೂ ಮುಸ್ಲಿಂ ಸಮಾಜವನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕೆಂದು ಮಹ್ಮದಯುಸುಫ ನಮಾಜಿ ಆಗ್ರಹಿಸಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಗದಗ-ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆ ನೂತನ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇಮ್ತಿಯಾಜ.ಆರ್.ಮಾನ್ವಿ ಮಾತನಾಡಿ ಮುಸ್ಲಿಂ ಸಮಾಜವು ಕೇವಲ ಓಟ್ ಬ್ಯಾಂಕ ಅಲ್ಲ ಈ ಸಮಾಜವು ಒಂದು ರಾಜಕೀಯ ಶಕ್ತಿಯಾಗಿದೆ ಎಂದು ನಮ್ಮ ಜನಪ್ರತಿನಿಧಿಗಳು ತಿಳಿದುಕೊಳ್ಳಬೇಕು. ಮುಸ್ಲಿಂ ಸಮಾಜಕ್ಕೆ ಅಪಮಾನ ಆಗುವ ರೀತಿಯಲ್ಲಿ ಪ್ರತಿನಿತ್ಯ ಕೆಲ ಢೋಂಗಿ ನಾಯಕರು ಕೋಮುವಾದಿಗಳು ಭಹಿರಂಗವಾಗಿ ಹೇಳಿಕೆಗಳನ್ನು ನೀಡಿದರು ಸಹ ನಮ್ಮ ಸರ್ಕಾರಗಳು ಕಣ್ಣು ಮುಚ್ಚಿಕೊಂಡು ತಮಾಷೆ ನೋಡುತ್ತಿದ್ದಾರೆ. ಈ ಸಮಾಜದ ಓಟಿಗಾಗಿ ರಾಜಕೀಯ ದುಂಬರಾಟ್ ಆಡುವ ಜನಪ್ರತಿನಿಧಿಗಳು ಸಮಾಜದ ಜನರ ಮೇಲೆ ದಬ್ಬಾಳಿಕೆ ದೌರ್ಜನ್ಯಗಳು ನಡೆಯುತ್ತಿದ್ದರು ಕಣ್ಣಿದ್ದರು ಕುರಡರಂತೆ ವರತಿಸುತ್ತಿರುವುದು ಖಂಡನೀಯ. ಹಾಗಾಗಿ ನಮ್ಮ ಸಮಾಜದ ಜನಜಾಗೃತಿಗಾಗಿ ಮತ್ತು ಮುಸ್ಲಿಂ ಸಮಾಜದ ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಬದ್ದ ಹಕ್ಕುಗಾಗಿ ಮುಂದಿನ ದಿನಗಳಲ್ಲಿ ನಿರಂತರ ಹೋರಾಟಗಳನ್ನು ನಡೆಸುವ ಉದ್ದೇಶದಿಂದ ಮುಸ್ಲಿಂ ಸಮಾಜದ ವೇದಿಕೆ ಸಂಘಟನೆಯನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಅಷ್ಫಾಕಅಲಿ ಹೊಸಳ್ಳಿ (ಇಂಜಿನಿಯರ) ಇವರು ವಹಿಸಿ ಸಮಿತಿ ರಚನೆ ಕುರಿತು ಮಾರ್ಗದರ್ಶನ ಮಾಡಿದರು. ಗದಗ-ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆ ಅಧ್ಯಕ್ಷರಾಗಿ ಮಹ್ಮದಯುಸುಫ ನಮಾಜಿ, ಉಪಾಧ್ಯಕ್ಷರಾಗಿ ಅನ್ವರ ಶಿರಹಟ್ಟಿ, ಅಷ್ಫಾಕಅಲಿ ಹೊಸಳ್ಳಿ, ಇಲಿಯಾಸ ಖೈರಾತಿ, ಮೆಹಬೂಬ ಮುಲ್ಲಾ, ಕಾರ್ಯದರ್ಶಿಯಾಗಿ ಇಮ್ತಿಯಾಜ.ಆರ್.ಮಾನ್ವಿ, ಸಹ-ಕಾರ್ಯದರ್ಶಿಯಾಗಿ ಸಾಧಿಕ ನರೇಗಲ್ಲ, ಸಂಘಟನಾ ಕಾರ್ಯದರ್ಶಿಯಾಗಿ ಮುಜಫರ ಮುಲ್ಲಾ, ಖಜಾಂಚಿಯಾಗಿ ಮುನ್ನಾ ಶೇಖ, ಮಹ್ಮದ ಶಾಲಗಾರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಾಬಾಜಾನ ಬಳಗಾನೂರ, ಮುಜಮ್ಮಿಲ ಬಳ್ಳಾರಿ, ಉಮರಫಾರುಖ ಹುಬ್ಬಳ್ಳಿ, ರಫೀಕ ಜಮಾಲಖಾನವರ, ಸಮೀರ ಜಮಾದಾರ, ವಾಸೀಮ ಖಾಜಿ, ಅಸ್ಲಂ ಎಸ್.ಜಿ., ಫಯಾಜ ನಮಾಜಿ, ನಾಶೀರ ದೌಲತದಾರ, ಮೌಲಾಸಾಬ ಗಚ್ಚಿ, ನಿಜಾಮುದ್ದಿನ ಕಾತರಕಿ, ಕರೀಮ ಕಲಾದಗಿ, ಸೂಹೇಲ್ ಹರ್ಲಾಪೂರ, ರಜಾಕ ಸೂಡಿ, ಮಕ್ತುಮ ಮುಲ್ಲಾ, ಜೂನಸಾಬ ಉಮಚಗಿ, ಮಹ್ಮದಸಾಬ ಮುಲ್ಲಾ, ಜೂನಸಾಬ ನಮಾಜಿ, ಗೌಸ ರಾಜನಾಳ ಆಯ್ಕೆಯಾಗಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 