ಶಿರಢಾಣ ನದಿ ಪಾತ್ರದ ಜನರಿಗೆ ಸರಕಾರಿ ಗೈರಾಣ ಜಮೀನು ನೀಡಬೇಕು: ಶ್ರೀಕಾಂತ ತಳವಾರ
Government should give unclaimed land to people living in the Shiradhana river basin: Srikanth Talaw
ಹುಕ್ಕೇರಿ 23: ತಾಲೂಕಿನ ಶಿರಢಾಣ ಗ್ರಾಮದ ಹತ್ತಿರ ಘಟಪ್ರಭಾ ಹಿನ್ನಿರಿನಿಂದ ಮುಳುಗಡೆ ಹೊಂದುತ್ತಿರುವ ಜನರಿಗೆ ಸರಕಾರಿ ಗೈರಾಣು ಜಮಿನು ನೀಡಬೇಕು ಎಂದು ದಲಿತ ಮುಖಂಡ ಶ್ರೀಕಾಂತ ತಳವಾರ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು.
ಸೋಮವಾರ ಹುಕ್ಕೇರಿ ಆಡಳಿತ ಸೌಧದ ಮುಂದೆ ಶಿರಡಾಣ ಗ್ರಾಮಸ್ಥರು ಮತ್ತು ಸಂತ್ರಸ್ಥರು ಪ್ರತಿಭಟನೆ ಜರುಗಿಸಿ ಗ್ರೇಡ 2 ತಹಸಿಲ್ದಾರ ಪ್ರಕಾಶ ಕಲ್ಲೋಳಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳ ನೀರು ಪ್ರತಿ ವರ್ಷ ಮನೆಗಳಿಗೆ ನುಗ್ಗಿ ಹಾನಿ ಅನುಭವಿಸುತ್ತಿದ್ದೆವೆ ಕಾರಣ ಗ್ರಾಮದ ಬ್ಲಾಕ್ ನಂಬರ 29 ನೇದ್ದರ 10 ಎಕರೆ ಜಮಿನಿನಲ್ಲಿ ವಾಸಿಸಲು ಹಕ್ಕು ಪತ್ರ ನೀಡುವಂತೆ ಆಗ್ರಹಿಸಿದರು.‘
ದಲಿತ ಮುಖಂಡ ಶ್ರೀಕಾಂತ ತಳವಾರ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಶಿರಢಾಣ ಗ್ರಾಮದ 10 ಎಕರೆ ಗೈರಾಣ ಜಮಿನನ್ನು ನಿರಾಶ್ರಿತ ವಿವಿಧ ಜಾತಿ ಜನಾಂಗದ ಜನರಿಗೆ ನೀಡ ಬೇಕು ಎಂದು ಆಗ್ರಹಿಸಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಕಾರಣ ಇನ್ನೂ ಮುಂದೆ ಹುಕ್ಕೇರಿ ತಹಸಿಲ್ದಾರ ಕಛೇರಿ ಎದುರು ಪೆಂಡಾಲ್ ಹಾಕಿ ಸತ್ಯಾಗ್ರಹ ಹಮ್ಮಿಕೋಳ್ಳಲು ನಿರ್ಧರಿಸಲಾಗಿದೆ ಕಾರಣ ಕೂಡಲೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಗ್ರಾಮದ ವಿವಿಧ ಜಾತಿಯ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡು ವಾಸಿಸಲು ಅನಕೂಲ ಮಾಡಬೇಕು ಎಂದು ಸಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಉತ್ತರ ಕರ್ನಾಟಕ ಸಂಚಾಲಕ ಕಿರಣ ಶಿವಾಳೆ, ಅಶೋಕ ವಾಡೆದಾರ, ದುರ್ಗಪ್ಪಾ ಪೂಜೇರಿ, ಮಲಗೌಡಾ ಪಾಟೀಲ, ಬಸವಣ್ಣಿ ವಾರೆಪ್ಪಗೋಳ, ಮುತ್ತುರಾಜ ಮ್ಯಾಗೇರಿ, ಶಂಕರ ವಾಡೆರಿ, ಮಹಾಂತೇಶ ವಗ್ಗಣ್ಣವರ ಮೊದಲಾದವರು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 