ಸರ್ಕಾರಿ ಯೋಜನೆಗಳು ಬಡವರಿಗೆ ತಲುಪಲಿ: ಶಾಸಕ ಸವದಿ

ಸರ್ಕಾರಿ ಯೋಜನೆಗಳು ಬಡವರಿಗೆ ತಲುಪಲಿ: ಶಾಸಕ ಸವದಿ Government schemes should reach the poor: MLA Savadi

ಲೋಕದರ್ಶನ ವರದಿ 

ಮಹಾಲಿಂಗಪುರ 23 :  ಸರ್ಕಾರದ ಪ್ರತಿ ಯೋಜನೆಯೂ ನಿಜವಾದ ಬಡವರಿಗೆ ತಲುಪಬೇಕು ಆಮೂಲಕ ಬಡವರಿಗೆ ಉದ್ಧಾರವಾಗಿ ಸ್ವಸ್ಥ ಸಮಾಜ, ಸಮೃದ್ಧ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ. ಆ ನಿಟ್ಟಿನಲ್ಲಿ ಶಿವಲಿಂಗ ಪೋಳ ಮತ್ತು ಮಹಾಲಿಂಗ ಮುಗಳಖೋಡ ಇವರ ತಂಡ ಬಡ ನಿರ್ಗತಿಕರನ್ನು ಗುರುತಿಸಿ ಅವರಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡುತ್ತಿರುವದು ಶ್ಲಾಘನೀಯ ಎಂದು ಶಾಸಕ ಸಿದ್ದು ಸವದಿ ಹೇಳಿದರು. ಸಮೀಪದ ಸೈದಾಪುರ ಕ್ರಾಸ್ ನ ಮಾರುತಿ ದೇವಾಲಯದ ಆವರಣದಲ್ಲಿ ಜರುಗಿದ ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ಅಂಗವೀಕಲ ವೇತನ ಮತ್ತು ವೃದ್ಧಾಪ್ಯ ವೇತನಗಳ ಆದೇಶ ಪತ್ರ ವಿತರಿಸಿ ಮಾತನಾಡಿದರು. 

ಭಾಜಪ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಆನಂದ ಕಂಪು, ಮುಖಂಡರಾದ ಬಸವಣ್ಣೆಪ್ಪ ಬ್ಯಾಳಿ, ಮುರಿಗೆಪ್ಪ ಗುಣದಾಳ, ಶಿವಪ್ಪ ಬಾಯಪ್ಪಗೋಳ, ಚನ್ನಪ್ಪ ಪಟ್ಟಣಶೆಟ್ಟಿ, ನಾಗಪ್ಪ ಕೇತಗೌಡ, ಶಿವಲಿಂಗಪ್ಪ ಕೌಜಲಗಿ, ಪರಮಾನಂದ ಉಳ್ಳಾಗಡ್ಡಿ, ರಾಮನಗೌಡ ಪಾಟೀಲ, ಚಿನ್ನಪ್ಪ ಬಾಯಪ್ಪಗೋಳ, ಸಿದ್ಧಾರೂಢ ಕೌಜಲಗಿ, ಮುತ್ತಪ್ಪ ಪಶ್ಚಾಪುರ, ಲಕ್ಷ್ಮಣ ಉಳ್ಳಾಗಡ್ಡಿ, ಮಹಾಲಿಂಗಪ್ಪ ಬಾಯಪ್ಪಗೋಳ, ಮಲ್ಲಪ್ಪ ಬಾಯಪ್ಪಗೋಳ, ಶಿವಲಿಂಗ ಪೋಳ, ಮಹಾಲಿಂಗ ಮುಗಳಖೋಡ, ಮಲ್ಲಪ್ಪ ಕೌಜಲಗಿ, ಯಮನಪ್ಪ ಉಪ್ಪಾರ, ಆನಂದ ಬನಹಟ್ಟಿ, ವಿವೇಕ ಮಲಕಾಪುರ, ಲಚ್ಚಪ್ಪ ಲಮಾಣಿ, ಮಹಾದೇವ ಬಿಸನಾಳ ಮಲ್ಲಪ್ಪ ಬಿಸನಾಳ ಇತರರಿದ್ದರು