ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದ ಪರಸರದಲ್ಲಿ ಶಾಸಕ ವಿಶ್ವಾಸ್ ವೈಧ್ಯ ಸಸಿ ನೆಡುವುದರ ಮೂಲಕ ಚಾಲನೆ

 ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದ ಪರಸರದಲ್ಲಿ ಶಾಸಕ ವಿಶ್ವಾಸ್ ವೈಧ್ಯ ಸಸಿ ನೆಡುವುದರ ಮೂಲಕ ಚಾಲನೆ MLA Vishwas Vaidya inaugurated the event by planting saplings in the vicinity of Srikshetra Yallamma

ಲೋಕದರ್ಶನ ವರದಿ 

 ಉಗರಗೋಳ 23:  ಶ್ರೀರೇಣುಕಾ ಯಲ್ಲಮ್ಮನ ಕ್ಷೇತ್ರ,  ಬಂಡೆಗಲ್ಲುಗಳಿಂದ ಕೂಡಿರುವ ಪ್ರದೇಶ. ಇಲ್ಲಿ ಸಸಿ ನೆಟ್ಟು ಪೋಷಿಸುವುದು ಸವಾಲಿನ ಕೆಲಸ, ಹೀಗಾಗಿ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಲು ಶ್ರಮಿಸಬೇಕು ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಉಪಾದ್ಯಕ್ಷ ಶಾಸಕ ವಿಶ್ವಾಸ್ ವೈದ್ಯ ಹೇಳಿದರು. ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಶನಿವಾರ ರಂದು ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದ ಸಂಯುಕ್ತ ಆಶ್ರಯದಲ್ಲಿ ಶುದ್ದ ಕುಡಿಯುವ ನೀರಿನ ಘಟಕದ ಉಧ್ಟಾಟನೆ, ಮತ್ತು ಭದ್ರತಾ ಕೊಠಡಿಯ ಉಧ್ಟಾಟನೆ ಹಾಗೂ ಯಲ್ಲಮ್ಮನ ಗುಡ್ಡದ ಸೌಂದರ್ಯಕರಣ, ನೆರಳಿನ ದೃಷ್ಟಿಯಿಂದ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಸಿ ನೆಡುವ  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು.  

ಬೆಟ್ಟ, ಗುಡ್ಡ, ಪರ್ವತಗಳಲ್ಲಿ ಸಸಿ ನೆಡುವವರಿಗಿಂತ, ಅದರಿಂದ ದೂರ ಉಳಿಯುವವರೇ ಹೆಚ್ಚು. ಆದರೆ, ಇಲ್ಲಿನ ಸಿಬ್ಬಂದಿ ಬಂಡೆಗಲ್ಲಿನಿಂದ ಆವೃತವಾದ ಗುಡ್ಡದ ನಡುವೆಯೂ ಸಾವಿರಾರು ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಎಲ್ಲರಲ್ಲೂ ಬೆರುಗು ಮೂಡಿಸಲಿದ್ದಾರೆ ಎಂದ ಅವರು ಧರ್ಮ ದರ್ಶನದ ಸರತಿ ಸಾಲಿನಲ್ಲಿ ಭಕ್ತರಿಗೆ ಶುದ್ದ ಕುಡಿಯುವ ನೀರಿನ ನಳಗಳನ್ನು ಮಾಡಲಾಗಿದೆ ಎಂದರು. ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಶಿದ್ದನಗೌಡ ಗೂಡರಾಶಿ, ಮಾತನಾಡಿ. ಇಂದಿನ ದಿನಗಳಲ್ಲಿ ನಗರೀಕರಣದ ಪ್ರವಾವದಿಂದ ಪರಿಸರ ನಾಶವಾಗುತ್ತಿದೆ. ನೈಸರ್ಗಿಕ ಸಂಕುಲಗಳಿಗೆ ಆಪತ್ತು ಬಂದಿದೆ. ಹೀಗಾಗಿ ದೇವಸ್ಥಾನದ ಪ್ರದೇಶಗಳಲ್ಲಿ, ರೈತರು, ಹೊಲಗದ್ದೆಗಳಲ್ಲಿ, ಶಾಲೆಗಳಲ್ಲಿ, ತಮ್ಮ ಮನೆಯ ಅಂಗಳ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. 

ಯಲ್ಲಮ್ಮ ದೇವಸ್ಥಾನ ಅಭಿವೃದ್ದಿ ಕಾರ್ಯಧರ್ಶಿ ಪ್ರಭವತಿ ಫಕೀರಪೂರ, ಮಲ್ಲು ಜಕಾತಿ, ಶಿವಾನಂದ ಪಟ್ಟಣಶೆಟ್ಟಿ, ನಾಗರತ್ನಾ ಚೋಳಿನ, ಮಂಜುನಾಥ ಅಂಗಡಿ, ಅಲ್ಲಮಪ್ರಭು ಪ್ರಭುನವರ, ಆರ್ ಎಚ್ ಸವದತ್ತಿ, ಸಿ ಎನ್ ಕುಲಕರ್ಣಿ, ನಾಗರಾಜ ಬಡೆಪ್ಪನವರ, ಶ್ರೀಧರ ಇನಗಂಟಿ(ಬಾಲಾಜಿ) ನೀಲಪ್ಪ ಶಿದ್ದಕ್ಕನವರ, ಪ್ರಕಾಶ ಲಮಾಣಿ, ಡಿ ಆರ್ ಚವ್ಹಾಣ, ಅಭಿಷಕ ತಿಪರಾಶಿ, ಪ್ರವೀಣ ರಾಮಪ್ಪನವರ, ಎಎಸ್‌ಆಯ್ ಪುಂಡಲೀಕ ಪರೀಟ್, ಏಕನಗೌಡ ಮುದ್ದನಗೌಡ್ರ, ಗೋವಿಂದಗೌಡ ತಿಪರಾಶಿ, ಅನೀಲ ಗುಡಿಮನಿ, ಸಂತೋಷ ಕಲಾಲ, ಹಾಗೂ ಅಧಿಕಾರಿಗಳು ಮತ್ತು ದೇವಸ್ಥಾನ ಸಿಬ್ಬಂದಿ ಇದ್ದರು.