ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಗೆ ಸರ್ಕಾರ ಸ್ಪಂದನೆ

Government responds to State Primary School Teachers Association's request

ಶಾಲಾ ದಾಖಲಾತಿ ವಯೋಮಿತಿ ಸಡಲಿಕೆ ಸ್ವಾಗತಾರ್ಹ" 

ಆಲಮಟ್ಟಿ 16: ಒಂದನೆಯ ತರಗತಿ ಶಾಲಾ ಮಕ್ಕಳ ದಾಖಲಾತಿಗೆ ಸಂಬಂಧಿಸಿದಂತೆ ಸಕಾ9ರ ವಯೋಮಿತಿ ಸಡಿಲಿಕೆ ಕ್ರಮಕ್ಕೆ ಅಸ್ತು ನೀಡಿದ್ದು ಸ್ವಾಗತಾರ್ಹವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹರ್ಷ ವ್ಯಕ್ತಪಡಿಸಿದೆ.       

ಈ ಕುರಿತು ಪ್ರಕಟಣೆ ನೀಡಿರುವ ಸಂಘದ ರಾಜ್ಯಾಧ್ಯಕ್ಷ ಕೆ. ನಾಗೇಶ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಒಂದನೆಯ ತರಗತಿ ಮಕ್ಕಳ ದಾಖಲಾತಿ ವಯಸ್ಸು 6 ವರ್ಷದಿಂದ  5 ವರ್ಷ 6 ತಿಂಗಳಿಗೆ ಇಳಿಸುವ ಮಹತ್ವದ ಐತಿಹಾಸಿಕ ನಿರ್ಣಯ ಬುಧವಾರ ಕೈಗೊಂಡ ಸರಕಾರದ ಕ್ರಮವನ್ನು ಹಾಗೂ ಶಿಕ್ಷಣ ಸಚಿವ ಮಧು ಬಂಗಾರ​‍್ಪ ಅವರ ಕಳಕಳಿಯನ್ನು ಹಾದಿ9ಕವಾಗಿ ಸ್ವಾಗತಿಸಿ ಅಭಿನಂದಿಸಿದ್ದಾರೆ.        

1 ನೇ ತರಗತಿ ಮಕ್ಕಳ ದಾಖಲಾತಿಗೆ 6 ವರ್ಷ ವಯೋಮಿತಿಯನ್ನು ಕಡ್ಡಾಯಗೊಳಿಸುತ್ತಿದ್ದು ಇದರಿಂದ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕ್ಷೀಣಿಸುತ್ತಿದೆ. ಬೇರೆ ಅನ್ಯ ರಾಜ್ಯಗಳಲ್ಲಿ ಮಹಾರಾಷ್ಟ್ರ, ಕೇರಳದಲ್ಲಿನ ಅಂಶಗಳನ್ನು ಗಮನಿಸಿ ನಮ್ಮ ರಾಜ್ಯದ 1 ನೇ ತರಗತಿಯ ದಾಖಲಾತಿಯಲ್ಲಿ ಮಗುವಿನ ವಯೋಮಿತಿಯನ್ನು ಸಡಿಲಗೊಳಿಸಬೇಕೆಂದು ಈ ಮುಂಚೆಯೇ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರಂತರವಾಗಿ ಸರಕಾರಕ್ಕೆ  ಹಾಗೂ ಶಿಕ್ಷಣ ಸಚಿವರಿಗೆ ಮನವಿ ಮಾಡಿಕೊಂಡಿತ್ತು.      

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು, ಸರ್ಕಾರಿ ಶಾಲೆಗಳ ಉಳವಿಗಾಗಿ ಹಾಗೂ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸುವ ದೃಷ್ಟಿಯಿಂದ ಇಂತಹ ಐತಿಹಾಸಿಕ ತೀಮಾ9ನವನ್ನು ಕೈಗೊಂಡಿರುವ ಸರ್ಕಾರಕ್ಕೆ ಹಾಗೂ ಶಿಕ್ಷಣ ಸಚಿವ ಮಧು ಬಂಗಾರ​‍್ಪನವರಿಗೆ ಮತ್ತು ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಸಂಘದ ಪರವಾಗಿ ರಾಜ್ಯಾಧ್ಯಕ್ಷ ಕೆ. ನಾಗೇಶ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅಭಿನಂದಿಸಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ತಮ್ಮ ಸಂಘದ ಕೋರಿಕೆ ವಿನಂತಿಗೆ ಸ್ಪಂದಿಸಿ, ದಾಖಲಾತಿ ಸಡಿಲಿಕೆ ಕುರಿತು ಸಕಾ9ರ ಕೈಗೊಂಡ ದಿಟ್ಟ ಕ್ರಮವನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮುಕ್ತವಾಗಿ, ಅಭಿಮಾನದಿಂದ ಸ್ವಾಗತಿಸುತ್ತದೆ ಎಂದು ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.