ಧಾರವಾಡದಲ್ಲಿ ಹೊಸ ಹುಬ್ಬಳ್ಳಿ ಗ್ರಾಮೀಣ ಡಿ.ವೈ.ಎಸ್.ಪಿ ಕಚೇರಿ ಸ್ಥಾಪನೆ ಹಿ ಸರ್ಕಾರದ ಆದೇಶ
Government orders establishment of new Hubballi Rural DySP office in Dharwad
ಹುಬ್ಬಳ್ಳಿ 30: ಧಾರವಾಡ ಜಿಲ್ಲೆಯಲ್ಲಿ ಒಂದೇ ಪೊಲೀಸ್ ಉಪವಿಭಾಗ ಇದ್ದು ಕಾರ್ಯ ಒತ್ತಡ ಹೆಚ್ಚುತ್ತಿರುವುದರಿಂದ ಈ ಭಾಗದ ಜನರ ಬಹುದಿನ ಬೇಡಿಕೆ ನೂತನ ಹುಬ್ಬಳ್ಳಿ ಗ್ರಾಮೀಣ ಡಿ.ವೈ.ಎಸ್.ಪಿ. ಕಚೇರಿಯನ್ನು ಪ್ರಾರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಗೃಹ ಸಚಿವರಾದ ಡಾ: ಜಿ. ಪರಮೇಶ್ವರ ಅವರು ಇದೊಂದು ವಿಷೇಶ ಪ್ರಕರಣ ಎಂದು ಪರಿಗಣಿಸಿ ದಿನಾಂಕ: 26 ರಂದು ಸರ್ಕಾರದ ಆದೇಶ ಹೊರಡಿಸಿದ್ದಾರೆ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು. ಅವರು ಇಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು ಧಾರವಾಡ ಜಿಲ್ಲೆ ವಿಭಜನೆಗೊಂಡ ನಂತರ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಘೋರ ಅಪರಾಧ ಪ್ರಕರಣ ಮತ್ತು ಲಘು ಅಪರಾಧ ಪ್ರಕರಣಗಳು ಅಲ್ಲದೇ ಮಹದಾಯಿ, ಕಳಸಾ-ಬಂಡೂರಿ ಹಾಗೂ ರೈತರ, ಕಾರ್ಮಿಕ, ವಿದ್ಯಾರ್ಥಿಗಳ ಚಳುವಳಿಗಳು ನಡೆಯುತ್ತಿರುವುದರಿಂದ ಹುಬ್ಬಳ್ಳಿ ಗ್ರಾಮೀಣ, ನವಲಗುಂದ, ಅಣ್ಣಿಗೇರಿ ಹಾಗೂ ಕುಂದಗೋಳ, ಗುಡಗೇರಿ ಪೊಲೀಸ್ ಠಾಣೆಗಳ ವ್ಯಾಪ್ತಿಯನ್ನು ಹೊಂದಿರುವ ನೂತನ ಹುಬ್ಬಳ್ಳಿ ಗ್ರಾಮೀಣ ಡಿ.ವೈ.ಎಸ್.ಪಿ. ಕಚೇರಿಯನ್ನು ಪ್ರಾರಂಭಿಸಲು ಗೃಹ ಸಚಿವರಾದ ಡಾ: ಜಿ. ಪರಮೇಶ್ವರ ಅವರು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಕಟ್ಟಡ ಉದ್ಘಾಟನೆಗೆ ಬಂದಾಗ ಘೋಷಿಸಿದಂತೆ ಇದೊಂದು ವಿಷೇಶ ಪ್ರಕರಣ ಆದೇಶ ಹೊರಡಿಸಿದ್ದಾರೆ ಎಂದು ಕೋನರಡ್ಡಿ ಹೇಳಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 