ಸರಕಾರಿ ಕಚೇರಿಗಳು ತಂಬಾಕು ಮುಕ್ತವಾಗಬೇಕು: ಜಿಲ್ಲಾಧಿಕಾರಿ

ಕಾರವಾರ, ಜುಲೈ  10: ಸಕರ್ಾರಿ ಕಚೇರಿಗಳು ತಂಬಾಕು ಮುಕ್ತ ಕಚೇರಿಗಳಾಗಬೇಕೆಂದು ಜಿಲ್ಲಾಧಿಕಾರಿ ಹರೀಶ್ ಕುಮಾರ್ ವಿವಿಧ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಿದರು.

ತಂಬಾಕು  ನಿಯಂತ್ರಣ ಕೋಶದ ವತಿಯಿಂದ ಜಿಲ್ಲಾ ಸಮನ್ವಯ ಸಮಿತಿಯ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ನಿಮಿತ್ತ  ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಅವುರ ಮಾತನಾಡಿದರು. 2020-21ನೇ ಸಾಲಿನ ಮೊದಲ ತ್ರೈಮಾಸಿಕ ಸಭೆಯಲ್ಲಿ ತಂಬಾಕು ನಿಯಂತ್ರಣಕ್ಕೆ ಹಲವು ವಿಷಯ ಪ್ರಸ್ತಾಪಿಸಿದರು. ಕೋಟ್ಪಾ ಕಾಯ್ದೆ-2003ರ ಸೆಕ್ಷನ್-4 ರ ನಾಮಫಲಕವನ್ನು ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿ, ಅನುಷ್ಠಾನ ಮಾಡುವ ಕುರಿತು ಹಾಗೂ ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳನ್ನು ಮಾರ್ಗಸೂಚಿ ಅನುಗುಣವಾಗಿ ತಂಬಾಕು ಮುಕ್ತ ಕಛೇರಿಯಾಗಿ ಮಾಡಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.  

ಕೋವಿಡ್-19 ಇರುವುದರಿಂದ ತಾಲೂಕಾ ಮಟ್ಟದ ತಂಬಾಕು ತನಿಖಾದಳವು ಮುಂಜಾಗೃತ ಕ್ರಮಕೈಗೊಂಡು ಪರಿಸ್ಥಿತಿ ಅನುಗುಣವಾಗಿ ನಿರ್ಣಯ ಕೈಗೊಂಡು ದಾಳಿ ನಡಸಿ ವರದಿ ನೀಡುವಂತೆ ಸೂಚಿಸಿದರು. ಕೊರೊನಾ ಇರುವ ಈ ಸಂದರ್ಭದಲ್ಲಿ  ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ  ಮಾಹಿತಿ ಕಾರ್ಯಕ್ರಮ ಆಯೋಜಿಸಿ ತಿಳುವಳಿಕೆ ನೀಡಲು ಸೂಚಿಸಿದರು. 

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಥಾಧಿಕಾರಿ ಶಿವಪ್ರಕಾಶ ದೇವರಾಜು, ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ಉಪ ವಿಭಾಗಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ, ಕಾಮರ್ಿಕ ಇಲಾಖೆ, ಕಂದಾಯ ಇಲಾಖೆ, ಪಂಚಾಯತ ಇಲಾಖೆ ಕಾನೂನು ಸೇವಾ ಪ್ರಾಧಿಕಾರ, ರೆಡ್ ಕ್ರಾಸ್ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವರಿದ್ದರು ಹಾಗೂ ವಿಡಿಯೋ ಕಾನ್ಪರೇನ್ಸ್ ಮೂಲಕ ತಾಲೂಕಿನ ತಹಶಿಲ್ದಾರರು, ಉಪವಿಭಾಗಾಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ಕಾರ್ಯನಿರ್ವಹಣಾಧಿಕಾರಿಗಳು ತಾಲೂಕು ಪಂಚಾಯತ್, ತಾಲೂಕಾ ಆರೋಗ್ಯಾಧಿಕಾರಿಗಳು ಹಾಜರಿದ್ದರು.