ಹುಕ್ಕೇರಿ 24: ವಿದ್ಯಾರ್ಥಿಗಳಿಗೆ ನೀಡಿದ ಸೈಕಲ್ಗಳನ್ನು ಪಾಲಕರು ಹಾಗೂ ಸಂಬಂಧಿಕರು ತಮ್ಮ ಮನೆಯ ಚಟುವಟಿಕೆಗಳಿಗೆ ಬಳಸಬಾರದು.ಜತೆಗೆ ಯಾರಾದರೂ ಬಳಸುತ್ತಿರುವುದನ್ನು ಶಾಲಾ ಉಸ್ತುವಾರಿ ಸಮಿತಿಯವರು ಗಮನಿಸದರೆ ತಕ್ಷಣ ಅಂತಹವರಿಗೆ ತಿಳುವಳಿಕೆ ಹೇಳಬೇಕೆಂದು ಉದ್ಯಮಿ ಪೃಥ್ವಿ ರಮೇಶ ಕತ್ತಿ ನುಡಿದರು.
ಅವರು ಸೋಮವಾರದಂದು ಸ್ಥಳೀಯ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ ಪ್ರಸಕ್ತ ಶೈಕ್ಷಣೀಕ ವರ್ಷದ ಸೈಕಲ್ಗಳನ್ನು ಮಕ್ಕಳಿಗೆ ವಿತರಿಸಿ ಮಾತನಾಡಿದರು.ಸರಕಾರ ಶಾಲಾ ಹಾಜರಾತಿ ಹಾಗೂ ಮಕ್ಕಳ ದೈಹಿಕ ಕ್ಷಮತೆ ಹೆಚ್ಚಿಸಲು ಈ ಯೋಜನೆ ಜಾರಿಗೆ ತಂದಿದೆ ಎಂದರು. ವಿದ್ಯಾರ್ಥಿಗಳು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆಯಿತ್ತರು. ಎಸ್.ಡಿ.ಎಂ.ಸಿ ಸದಸ್ಯ ಕೇಸರ ಮೊಖಾಶಿ, ಪುರಸಭೆ ಸದಸ್ಯ ರಾಜೇಶ ಮುನ್ನೋಳಿ ಅವರು ಮಾತನಾಡಿ ಖಾಸಗಿ ಶಾಲೆಗಳ ಪೈಪೋಟಿ ಎದುರಿಸಲು ಸರಕಾರ ಬಡ ಮಕ್ಕಳಿಗೆ ಹಲವಾರು ಯೋಜನೆ ಜಾರಿಗೆ ತಂದಿದೆ ಎಂದರು.ಅವುಗಳ ಅನುಷ್ಠಾನ ಮತ್ತು ಬಳಕೆ ಶಾಲಾ ಸಿಬ್ಬಂದಿ ಹಾಗೂ ಪಾಲಕರು ಮುಂದಾಗಬೇಕೆಂದು ಕರೆ ನೀಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಅಜಾದ ಮುಲ್ಲಾ, ಪುರಸಭೆ ಮಾಜಿ ಉಪಾಧ್ಯಕ್ಷ ಶಹಜಾನ ಬಡಗಾಂವಿ, ಹೈದರಲಿ ಮುಜಾವರ, ಅಸ್ಲಂ ಶೇಖಬಡೆ, ಜಾವೇದ ಸೈಯದ್, ಗುಲಾಬ ತೇರಣಿ ಮತ್ತಿತರರಿದ್ದರು. ಎ.ಜಿ.ಸೊಲ್ಲಾಪೂರೆ ಸ್ವಾಗತಿಸಿದರು. ಎನ್.ಎನ್.ವಾಚಮೇಕರ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ಕಲ್ಪನಾ ಲೋಖಂಡೆ ವಂದಿಸಿದರು.