ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ 26ನೇ ದಿನಕ್ಕೆ

ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ 26ನೇ ದಿನಕ್ಕೆ Government Medical College protest enters 26th day

ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ 26ನೇ ದಿನಕ್ಕೆ 

ವಿಜಯಪುರ 13: ಸೋಮವಾರ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ 26ನೇ ದಿನಕ್ಕೆ ಕಾಲಿಟ್ಟಿದ್ದು, ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ)  ಸದಸ್ಯರು ಹಾಗೂ ಇಂಡಿಯನ್ ಮೆಡಿಕಲ್ ಅಸ್ಸೋಸಿಆಶನ್ ವಿಜಯಪುರ (ಐ.ಎಂ.ಎ) ಇವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಗೆ ಬೆಂಬಲವನ್ನು ಸೂಚಿಸಿದರು. 

ಋಂ ಅಧ್ಯಕ್ಷರಾದ ದಯಾನಂದ ಬಿರಾದರ ರವರು ಮಾತನಾಡುತ್ತಾ "ಯಾವಾಗಲೊ ಮೆಡಿಕಲ್ ಕಾಲೇಜು ಬೇಕು. ಬಡವರಿಗೆ ಮೆಡಿಕಲ್ ಕಾಲೇಜ್ ಅವಶ್ಯಕತೆ ಇದೆ. ನಮ್ಮ ವಿಜಯಪುರದ ಬಹುದಿನದ ಬೇಡಿಕೆ. ಸರ್ಕಾರಿ ವೈದ್ಯಕೀಯ ಕಾಲೇಜಿನ ಬಗ್ಗೆ ಸಾಮಾನ್ಯ ಜನರಿಗೂ ಕೂಡ ತಿಳಿಯಬೇಕು. ಸರಕಾರಿ ಕಾಲೇಜು ಪ್ರಾರಂಭವಾದರೆ ಎಲ್ಲದಕ್ಕೂ ಮುಂದೆ ಸಹಾಯವಾಗುತ್ತದೆ" ಎಂದು ಅವರು ಹೇಳಿದರು. ಎಂ. ಆರ್ ಗುಡದಿನ್ನಿ ಕಾರ್ಯದರ್ಶಿ ಐ.ಎಂ.ಎ ಮಾತನಾಡುತ್ತಾ 153 ಎಕರೆ ಜಮೀನು ಇದೆ, ಯಾವ ಸಂದರ್ಭದಲ್ಲಿ ನಾವು ನಿಮಗೆ ಸಹಾಯ ಮಾಡುತ್ತೇವೆ" ಎಂದು ಹೇಳಿದರು. ಡಾ. ಕುಲ್ಲಳ್ಳಿ ಮಾತನಾಡುತ್ತಾ ಬೇರೆ ಬೇರೆ ಕಡೆ ಹೋಗಿ ನಮ್ಮ ಮಕ್ಕಳು ಕಲಿಯುತ್ತಿದ್ದಾರೆ . ನಮ್ಮಊರಿನಲ್ಲಿ ನಮ್ಮ ಮಕ್ಕಳು ಕಲಿಯುವಂತಾದರೆ ತುಂಬಾ ಸಹಾಯವಾಗುತ್ತದೆ ಅದಕ್ಕಾಗಿ ಸರಕಾರಿ ಕಾಲೇಜು ಅವಶ್ಯಕತೆ ಇದೆ" ಎಂದು ಕುಲ್ಲಳ್ಳಿ ಅವರು ಹೇಳಿದರು. ನಮ್ಮ ಊರಿಗೆ ಕಾಲೇಜು ಬರುವ ಬದಲು ಬಳ್ಳಾರಿಗೆ ಹೊಯಿತು. ಅದು ಮುಂದೆ ಆಗಬಾರದು ಅದಕ್ಕಾಗಿ ಸರಕಾರಿ ವೈದ್ಯಕೀಯ ಕಾಲೇಜು ಬೇಕು ಎಂದು ಹೇಳಿದರು. ಹೋರಾಟಕ್ಕೆ ?25000 ಕೊಡುವುದಾಗಿ ಹೇಳಿದರು. 5000 ಸಾವಿರ ಮೆಡಿಕಲ್ ಸೀಟುಗಳನ್ನು ಮಕ್ಕಳಿಗೆ ಪ್ರತಿವರ್ಷ ಕೊಡುವುದಾದರೆ ತುಂಬಾ ಸಹಾಯವಾಗುತ್ತದೆ ಹಾಗೂ ನಮ್ಮ ಊರಿನ ಜನರಿಗೆ ಉದ್ಯೊವಕಾಶಗಳು ದೊರೆಯುತ್ತವೆ ಎಂದು ಡಾ. ಸುರೇಶ್ ಕಾಗಲ್ಕರ್ ಮಾತನಾಡುತ್ತಾ ಹೇಳಿದರು.  

ಡಾ  ಸುರೇಶ ಕಾಗಲಕರ್ ರೆಡ್ಡಿ,  ಋಂ ರಾಜ್ಯಾಧ್ಯಕ್ಷ ಡಾ.ಪಝಲ್ ಖಾದ್ರಿ, ಡೆಂಟಲ್ ಸರ್ಜನ್ ಡಾ. ಗುಡದಿನ್ನಿ, ಡಾ ಕುಲ್ಲೋಳ್ಳಿ, ಆಲ್ ಆಮೀನ್ ಕಾಲೇಜು ಸುಪೆರಿಂಟೆಂಡೆಂಟ್ ಜಿಲಾನಿ ಅವಟಿ ಹಾಗೂ ಇನ್ನಿತರು ಡಾಕ್ಟರ್ ಗಳು ಈ ಹೋರಾಟದಲ್ಲಿ ಭಾಗ ವಹಿಸಿದ್ದರು.ಕರವೇ ಪ್ರವೀಣ ಶೆಟ್ಟಿ ಬಣದ ವಿಜಯಪುರ ಜಿಲ್ಲಾಧ್ಯಕ್ಷ ಹಾಗೂ ವಕೀಲರು ಆದ ಶ್ರುಶೈಲ ಮುಳಜಿ ಅವರು ಮಾತನಾಡುತ್ತಾ "ಬಡವರು ಅತಿ ಕಡಿಮೆ ಖರ್ಚಿನಲ್ಲಿ ಓದಲಿ ಸರಕಾರಿ ಕಾಲೇಜು ನಮ್ಮ ಜಿಲ್ಲೆಗೆ ಅವಶ್ಯಕತೆ ಇದೆ. ಹೆಚ್ಚು ಶುಲ್ಕ ಕೊಟ್ಟು ಬಡವರ ಮಕ್ಕಳಿಗೆ ಓದಲು ಆಗುವುದಿಲ್ಲ ಎಂದರು. ಕರವೇ ರಾಜ್ಯ ಉಪಾಧ್ಯಕ್ಷ ಬಸವರಾಜ ತಾಳಿಕೋಟಿ ಕೂಡ ಮಾತನಾಡಿದರು.  

ಶ್ರೀಕಾಂತ್ ರಾಥೋಡ್,ಅಶೋಕ ನಾವಿ, ಸಿದ್ದನಗೌಡ ಕೊಳಗೇರಿ, ಮುರುಗೇಶ ಗಣಚಾರಿ, ಬಸನಗೌಡ ಪಾಟಿಲ,ಸದಾಶಿವ ಕುಂಬಾರ, ಉಮೇಶ ವಾಲಿಕರ, ಹಾಗೂ ಹೋರಾಟ ಸಮಿತಿ ಸದಸ್ಯರುಗಳಾದ ಅರವಿಂದ ಕುಲಕರ್ಣಿ, ಬಿ ಭಗವಾನ್ ರೆಡ್ಡಿ, ಲಾಲಿತಾ ಬಿಜ್ಜರಗಿ, ವಿದ್ಯಾವತಿ ಅಂಕಲಗಿ, ಕೆ ಎಫ್ ಅಂಕಲಗಿ, ಸುರೇಶ್ ಬಿಜಾಪುರ, ಲಕ್ಷ್ಮಣ ಹಂದ್ರಾಳ,ಅಬ್ದುಲ ರಹಮಾನ್ ನಾಸಿರ್, ಲಕ್ಷ್ಮಣ ಕಂಬಾಗಿ ಶಿವಬಾಳಮ್ಮಕೊಂಡಗೂಳಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಹೆಚ್ ಟಿ ಮಲ್ಲಿಕಾರ್ಜುನ ಹೆಚ್ ಟಿ, ಸಿದ್ರಾಮ ಹಳ್ಳೂರ ಸಿ ಬಿ ಪಾಟೀಲ, ಪ್ರಭುಗೌಡ ಪಾಟೀಲ, ಜಗದೇವ ಸೂರ್ಯವಂಶಿ ಮುಂತಾದವರು ಭಾಗವಹಿಸಿದ್ದರು.