ಕೊಲಂಬೊ, ನ 18: ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ ನಂತರ ಶ್ರೀಲಂಕಾದ ಏಳನೇ ಅಧ್ಯಕ್ಷರಾಗಿ ಗೋಟ ಬಯ ರಾಜಪಕ್ಸೆ ಅನುರಾಧಪುರದಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದೇಶದ ರಕ್ಷಣಾ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿದ್ದ ಗೋಟ ಬಯ ಚುನಾವಣೆಯಲ್ಲಿ 6 ದಶ ಲಕ್ಷ ಮತಗಳನ್ನು ಪಡೆದು ತಮ್ಮ ಪ್ರಮುಖ ಎದುರಾಳಿ ಆಡಳಿತಾರೂಢ ಪಕ್ಷದ ಅಭ್ಯರ್ಥಿ ಸಜಿತ್ ಪ್ರೇಮದಾಸ ಅವರನ್ನು 13 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಶ್ರೀಲಂಕಾ ಪೊಡುಜನ( ಎಸ್ ಎಲ್ ಪಿಪಿ ಹಾಗೂ ಪ್ರತಿಪಕ್ಷ ನಾಯಕ ಮಹಿಂದ ರಾಜಪಕ್ಸೆ, ಪಕ್ಷದ ಅಧ್ಯಕ್ಷ ಪ್ರೋ. ಜಿ.ಎಲ್. ಪೆರಿಸ್, ಪಕ್ಷದ ರಾಷ್ಟ್ರೀಯ ಸಂಘಟನಕಾರ ಬಸಿಲ್ ರಾಜಪಕ್ಸೆ, ಪ್ರತಿಪಕ್ಷಗಳ ನಾಯಕರು ಸಂಸದರು ಹಾಗೂ ಇನ್ನಿತರ ಗಣ್ಯರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.