ಗೋಪಾಲ ಖಟಾವಕರಗೆ ಮೌಲ್ಯ ಪತ್ರಿಕೋದ್ಯಮ ಪ್ರಶಸ್ತಿ
Gopal Khatavakar receives Value Journalism Award
ಬೆಳಗಾವಿ 25 : ಪತ್ರಕರ್ತ, ಲೇಖಕ ಗೋಪಾಲ ಖಟಾವಕರ ಅವರಿಗೆ ಮೌಲ್ಯ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಮದುರ್ಗದ ಮೌಲ್ಯ ಸಂಪದ ವಾರಪತ್ರಿಕೆಯ 21ನೇ ವಾರ್ಷಿಕೋತ್ಸವ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ವಿತರಣಾ ಸಮಾರಂಭ ನಿಮಿತ್ತ ಶಿರಸಂಗಿಯಲ್ಲಿ ಮೇ 24ರಂದು ನಡೆದ ಕಾರ್ಯಕ್ರಮದಲ್ಲಿ ಗೋಪಾಲ ಖಟಾವಕರ ಅವರಿಗೆ ಶಾಲು ಹೊದಿಸಿ ಸತ್ಕರಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಳೆದ 3 ದಶಕಗಳಿಂದ ಗೋಪಾಲ ಖಟಾವಕರ ಅವರು ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ.
ಗ.ಗೋ ರಾಜ್ಯಾಧ್ಯಕ್ಷ ಪ್ರಶಸ್ತಿ, ಸಮಾಜ ಸೇವಾ ರತ್ನ ಪ್ರಶಸ್ತಿ ವೃತ್ತಿಯಾಧಾರಿತ ಪ್ರಶಸ್ತಿ, ವಿಠ್ಠಲಶ್ರೀ ಪ್ರಶಸ್ತಿಗಳು ಈಗಾಗಲೇ ಲಭಿಸಿವೆ. ಲೇಖಕರಾಗಿಯೂ ಸೇವೆ ಸಲ್ಲಿಸುತ್ತಿರುವ ಅವರು ಈಗಾಗಲೇ ಸಮಾಜ ಸ್ಪಂದನ, ಜನಸ್ಪಂದನ, ಪರಿವರ್ತನೆ, ದಿಕ್ಸೂಚಿ, ಚಿಂತನೆ, ಜಾಗೃತಿ, ಸಮಾಜಬಿಂಬ ಎಂಬ ಲೇಖನ ಸಂಗ್ರಹಗಳ ಕೃತಿ ಹೊರ ತಂದಿದ್ದಾರೆ. ಇದರಲ್ಲಿ ಕೆಲ ಕೃತಿಗಳು ಡಿಡಿಪಿಐ, ಡಿಡಿಪಿಯು ಅವರ ಆದೇಶದಂತೆ ಗ್ರಂಥಾಲಯಗಳಿಗೆ ಆಯ್ಕೆಯಾಗಿದ್ದವೆ.
ಚಿಕ್ಕುಂಬಿಯ ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿಗಳು, ಮುಳ್ಳೂರ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮೌಲ್ಯ ಸಂಪದ ವಾರಪತ್ರಿಕೆ ಸಂಪಾದಕ ಹಾಗೂ ಕಾರ್ಯಕ್ರಮದ ಆಯೋಜಕರಾದ ಸೋಮಶೇಖರ ಸೊಗಲದ, ಮೌಲ್ಯ ಸಂಪದ ಸಾಮಾಜಿಕ ಸೇವಾ ಪ್ರತಿಷ್ಟಾನದ ಅಧ್ಯಕ್ಷೆ ಶೈಲಾ ಸೊಗಲದ, ಸಾಮಾಜಿಕ ಕಾರ್ಯಕರ್ತರಾದ ಬೆಳಗಾವಿಯ ನಿರಪಾದಯ್ಯ ಕಲ್ಲೋಳಿಮಠ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕೃತರು, ಗಣ್ಯರು ಭಾಗವಹಿಸಿದ್ದರು,
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 