ಈ ಬಾರಿ ಉತ್ತಮ ಮಳೆ ಬೆಳೆ: ಮರುಳಸಿದ್ದೇಶ್ವರ ದೇವರವಾಣಿ
Good rain crop this time: Marulasiddeshwar Devaravani
ಲೋಕದರ್ಶನ ವರದಿ
ಇಂಡಿ 20: ಯುಗಾದಿ ಹಬ್ಬವು ಹಿಂದೂಗಳಿಗೆ ಹೊಸ ವರ್ಷವನ್ನು ಸೂಚಿಸುವಂತಹ ಹಬ್ಬವಾಗಿದೆ. ಈ ಹಬ್ಬದ ದಿನದಂದು ಅವರು ಬೇವು - ಬೆಲ್ಲವಯನ್ನು ಸೇವಿಸುವ ಮೂಲಕ ವರ್ಷವನ್ನು ಸ್ವಾಗತಿಸುತ್ತಾರೆ. ಈ ಹಬ್ಬವು ಹೊಸ ವರ್ಷದ ಮೊದಲ ಹಬ್ಬ ಹಾಗೂ ಚೈತ್ರ ಮಾಸದ ಮೊದಲ ದಿನವಾಗಿದೆ. ಅದರಂತೆ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಜೋಡಗುಡಿಯ ಮರುಳಸಿದ್ದೇಶ್ವರ ದೇವಾಲಯದಲ್ಲಿ 2026-27 ನೇ ಸಾಲಿನಲ್ಲಿ ಈ ಬಾರಿ ಮಳೆ ಬೆಳೆಗಳ ಬಗ್ಗೆ ಅಡಿಕೆ ಪೂಜೆ ನೆರೆವೇರಿತು.
ಹೌದು ಈ ಪೂಜೆ ಕಾರ್ಯಕ್ರಮಕ್ಕೆ ಒಂದು ಇತಿಹಾಸ ಇದೆ. ಪ್ರತಿ ವರ್ಷ ಯುಗಾದಿ ಹಬ್ಬದ ಮರುದಿನ ನಸಿಕನ ಜಾವ ನಾಲ್ಕು ಗಂಟೆಗೆ ಮರುಳಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಸಾವಿರಾರು ಜನ ಭಕ್ತರು ಸೇರುತ್ತಾರೆ ಈ ಬಾರಿ ವರ್ಷದ ಮಳೆ ಬೆಳೆಗಳ ಬಗ್ಗೆ ತಿಳಿದುಕೊಳ್ಳಲು ಕುತುಹಲದಿಂದ ಕುಳಿತಿರುತ್ತಾರೆ. ನಸುಕಿನ ನಾಲ್ಕು ಗಂಟೆಗೆ ಮರುಳಸಿದ್ದೇಶ್ವರ ದೇವರಿಗೆ ರುದ್ರಾಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವರ ಪೂಜಾರಿ ಅವರ ಪತ್ರಿಕೆಗಳನ್ನು ಮೀಸಲು ನೀರಿನಿಂದ ತೊಳೆದು ಲಿಂಗದ ಮೇಲೆ ಇಟ್ಟು ಪಂಚಧಾತುವಿನಿಂದ ಕೂಡಿದ ಕಂಚಿನ ಅಡಕಿಗಳನ್ನು ಲಿಂಗದ ಮೇಲೆ ಇಟ್ಟು ಒಂದೊಂದು ಮಳೆ ಬಗ್ಗೆ ಕೇಳಿದ ತಕ್ಷಣ ಆ ಲಿಂಗದ ಮೇಲೆ ಇಟ್ಟಿರುವ ಎರಡೂ ಕಂಚಿನ ಅಡಿಕೆಗಳು ಪವಾಡ ರೀತಿಯ ಸಿಡಿದು ಬೀಳುತ್ತವೆ. ಆ ಅಡುಗೆಗಳು ಯಾವ ದಿಕ್ಕಿನಲ್ಲಿ ಬಿದ್ದಿವೆ ಹೇಗೆ ಬಿದ್ದಿವೆ ಎಂಬುದನ್ನು ತಿಳಿದು ಅದು ಬಲಾ ನೋ ಅಥವಾ ಎಡಾ ನೋ ಎಂಬುದನ್ನು ಧ್ವನಿ ವರ್ಧಕದ ಮೂಲಕ್ಕೆ ನೆರೆದ ಭಕ್ತರಿಗೆ ಹೇಳುತ್ತಾರೆ. ಪ್ರತಿಯೊಂದು ಮಳೆ ಬೆಳೆಗಳ ಬಗ್ಗೆ ಪೂಜಾರಿ ಹೇಳುವುದನ್ನು ನೆರೆದ ಭಕ್ತರು ಬರೆದುಕೊಳ್ಳುತ್ತಾರೆ.
2026-27 ನೇ ಸಾಲಿನ ಮಳೆಗಳ ಬಗ್ಗೆ ಮಳೆಗಳ ವಿವರಗಳು: ಅಶ್ವಿನಿ ಮಳೆ: ಎಡಾ-ಬಲಾ ಭರಣಿ ಮಳೆ: ಬಲಾ ಕೃತಕ ಮಳೆ: ಎಡಾ -ಬಲಾ ರೋಹಿಣಿ ಮಳೆ: ಬಲಾ ಮಿರಗಾ ಮಳೆ: ಬಲಾ -ಎಡಾ ಆರಿದ್ರಾ ಮಳೆ: ಬಲಾ ಪುನರ್ವಸು ಮಳೆ: ಬಲಾ -ಎಡಾ ಪುಷ್ಯ್ ಮಳೆ: ಎಡಾ -ಬಲಾ ಆಶ್ಲೇಷಾ ಮಳೆ: ಎಡಾ -ಬಲಾ ಮಘಿ ಮಳೆ: ಎಡಾ -ಬಲಾ ಹುಬ್ಬಿ ಮಳೆ: ಎಡಾ -ಬಲಾ ಉತ್ತರಿ ಮಳೆ: ಬಲಾ ಹಸ್ತ ಎಡಾ -ಬಲಾ ಚಿತ್ತಾ ಮಳೆ: ಬಲಾ -ಎಡಾ ಸ್ವಾತಿ ಮಳೆ: ಬಲಾ ವಿಶಾಖ ಮಳೆ; ಎಡಾ -ಬಲಾ ಹೀಗೆ ಆಗಿರುತ್ತವೆ ಹಾಗೂ ಇನ್ನೂ ಮಳೆ ಬೆಳೆಗಳ ಬಗ್ಗೆ ತಿಳಿದುಕೊಳ್ಳಲು ದೇವಾಲಯದ ಆವರಣದಲ್ಲಿ ಝೆರಾಕ್ಸ್ ಪ್ರತಿಗಳನ್ನು ಕೊಡಲಾಗುವುದು ಹಾಗೂ ಬಂದ ಭಕ್ತರಿಗೆ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಈ ಪೂಜಾ ಕಾರ್ಯಕ್ರಮದಲ್ಲಿ ತಡವಲಗಾ ಗಣವಲಗಾ ಲಿಂಗದಹಳ್ಳಿ ಹೀರೆರೂಗಿ ಅಥರ್ಗಾ ನಿಂಬಾಳ ಹಂಜಗಿ ಗ್ರಾಮಗಳು ಸೇರಿದಂತೆ ಸುತ್ತಲಿನ ಸಾವಿರಾರು ಭಕ್ತರು ಬಂದಿರುತ್ತಾರೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 