ನಾಟಕಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ
Good message to society through plays
ಹೂವಿನಹಡಗಲಿ 26: ನಾಟಕದಿಂದ ಸಮಾಜದ ಅಂಕುಡೊಂಕು ಸರಿಪಡಿಸುತ್ತವೆ ಎಂದು ಜೆ.ಎಸ್.ಎಸ್.ಕಾಲೇಜಿನ ಉಪನ್ಯಾಸಕ ನೆಪೋಲಿಯನ್ ಹೇಳಿದರು. ತಾಲೂಕಿನ ನಂದಿಹಳ್ಳಿ ರಂಗಮಂದಿರ ಆವರಣದಲ್ಲಿ ಗುರುವಾರ ಕಂಠಿ ಬಸವೇಶ್ವರ ಸ್ವಾಮಿಯ ರಥೋತ್ಸವ ನಿಮಿತ್ತ ಗ್ರಾಮದ ಸ್ಥಳೀಯ ಕಲಾವಿದರಿಂದ "ಸಾವು ತಂದ ಸೌಭಾಗ್ಯ " ಸಾಮಾಜಿಕ ನಾಟಕ ಸಮಾರಂಭದಲ್ಲಿ ಮಾತನಾಡಿ ನಾಟಕಗಳು ಕೇವಲ ಮನರಂಜನೆಯಲ್ಲ, ಬದಲಾಗಿ ಸಾಮಾಜಿಕ ಬದಲಾವಣೆಗೆ ಪ್ರೇರೇಪಿಸುವ ಪ್ರಬಲ ಸಾಧನಗಳಾಗಿವೆ ಎಂದ ಅವರು ಕೆಲ ನಾಟಕದ ದೃಶ್ಯ ಗಳನ್ನು ಹೇಳಿದರು. ಜಿಲ್ಲಾ ಬಿಜೆಪಿ ಮುಖಂಡ ರಾದ ಎಂ.ಬಿ.ಬಸವರಾಜ ಮಾತನಾಡಿ ಸಮಾಜದ ಪ್ರತಿಬಿಂಬ ನಾಟಕಗಳು ಸಮಕಾಲೀನ ಸಮಾಜದ ವಾಸ್ತವಗಳನ್ನು, ಸಮಸ್ಯೆಗಳನ್ನು, ಮತ್ತು ಮೌಲ್ಯಗಳನ್ನು ವೇದಿಕೆಯ ಮೇಲೆ ತರುತ್ತವೆ, ಪ್ರೇಕ್ಷಕರು ತಮ್ಮನ್ನು ತಾವು ಆ ಪಾತ್ರಗಳಲ್ಲಿ ನೋಡಿಕೊಳ್ಳುವಂತೆ ಮಾಡುತ್ತವೆ ಎಂದರು. ಮಾಜಿ ಗ್ರಾ.ಪಂ.ಅದ್ಯಕ್ಷ ಕಂಠಿ ವೀರೇಶ, ವಿ.ಬಿ.ಮಲ್ಲಿಕೇಶಪ್ಪ, ಶಿಕ್ಷಕರಾದ ಅರುಣಿ ಸುರೇಶ, ವಿ.ಬಿ.ಜಗದೀಶ್, ಅರುಣಿ ಜಗದೀಶ್ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 