ಎಲ್ ಎಲ್‌ಎಂ ನಲ್ಲಿ ಗೋಲ್ಡ್ ಮೆಡಲ್, ಕಾನಿಪದಿಂದ ಹಿರಿಯ ಪತ್ರಕರ್ತ ಅನಂತ ಕಾರ್ಕಳ ಪುತ್ರಿ ಸಹನಾಗೆ ಸನ್ಮಾನ
Gold medal in LLM, Sahana, daughter of senior journalist Anant Karkala, honoured by Kanip
ಗದಗ 07 : ಹಿರಿಯ ಪತ್ರಕರ್ತ ಅನಂತ ಕಾರ್ಕಳ ಪುತ್ರಿ ಸಹನಾ ಎಲ್ ಎಲ್ ಎಂ ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಗೋಲ್ಡ್ ಮೆಡಲ್ ಪಡೆದ ಹಿನ್ನೆಲೆ ಗದಗ ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದಿಂದ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾನಿಪ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜ್ಯ ಎಂ ಹೆಬ್ಬಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ರು. ಇದೇ ವೇಳೆ ಮಾತನಾಡಿದ ಅವರು ಸಹನಾ ಅವರ ಸಾಧನೆ ಇಡೀ ಪತ್ರಕರ್ತ ಬಳಗಕ್ಕೆ ಸಂತಸ ತಂದಿದೆ, ಸಹನಾ ನಮ್ಮ ಮನೆ ಮಗಳಾಗಿ ಈ ಸಾಧನೆ ಮಾಡಿದ್ದು ನಮಗೆ ಹೆಮ್ಮೆಯ ಸಂಗತಿ ಎಂದ್ರು.ಸಹನಾ ಅಂನಂತ ಕಾರ್ಕಳ ಅವರಿಗೆ ಕಾನಿಪ ಗದಗ ಜಿಲ್ಲಾ ಘಟಕದಿಂದ ಸನ್ಮಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹನಾ ಅನಂತ ಕಾರ್ಕಳ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನ ಸ್ವೀಕಾರ ಮಾಡುತ್ತಿರುವುದು ಖುಶಿ ತಂದಿದೆ ಎಲ್ಲಾ ಪತ್ರರ್ತರ ಮಕ್ಕಳೂ ಸಾಧನೆ ಮಾಡಬೇಕು,
ಪ್ರತಿ ವರ್ಷ ಸಾಧನೆ ಮಾಡಿದ ಎಲ್ಲರಿಗೂ ಸನ್ಮಾನ ಮಾಡಬೇಕೆಂದರು.ಹಿರಿಯ ಪತ್ರಕರ್ತ ಅನಂತ ಕಾರ್ಕಳ ಮಾತನಾಡಿ ಎಲ್ ಎಲ್ ಬಿ ಪಾಸಾಗೋದೆ ಇಂದಿನ ದಿನದಲ್ಲಿ ಕಷ್ಟಕರವಾಗಿರೋವಾಗ ಎಲ್ ಎಲ್ ಎಂ ನಲ್ಲಿ ನನ್ನ ಮಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಗೋಲ್ಡ್ ಮೆಡಲ್ ಪಡೆದಿರುವುದು ನಿಜಕ್ಕೂ ಸಾಧನೆಯೇ ಸರಿ. ಇಂತಹ ಸಾಧನೆ ಮಾಡಿದ ಪುತ್ರಿ ಸಹನಾಗೆ ಕಾನಿಪದಿಂದ ಸನ್ಮಾನ ಸಮಾರಂಭ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಪತ್ರಕರ್ತರ ಮಕ್ಕಳನ್ನು ಗುರುತಿಸಿ ಸನ್ಮಾನಿಸೋ ಕಾರ್ಯ ಒಳ್ಳೆಯದು ಎಂದರು. ಹಿರಿಯ ಪತ್ರಕರ್ತ ಜಗದೀಶ ಕುಲಕರ್ಣಿ ಮಾತನಾಡಿ ಸಹನಾ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸಹನಾ ತಾಯಿ ಮಂಗಳಾ ಅನಂತ ಕಾರ್ಕಳ, ನ್ಯಾಯವಾದಿ ಟಿ ಎನ್ ಭಾಂಡಗೆ, ಹಿರಿಯ ಪತ್ರಕರ್ತರಾದ ಆನಂದ ಸಾಲಿಗ್ರಾಮ, ಹೆಚ್ ಎಂ ಶರೀಫನವರ, ಗಣೇಶ ಪೈ, ಸಂಜೀವಕುಮಾರ ಪಾಂಡ್ರೆ, ಪತ್ರಕರ್ತರಾದ ಸಂತೋಷ ಕೊಣ್ಣೂರ, ಸುರೇಶ ಕಡ್ಲಿಮಟ್ಟಿ, ನಿಂಗನಗೌಡ್ರ, ಕೆಮರಾಮನ್ ವಿಜಯ್ ಕಾಗನೂರಮಠ, ಮಂಜುನಾಥ ಸಾಳೇರ, ಗಣೇಶ ದೊಡ್ಡಮನಿ ಸೇರಿದಂತೆ ಇತರರು ಇದ್ರು.ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ ಸ್ವಾಗತಿಸಿದರು, ಹಿರಿಯ ಪತ್ರಕರ್ತ, ಕಾನಿಪ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಆನಂದಯ್ಯ ವಿರಕ್ತಮಠ ಕಾರ್ಯಕ್ರಮ ನಿರೂಪಣೆ ಮಾಡಿದರು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅರುಣಕುಮಾರ ಹಿರೇಮಠ ವಂದಿಸಿದರು
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 