ಗೋಲ್ಡ್ ಡಿಗ್ಗರ್ ಬಾಬಾ ಅಲಿಯಾಸ್ ಶೋಭನ್ ಸರ್ಕಾರ್ ನಿಧನ

ಉನ್ನಾವೊ, ಮೇ 13,ಗೋಲ್ಡ್ ಡಿಗ್ಗರ್ ಬಾಬಾ, ಶೋಭನ್ ಸರ್ಕಾರ್ ಎಂದು ಹೆಸರಾಗಿದ್ದ ಮಹಾಂತ ವೀರಕತಾನಂದ ಜೀ ಮಹಾರಾಜ್ ನಿಧನರಾಗಿದ್ದಾರೆ. ಬುಧವಾರ ಇಲ್ಲಿನ ಆರೋಗ್ಯ ಧಾಮದಲ್ಲಿ ಬೆಳಗ್ಗೆ ಕೊನೆಯುಸಿರೆಳೆದ ಅವರಿಗೆ 92 ವರ್ಷ ವಯಸ್ಸಾಗಿತ್ತು.  ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸಾವಿರಾರು ಶಿಷ್ಯರು ಆರೋಗ್ಯ ಧಾಮಕ್ಕೆ ಧಾವಿಸಿ, ಅಂತಿಮ ಗೌರವ ಸಲ್ಲಿಸಿದ್ದಾರೆ.2013 ರಲ್ಲಿ ಉನ್ನಾವೊ ಜಿಲ್ಲೆಯ ಡುಂಡಿಯಾ ಖೇರಾ ಗ್ರಾಮದ ರಾಜ ರಾವ್ ರಾಮವಕಶ್ ಕೋಟೆಯೊಳಗೆ ನೆಲದಲ್ಲಿ ಸಾವಿರ ಕ್ವಿಂಟಾಲ್ ಚಿನ್ನವಿದೆ ಎಂದು ಈತ ತಿಳಿಸಿದ ಬಳಿಕ ಜಾಗತಿಕವಾಗಿ ಗುರುತಿಸಿಕೊಂಡರು. 

"ರಾಜ ರಾವ್ ರಾಮ್ ಬಕ್ಷ್ ನನ್ನ ಕನಸಿನಲ್ಲಿ ಬಿಳಿ ಕುದುರೆಯ ಮೇಲೆ ಕಾಣಿಸಿಕೊಂಡು, ಜನನ ಮತ್ತು ಮರಣದ ಚಕ್ರದಿಂದ ಮುಕ್ತಗೊಳಿಸುವಂತೆ ನನ್ನನ್ನು ವಿನಂತಿಸಿದರು.  ಈ ನಿಧಿಯ ಉಸ್ತುವಾರಿ ಅವರೇ ಆಗಿದ್ದಾರೆ" ಎಂದು ಶೋಭನ್ ಸರ್ಕಾರ್ ಹೇಳಿಕೊಂಡಿದ್ದರು. ನಂತರ  ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ತಂಡವು ರಾಜ್ಯ ಸರ್ಕಾರದ ವತಿಯಿಂದ 2.78 ಲಕ್ಷ ರೂ. ವೆಚ್ಚದಲ್ಲಿ ಚಿನ್ನ ಅಗೆಯಲು ಮುಂದಾದರು.  ಆದರೆ ನಿಧಿ ಪತ್ತೆಯಾಗಲಿಲ್ಲ.ಏತನ್ಮಧ್ಯೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸಂತ ಶೋಭನ್ ಸರ್ಕಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.