ಪಂಚಮಸಾಲಿ ಸಮಾಜಕ್ಕೆ ಮತ್ತೊಮ್ಮೆ ಗೆಲುವು ನೀಡಿದ್ದಾಳೆ ನ್ಯಾಯದೇವತೆ: ಕೋಳೂರು
Goddess of Justice has once again given victory to Panchamasali society: Kolur
ವಿಜಯಪುರ 11: ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಪಂಚಮಸಾಲಿ ಸಮಾಜಕ್ಕೆ ನ್ಯಾಯದೇವತೆ ಮತ್ತೊಮ್ಮೆ ಗೆಲುವು ನೀಡಿದ್ದಾಳೆ. ಸರ್ಕಾರ ಎರಡನೇ ಬಾರಿಯೂ ಹೈ ಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿಯನ್ನು ವಿಭಾಗೀಯ ಪೀಠ ತಿರಸ್ಕರಿಸುವ ಮೂಲಕ ಸರ್ಕಾರಕ್ಕೆ ಚಾಟಿ ಏಟು ಬೀಸಿದೆ. ಆಡಳಿತ ಸರ್ಕಾರಕ್ಕೆ ಇಂದು ತೀವ್ರ ಮುಖಭಂಗವಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಹಾಗೂ ಪಂಚಮಸಾಲಿ ವಕೀಲರ ಪರಿಷತ್ತಿನ ಪದಾಧಿಕಾರಿ ಖ್ಯಾತ ನ್ಯಾಯವಾದಿ ಜಿ.ಬಿ.ಕೋಳೂರು ಹೇಳಿದರು.
ಏಪ್ರಿಲ್ 4ರಂದು ಹೈಕೋರ್ಟ್ ಏಕ ಸದಸ್ಯ ಪೀಠ ಪಂಚಮಸಾಲಿ ಹೋರಾಟಗಾರ ಮೇಲೆ ಎಸಗಿದ ದೌರ್ಜನ್ಯ ಕುರಿತು ನ್ಯಾಯ ಒದಗಿಸಲು ನ್ಯಾಯಾಂಗ ತನಿಖೆಗೆ ಆದೇಶ ನೀಡುವ ಕುರಿತು ಮನವಿ ಸಲ್ಲಿಸಲಾಗಿತ್ತು. ಅರ್ಜಿಯನ್ನು ಪುರಸ್ಕರಿಸಿ ಏಪ್ರಿಲ್ 4ರಂದು ಹೈಕೋರ್ಟ್ ಏಕ ಸದಸ್ಯ ಪೀಠ ಅರ್ಜಿಯನ್ನು ಪುರಸ್ಕರಿಸಿ ಆದೇಶ ನೀಡಿತ್ತು. ಇದನ್ನು ಸಹಿಸದ ಸರ್ಕಾರ ಈ ಆದೇಶವನ್ನು ವಜಾಗೊಳಿಸುವಂತೆ ಹೈ ಕೋರ್ಟ್ ವಿಭಾಗೀಯ ಪೀಠಕ್ಕೇ ಮೇಲ್ಮನವಿ ಸಲ್ಲಿಸಿತ್ತು. ಇಂದು ಜುಲೈ 10ರಂದು ವಿಚಾರಣೆ ನಡೆಸಿದ ಹೈಕೋರ್ಟ್ ಪಂಚಮಸಾಲಿ ಹೋರಾಟಗಾರರು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಮಾಡಿಕೊಂಡ ಮನವಿಯನ್ನೂ ಮತ್ತೊಮ್ಮೆ ಪುರಸ್ಕರಿಸಿ ಸರ್ಕಾರ ಮಾಡಿದ ಮೇಲ್ಮನವಿ ವಜಾಗೊಳಿಸಿದೆ ಎಂದರು.
ಕಳೆದ ವರ್ಷ ಡಿಸೆಂಬರ್ 10 ರಂದು ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಪಂಚಮಸಾಲಿ ಸಮಾಜದ 2ಏ ಮಿಸಲಾತಿ ಆಗ್ರಹಿಸಿ ನಡೆದ ಹೋರಾಟದ ಸಂದರ್ಭದಲ್ಲಿ ರಾಜ್ಯ ಸರ್ಕಾರ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಪಂಚಮಸಾಲಿ ಸಮಾಜದ ಶ್ರೀಗಳ ನೇತೃತ್ವದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟದ ಸಂಧರ್ಭದಲ್ಲಿ ರೈತರು ಕೂಲಿಕಾರ್ಮಿಕರು, ಹಿರಿಯರು, ಯುವಕರು, ಮಹಿಳೆಯರು ಮುಂತಾದವರನ್ನು ಲೆಕ್ಕಿಸದೆ ಅಮಾನುಷವಾಗಿ ಪೊಲೀಸರ ಮೂಲಕ ಲಾಠಿ ಚಾರ್ಜ್ ಮಾಡಿಸಿ ರಕ್ತಸಿಕ್ತ ವಾಗಿ ದೌರ್ಜನ್ಯ ಎಸಗಿದ್ದನ್ನು ನಮ್ಮ ಸಮಾಜ ಇನ್ನೂ ಮರೆತಿಲ್ಲ. ಇದೊಂದು ಐತಿಹಾಸಿಕ ರಕ್ತ ಕ್ರಾಂತಿ ಎಂಬುದಾಗಿ ದಾಖಲಾಗಿದೆ. ಪ್ರತಿಯೊಬ್ಬ ಸ್ವಾಭಿಮಾನಿ ಪಂಚಮಸಾಲಿ ವ್ಯಕ್ತಿಯ ಹೃದಯದಲ್ಲಿ ಗಾಯವಾಗಿ ಅಚ್ಚೊತ್ತಿದೆ. ನಮ್ಮ ನೋವು ಮಾಯವಾಗಬೇಕಾದರೆ ಆಡಳಿತ ಸರ್ಕಾರ ನಮ್ಮ ಸರ್ಕಾರಕ್ಕೆ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮುಗ್ಧ ರೈತಾಪಿ ವರ್ಗ ಜನರು ಪಂಚಮಸಾಲಿ ಸಮಾಜ ಬಾಂಧವರು ನ್ಯಾಯಾಂಗದ ಮೇಲೆ ವಿಶ್ವಾಸ ಇರಿಸಿದ್ದು ಅದನ್ನೂ ಮಾನ್ಯ ನ್ಯಾಯಾಲಯ ನಮ್ಮ ಸಂವಿಧಾನ ಬದ್ಧ ಹಕ್ಕನ್ನು ಎತ್ತಿ ಹಿಡಿದಿದೆ. ರಾಜ್ಯದ ಇತಿಹಾಸದಲ್ಲಿ ಸಮಾಜಕ್ಕಾಗಿ ಹೋರಾ ಮೇಲೆ ಪೊಲೀಸ್ ಬಲವನ್ನು ದುರುಪಯೋಗ ಪಡಿಸಿಕೊಂಡು ಮುಗ್ದ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿಸಿದ್ದ ಸರ್ಕಾರರ ವಿರುದ್ಧ ಎರಡನೇ ಬಾರಿಯೂ ನ್ಯಾಯಾಂಗ ತನಿಖೆಗೆ ಆದೇಶಿಸಿದ ರಾಜ್ಯ ಉಚ್ಚ ನ್ಯಾಯಾಲಯ ವಿಭಾಗೀಯ ಪೀಠಕ್ಕೇ ಧನ್ಯವಾದ ಅರ್ಿಸಿದರು. ಮತ್ತು ಒಂದು ತಿಂಗಳ ಅವಧಿಯಲ್ಲಿ ಹಲ್ಲೆಗೊಳಗಾದ ಅಮಾಯಕರಿಗೆ ನ್ಯಾಯ ಹಾಗೂ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಸಮಸ್ತ ಲಿಂಗಾಯತ ಪಂಚಮಸಾಲಿ ಸಮಾಜ ಒತ್ತಾಯಿಸುತ್ತದೆ ಎಂದರು.
ಗೆಲುವಿನ ಆದೇಶ ತಿಳಿದ ತಕ್ಷಣ ಪಂಚಮಸಾಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು. ವಕೀಲರ ಪರಿಷತ್ ಪದಾಧಿಕಾರಿಗಳು, ಸಮಾಜ ಬಾಂಧವರ ಜೊತೆಗೆ ಸಿದ್ದೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ವಿತರಿಸಿ, ಜಯಘೋಷ ಮೊಳಗಿಸಿ ಸಂಭ್ರಮಿಸಿದರು.
ಇದೇ ವೇಳೆ ಗುರು ಪೂರ್ಣಿಮೆಯ ನಿಮಿತ್ಯ ಜಗದ್ಗುರುಗಳಿಗೆ ಕಿತ್ತೂರು ಕರ್ನಾಟಕ ರಾಜ್ಯ ಸಂಚಾಲಕ ಶರಬಸಪ್ಪ ಗಂಗಶೆಟ್ಟಿ ಹಾಗೂ ಪಂಚ ಸೇನೆ ವಿಜಯಪುರ ಜಿಲ್ಲಾ ಅಧ್ಯಕ್ಷ ಸಂತೋಷ ಮುಂಜಣ್ಣಿ ಗುರುಗಳಿಗೆ ಶಾಲು ಹೊದಿಸಿ ಫಲಪುಷ್ಪ ವಿತರಿಸಿ, ಹಾರ ಹಾಕಿ ಪುಷ್ಪ ವೃಷ್ಟಿಗೈದು ಭಕ್ತಿಯ ಪರಾಕಾಷ್ಠೆ ಮೆರೆದರು.
ಸುದ್ದಿಗೋಷ್ಠಿಯಲ್ಲಿ ದೇವರ ಹಿಪ್ಪರಗಿಯ ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ಬಿ.ಎಂ. ಪಾಟೀಲ, ನಗರ ಘಟಕ ಅಧ್ಯಕ್ಷ ಶ್ರೀಶೈಲ ಬುಕ್ಕಾಣ್ಣಿ. ಉಪಾಧ್ಯಕ್ಷ ಸಿದ್ದು ಹಳ್ಳೂರ. ಹಿರಿಯ ನ್ಯಾಯವಾದಿ ಬಿ.ಡಿ.ಬಿರಾದಾರ. ಕುಮಟಗಿ ಮಾದ್ಯಮ ವಕ್ತಾರ ನ್ಯಾಯವಾದಿ ದಾನೇಶ ಅವಟಿ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 