ಪರಿಶುದ್ಧ ಭಕ್ತಿ ಮಾಡಿದವರ ಕಷ್ಟ ಪರಿಹರಿಸುತ್ತಾನೆ ಭಗವಂತ : ಮಾತೋಶ್ರೀ ವಿದ್ಯಾವತಿ
God solves the problems of those who practice pure devotion: Matoshree Vidyavati
ಲೋಕದರ್ಶನ ವರದಿ
ಮಹಾಲಿಂಗಪುರ 21 : ಕಷ್ಟಗಳು ಬರುವುದು ಸರ್ವೇ ಸಾಮಾನ್ಯ ಆದರೆ ಅದನ್ನು ಪರಿಹರಿಸುವುದು ಸುಲಭವಿಲ್ಲ ಸಂಕಟ ಬಂದಾಗ ವೆಂಕಟರಮಣ ಎಂದರೆ ದೇವರು ಕರುಣೆ ತೋರುವುದಿಲ್ಲ ಯಾರು ಭಗವಂತನಲ್ಲಿ ಪರಿಶುದ್ಧ ಭಕ್ತಿ ಇಟ್ಟು ದೇವರನ್ನು ನೆನೆಯುತ್ತಾರೆ ಅವರ ಕಷ್ಟಗಳನ್ನು ಭಗವಂತ ಪರಿಹರಿಸುತಾನೆ ಎಂದು ಗುಲಬುರ್ಗಾ ಜಿಲ್ಲೆಯ ಸೈದಾಪುರದ ಮಾತೋಶ್ರೀ ವಿದ್ಯಾವತಿ ಹೇಳಿದರು.
ಅವರು ನಗರದ ಸಿದ್ದಾರೂಢ ಆಶ್ರಮದಲ್ಲಿ ನಡೆದ ಶಿವಪುತ್ರ ವಿಜಯ ಪ್ರವಚನ ಮುಕ್ತಾಯ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ ಭಗವಂತನಲ್ಲಿ ಬರಿ ಭಕ್ತಿ ಮಾಡಿದರೆ ಸಾಲದು ನಾವು ಮಾಡುವ ಭಕ್ತಿ ಭಗವಂತನ ಪ್ರೀತಿಗೆ ಪಾತ್ರವಾದರೆ ಮಾತ್ರ ಭಕ್ತರ ಕಷ್ಟಗಳಿಗೆ ಪರಿಹಾರ ಕರುಣಿಸುತ್ತಾನೆ. ಅದಕ್ಕೆ ನಾವು ಮಾಡುವ ಭಕ್ತಿ ಪರಿ ಶುದ್ಧವಾದಾಗ ಮಾತ್ರ ದೇವರು ಒಲಿಯುತ್ತಾನೆ. ಗುರುವಿನ ಕೃಫೆ ಇದ್ದರೆ ಎಲ್ಲವೂ ಲಭಿಸುತ್ತದೆ.
ಸಿದ್ದಾರೂಢರ ನಾಮ ಸ್ಮರಣೆ ಮಾಡಿದರೆ ಯಾವ ಕಷ್ಟಗಳು ಬರುವುದಿಲ್ಲ.ಸಿದ್ದಾರೂಢರನಾಮಕ್ಕೆ ಸಾಟಿ ಬೆರಿಲ್ಲ ಎಂಬ ನಂಬಿಕೆ ನಮ್ಮೆಲ್ಲರದ್ದು ಪರ ಶಿವ ಅವತಾರಿಯಾದ ಸಿದ್ದಾರೂಢರು ಎಲ್ಲಾ ಕಷ್ಟಗಳನ್ನು ಪರಿಹರಿಸುವ ದೇವರು. ಸಿದ್ದಾರೂಢರಾಧನೆಯಿಂದ ಬದುಕಿನ ಕಷ್ಟಗಳು ದೂರಾಗುತ್ತವೆ. ಯಶಸ್ಸಿನ ಹಾದಿಗಿದ್ದ ಅಡೆತಡೆಗಳು ದೂರವಾಗುತ್ತವೆ. ಎಂಬುದು ಭಕ್ತರ ನಂಬಿಕೆ.
ಮಹಾಲಿಂಗಪುರ ಅಧ್ಯಾತ್ಮದ ಶಕ್ತಿ ಕೇಂದ್ರವಾಗಿದೆ ಇಲ್ಲಿ ನಿತ್ಯ ನಿರಂತರ ಅಧ್ಯಾತ್ಮ ಚಿಂತನೆ ನಡೆಯುತ್ತವೆ. ಇಲ್ಲಿಂದಲೇ ಅಧ್ಯಾತ್ಮ ಜಗತ್ತಿಗೆ ಸಂದೇಶಗಳು ಹೋಗುತ್ತವೆ ಅನುವುದಕ್ಕೆ ಕಳೆದ ಹನ್ನೊಂದು ನಡೆದ ಶಿವಪುತ್ರ ವಿಜಯ ಪ್ರವಚನ ಸಾಕ್ಷಿ. ವರ್ಷವೀಡೀ ನಗರದಲ್ಲಿ ಒಂದಿಲ್ಲ ಒಂದು ಕಡೆ ಅಧ್ಯಾತ್ಮ ಚಿಂತನೆಗಳು, ಸತ್ಸಂಗಗಳು ನಡೆಯುವ ಮೂಲಕ ಜನರಲ್ಲಿ ಭಕ್ತಿ ಭಾವನೆ ಮೂಡುವಂತೆ ಆಗುತ್ತದೆ ಇದರಿಂದ ನೆಮ್ಮದಿ ಜೀವನ ಬದುಕು ಸಾಧ್ಯವಾಗುತ್ತದೆ ಎಂದರು.
ನಂತರ ಮಾತನಾಡಿದ ಹಿರಿಯ ಅಧ್ಯಾತ್ಮ ಶರಣರಾದ ಮಲ್ಲಪ್ಪ ಕಟಗಿ ಸಿದ್ದಾರೂಢರು ತನ್ನ ಭಕ್ತರನ್ನು ಎಲ್ಲಾ ತೊಂದರೆಗಳಿಂದ ರಕ್ಷಿಸುವ ಮೂಲಕ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ, ಎಷ್ಟೇ ಪ್ರಯತ್ನದ ಹೊರತಾಗಿ ನಿಮ್ಮ ಗುರಿಯನ್ನು ಸಾಧಿಸಲು ನಿಮಗೆ ಸಾಧ್ಯವಾಗುತ್ತಿಲ್ಲ ಎಂಬ ಭಾವನೆ ಮೂಡಿದ್ದರೆ ನಾವು ಮಾಡುವ ಭಕ್ತಿ ದೇವನಿಗೆ ಪ್ರಿಯವಾಗಿಲ್ಲ ಎಂದು ಆರ್ಥ ನಾವು ಮಾಡುವ ಬೇಡುವ ಕಾಯಕ ಪರಿಶುದ್ಧವಾಗಿದ್ದರೆ ದೇವರು ಖಂಡಿತವಾಗಿ ನಮಗೆ ಕರುಣೆ ತೋರುತ್ತಾನೆ.
ಕಳೆದ ಹನ್ನೊಂದು ತಿಂಗಳುಗಳಿಂದ ನಿತ್ಯ ಸಾಯಂಕಾಲ 6 ರಿಂದ್ 7 ರ ವರೆಗೆ ಮಹೇಶ ಇಟಕನ್ನವರವರು ಶಿವಪುತ್ರ ವಿಜಯ್ ಪ್ರವಚನ ಹೇಳಿ ಭಕ್ತರಲ್ಲಿ ಅಧ್ಯಾತ್ಮಕತೆ ಹೆಚ್ಚುವಂತೆ ಭಕ್ತಿಯಲ್ಲಿ ಅಪಾರ ಶಕ್ತಿ ಇದೆ ಎಂದು ತೋರಿಸಿದರು. ನಿರಂತರ ಅಧ್ಯಾತ್ಮ ಚಿಂತನೆ ಮಾಡಿದರೆ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ, ಅಪಾರ ಶಕ್ತಿ ಸಿದ್ದಿಯಾಗುತ್ತದೆ. ದೇವರಲ್ಲಿ ಭಕ್ತಿ ಭಾವನೆ ಹೆಚ್ಚುತ್ತದೆ ಎಂದರು
ನಂತರ ಮಾತನಾಡಿದ ಸ್ಥಳೀಯ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಪ ಪೂ ಸಹಜಾನಂದ ಸ್ವಾಮೀಜಿ ಸಿದ್ದಾರೂಢರು ಭಕ್ತರ ಕಷ್ಟಗಳಿಗೆ ಕರುಣೆ ತೋರಿಸಿ ಭಕ್ತರನ್ನು ಕಷ್ಟದಿಂದ ಪಾರು ಮಾಡುತ್ತಿದ್ದರು. ಅವರ ಜೀವಿತಾವಧಿಯಲ್ಲಿ ಸಾವಿರಾರು ಭಕ್ತರ ಕಷ್ಟಗಳಿಗೆ ಅಭಯ ಹಸ್ತ ನೀಡಿದರು ಭಕ್ತರ ಕಲ್ಯಾಣವನ್ನೇ ಬಯಸಿದ ಅವರು ತ್ರಿಕಾಲ ಅನ್ನದಾನ, ಜ್ಞಾನ ದಾನ, ಅರೋಗ್ಯ ದಾನ, ನಿರಂತರವಾಗಿ ಇಂದಿಗೂ ನಡೆಯುತ್ತಿವೆ. ಅದಕ್ಕೆ ಸಿದ್ದಾರೂಢರ ಇರುವಿಕೆಗೆ ಸಾಕ್ಷಿ ಎಂದರು.
ಈ ಸಂಧರ್ಭದಲ್ಲಿ ಯಲ್ಲಣ್ಣಗೌಡ ಪಾಟೀಲ, ಕಲ್ಲಪ್ಪ ಚಿಂಚಲಿ, ಸಿದ್ದರಾಮ ಸ್ವಾಮೀಜಿ , ಲಕ್ಕಪ್ಪ ಚಮಕೇರಿ, ಮಹಾಂತೇಶ ಘಟ್ನಟ್ಟಿ, ವೀರೇಶ ಶಿರೋಳ, ಚನ್ನಪ್ಪ ಗೂಗಾಡ, ಕುಮಾರ ವಾಲಿ, ಶಂಕರ ನಿಲಾರಿ, ಬಸವರಾಜ್ ಮೇಟಿ, ಶ್ರೀಶೈಲ್ ಉಳ್ಳೆಗಡ್ಡಿ, ಮಹಾಲಿಂಗ ಬಿಂಜಲಭಾವಿ, ಮೆಹಬೂಬ ಸನದಿ, ಉದ್ದಪ್ಪ ನಿಲಾರಿ, ಮಹಾಲಿಂಗ ಕರೆಹೊನ್ನ. ಸೇರಿ ಹಲವರು ಇದ್ದರು. ಮುಕ್ತಾಯದ ನಂತರ ಮಹಾಪ್ರಸಾದ ಜರುಗಿತು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 