2030ರ ವೇಳೆಗೆ ಎಚ್.ಐ.ವಿ ಮುಕ್ತ ಭಾರತ ದೇಶದ ಗುರಿ -ನ್ಯಾಯಾಧೀಶರಾದ ಕೆ.ಸಿ.ಸದಾನಂದಸ್ವಾಮಿ
ಹಾವೇರಿ 09: ವಿಶ್ವ ಆರೋಗ್ಯ ಸಂಸ್ಥೆಯು, 2030ರ ವೇಳೆಗೆ ಹೆಚ್.ಐ.ವಿ ಮುಕ್ತ ಭಾರತ ದೇಶವನ್ನಾಗಿ ಮಾಡುವ ಗುರಿ ಹೊಂದಿದ್ದು, ವಿದ್ಯಾರ್ಥಿಗಳು, ಉಪನ್ಯಾಸಕರು, ಆರೋಗ್ಯ ಇಲಾಖೆ ಹಾಗೂ ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೆಚ್.ಐ.ವಿ/ಏಡ್ಸ್ ಬಗ್ಗೆ ತಿಳಿದುಕೊಂಡು ಇತರರಿಗೂ ಜಾಗೃತಿ ಮೂಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಸಿ. ಸದಾನಂದಸ್ವಾಮಿ ಅವರು ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಶನಿವಾರ ಜರುಗಿದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷದ ಘೋಷವಾಕ್ಯದಂತೆ “ಹಕ್ಕುಗಳನ್ನು ಪಡೆಯಲು ಸರಿಯಾದ ಮಾರ್ಗ ಅನುಸರಿಸೋಣ” “ನನ್ನ ಆರೋಗ್ಯ ನನ್ನ ಹಕ್ಕು” ಎಂಬಂತೆ ಎಲ್ಲರೂ ಕರ್ತವ್ಯ ನಿಭಾಯಿಸುವ ಜೊತೆಗೆ ಯುವ ಜನರಿಗೆ ಹೆಚ್.ಐ.ವಿ/ಏಡ್ಸ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ನಾಗರೀಕರು ತಮ್ಮ ಹಕ್ಕುಗಳನ್ನು ಪಡೆಯುವ ಜೊತೆಗೆ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು. ಈ ಹಿನ್ನಲೆಯಲ್ಲಿ ಎಲ್ಲರೂ ಹೆಚ್.ಐ.ವಿ/ಏಡ್ಸ್ ನ್ನು ತಡೆಗಟ್ಟಲು ಕೈಜೋಡಿಸೋಣ ಎಂದು ಕರೆ ನೀಡಿದರು.
ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಆರ್.ಮುತಾಲಿಕದೇಸಾಯಿ ಅವರು ಮಾತನಾಡಿ, ಆರೋಗ್ಯ ಇಲಾಖೆಗೆ ಹಾಗೂ ಕಾನೂನು ಇಲಾಖೆಗೆ ಅವಿನಾಭಾವ ಸಂಬಂಧವಿದೆ. ಆರೋಗ್ಯ ಇಲಾಖೆ ಜನರಿಗೆ ಆರೋಗ್ಯ ನೀಡಿದರೆ, ನ್ಯಾಯಾಂಗ ಇಲಾಖೆ ಜನರಿಗೆ ಬದುಕುವ ರೀತಿ-ನೀತಿ, ಹಕ್ಕುಗಳು ಮತ್ತು ಕರ್ತವ್ಯಗಳನ್ನು ಒದಗಿಸಿಕೊಡುತ್ತದೆ. ಹಾಗಾಗಿ ಆರೋಗ್ಯ ಇಲಾಖೆಯ ಪ್ರತೀ ಕಾರ್ಯಕ್ರಮಗಳಲ್ಲೂ ಕಾನೂನು ಇಲಾಖೆಯು ಕೈಜೋಡಿಸುತ್ತದೆ. ಎರಡು ಇಲಾಖೆಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ನಿರ್ವಹಿಸಬೇಕಿದೆ. ಏಡ್ಸ್‌ನಂತಹ ಮಹಾ ಕಾಯಿಲೆಗಳಿಗೆ ತುತ್ತಾಗುತ್ತಿರುವ ಯುವಜನತೆಯನ್ನು ರಕ್ಷಿಸುವ ಹಾಗೂ ಜಾಗೃತಿ ಮೂಡಿಸುವ ಕೆಲಸವನ್ನು ನಾವು ನೀವೆಲ್ಲ ಮಾಡೋಣ ಎಂದು ಹೇಳಿದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಹೆಚ್.ಜತ್ತಿ ಮಾತನಾಡಿ, ಹೆಚ್.ಐ.ವಿಯಂತಹ ಕಾಯಿಲೆಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಎಚ್‌ಐವಿ ಕುರಿತು ಯುವ ಸಮೂಹಕ್ಕೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ನೀಲೇಶ.ಎಂ.ಎನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ವೇಕ್ಷಣಾ ಘಟಕದ ನಿಯಂತ್ರಣಾಧಿಕಾರಿ ಡಾ. ಜಗದೀಶ ಪಾಟೀಲ ಮಾತನಾಡಿದರು.
ಸ್ಪರ್ಧಾ ವಿಜೇತರು: ಹೆಚ್.ಐ.ವಿ/ಏಡ್ಸ್ ಹಾಗೂ ರಕ್ತದಾನದ ಮಹತ್ವದ ಕುರಿತು ಜಿಲ್ಲೆಯ ಪ್ರೌಢ ಶಾಲಾ ವಿದ್ಯಾಥಿಗಳಿಗೆ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಟ್ರೋಫಿ ನೀಡಲಾಯಿತು.
ಸೇಂಟ್‌ಆನ್ಸ್ ಪ್ರೌಢ ಶಾಲೆಯ -ಸಂಜನಾ ಜಿ.ಬಿ ಹಾಗೂ ಸಿಂಚನಾ ಡಿ.ಬಿ-ಪ್ರಥಮ, ಹಾವೇರಿ ಸರ್ಕಾರಿ ಕನ್ನಡ ಮಾಧ್ಯಮ ಹೈಸ್ಕೂಲ್ ಗಾಯಿತ್ರಿಎಸ್.ಕೆ ಹಾಗೂ ಸಹನಾ ಹೆಚ್.ಮುಳಗುಂದ-ದ್ವಿತೀಯ, ಬಸಾಪೂರ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆಯ ರುಶೀತಾ ಎಸ್.ಎಸ್ ಹಾಗೂ ಚೈತ್ರಾ ಆರ್.ವಾಯ್-ತೃತೀಯ ಹಾಗೂ ಸಂಗೂರ ಶ್ರೀ ಕುಮಾರೇಶ್ವರ ಪ್ರೌಢ ಶಾಲೆ ಲಕ್ಷ್ಮೀ ಹಾದರಗೇರಿ ಮತ್ತು ಸುಧಾಕನ್ನೇಶ್ವರ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.
ಸನ್ಮಾನ: ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಹೆಚ್.ಐ.ವಿ ಗುರಿ ಮತ್ತು ಪ್ರಗತಿ ಸಾಧಿಸಿದ ಸವಣೂರು ಐಸಿಟಿಸಿ ಕೇಂದ್ರ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರೀಯವಾಗಿರುವ ಶಿಗ್ಗಾಂವ ಐಸಿಟಿಸಿ ಕೇಂದ್ರ, ಸಮಯಕ್ಕೆ ಸರಿಯಾಗಿ ವರದಿಗಳನ್ನು ಸಲ್ಲಿಸಿದ ರಟ್ಟಿಹಳ್ಳಿ ಐಸಿಟಿಸಿ ಕೇಂದ್ರ, ಇಂಡೆಕ್ಸ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಪರೀಕ್ಷೆಗಳನ್ನು ಮಾಡಿದ ಹಿರೇಕೆರೂರು ಐಸಿಟಿಸಿ ಕೇಂದ್ರ, ಮುಖ್ಯ ವಾಹಿನಿ ತರಬೇತಿಗಳನ್ನು ಅತೀ ಹೆಚ್ಚು ಮಾಡಿದ ಜಿಲ್ಲಾ ಆಸ್ಪತ್ರೆ ಪಿಪಿಟಿಸಿಟಿ ಕೇಂದ್ರ, ಈಟಛಿ ಒಠ ಹೆಚ್ಚಾಗಿ ಸಂಘಟಿಸಿದ ಕೆ.ಎಲ್.ಇ ಸೊಸೈಟಿಯ, ಜಿ.ಎಚ್.ಕಾಲೇಜ್, ಅತ್ತ್ಯುತ್ತಮ ಐಸಿಟಿಸಿ ಕೇಂದ್ರ ಐಸಿಟಿಸಿ ಜಿಲ್ಲಾ ಆಸ್ಪತ್ರೆ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.
ಅತ್ತ್ಯುತ್ತಮ ಎ.ಆರ್.ಟಿಕೇಂದ್ರದ ಸಿಬ್ಬಂದಿ ಪ್ರಯೋಗ ಶಾಲಾ ತಂತ್ರಜ್ಞ ನಫೀಜ್‌ಅಹ್ಮದ, ಅತ್ತ್ಯುತ್ತಮ ರಕ್ತನಿಧಿ ಕೇಂದ್ರದ ಸಿಬ್ಬಂದಿ ಪುಷ್ಪಾವತಿ ಸಜ್ಜನರ, ಅತ್ತ್ಯುತ್ತಮ ಡಿ.ಎಸ್.ಆರ್.ಸಿ ಕೇಂದ್ರದ ಸಿಬ್ಬಂದಿ ಎ.ಕೆ.ಭಾಗವಾನ, ಅತ್ತ್ಯುತ್ತಮ ಡ್ಯಾಪ್ಕ್ಯೂಕೇಂದ್ರದ ಸಿಬ್ಬಂದಿ ಸತೀಶಕುಮಾರ ಹೊಸಮನಿ ಅವರನ್ನು ಸನ್ಮಾಸಲಾಯಿತು.
ಅತ್ಯುತ್ತಮ ರೆಡ್ ರಿಬ್ಬನ್ ಕ್ಲಬ್ ಕಾಲೇಜುಗಳು : ಹಾವೇರಿಯ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್, ಟಿ.ಎಮ್.ಎ.ಇ.ಎ ಸಂಸ್ಥೆಯ ಬಿ.ಇಡಿ ಪದವಿ ಮಹಾವಿದ್ಯಾಲಯ, ದೇವಗಿರಿ ಸರ್ಕಾರಿ ಇಂಜಿನಿಯರಿಂಗ ಕಾಲೇಜ್.
ಹೆಚ್.ಐ.ವಿ ಸಮುದಾಯಕ್ಕೆ ಬೆಂಬಲ ನೀಡಿದ ಸಂಘ-ಸಂಸ್ಥೆಗಳು: ಹಾವೇರಿ ಸ್ಪಂದನಾ ಮಹಿಳಾ ಒಕ್ಕೂಟ (ಎಫ್.ಎಸ್.ಡಬ್ಲ್ಯೂ-ಟಿಐ/ಸಿಬಿಒ), ಸಂಜೀವಿನಿ ನ. ಮತ್ತು ಗ್ರಾ. ಸಂಸ್ಥೆ (ಎಮ್.ಎಸ್.ಎಮ್-ಟಿಐ/ಸಿಬಿಒ), ರಕ್ಷಿತಾ ಪಾಸಿಟಿವ್ ಪೀಪಲ್ ನೆಟವರ್ಕ, ಸಮರಾ್ಣ ನ ್ಘಗ್ರಾ ಸಂಸ್ಥೆ ಹಾವೇರಿ (ಎಫ್.ಎಸ್.ಡಬ್ಲ್ಯೂ-ಟಿಐ/ಸಿಬಿಒ) ಜಿಲ್ಲೆಯಲ್ಲಿ ಹೆಚ್.ಐ.ವಿ ಸಮುದಾಯಕ್ಕೆ ಬೆಂಬಲ ನೀಡಿದ ಸಂಘ ಸಂಸ್ಥೆಗಳಾಗಿವೆ.
ಕಾರ್ಯಕ್ರಮದಲ್ಲಿ ಕಾರವಾರ ವಿಭಾಗದ ಡಬ್ಲ್ಯೂ ಎಚ್ ಒ ಕನ್ಸಲ್ಟಂಟ್ ಡಾ.ರಾಜೀವ ಎನ್.ಎಸ್., ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಜಿಲ್ಲಾ ದಂತ ಆರೋಗ್ಯಭಾಗ್ಯ ಕಾರ್ಯಕ್ರಮಾಧಿಕಾರಿ ಡಾ.ಕಲ್ಪನಾ, ಎ.ಆರ್.ಟಿ. ಕೇಂದ್ರ ವೈದ್ಯಾಧಿಕಾರಿ ಡಾ. ವಿ.ಜಯಲಕ್ಷ್ಮೀ ಇತರರು ಉಪಸ್ಥಿತರಿದ್ದರು. ವಿರಾಜ ಸುಣಗಾರ ಕಾರ್ಯಕ್ರಮ ನಿರೂಪಿಸಿದರು.