ಸಿಂದಗಿಯಲ್ಲಿ ತಾಯಿ, ಮಗು ಆಸ್ಪತ್ರೆ ನಿರ್ಮಿಸುವ ಗುರಿ: ಶಾಸಕ ಮನಗೂಳಿ

ಸಿಂದಗಿಯಲ್ಲಿ ತಾಯಿ, ಮಗು ಆಸ್ಪತ್ರೆ ನಿರ್ಮಿಸುವ ಗುರಿ: ಶಾಸಕ ಮನಗೂಳಿ  Goal is to build a mother and child hospital in Sindagi: MLA Managuli
ಸಿಂದಗಿ 26: ಸಿಂದಗಿ ಪಟ್ಟಣದಲ್ಲಿ ತಾಯಿ, ಮಗು ಆಸ್ಪತ್ರೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. 
ಪಟ್ಟಣದ ಕನಕದಾಸ ಬಡಾವಣೆಯಲ್ಲಿ ಸೋಮವಾರ ಜಿಲ್ಲಾಢಳಿತ ಹಾಗೂ ಜಿಲ್ಲಾ ಪಂಚಾಯತ್ ವಿಜಯಪುರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಪಂ ಮತ್ತು ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ಪ್ರಾರಂಭವಾದ ನಮ್ಮ ಕ್ಲಿನಿಕ್ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಾ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸರಾಸರಿ 130 ಹೆರಿಗೆಗಳಾಗುತ್ತವೆ. ಪ್ರತ್ಯೆಕಕವಾಗಿ ತಾಯಿ ಮತ್ತು ಮಗುವಿನ ಆಸ್ಪತ್ರೆ ನಿರ್ಮಾಣದಿಂದ ಸಿಂದಗಿ ತಾಲೂಕಿನ ಜನತೆಗೆ ಇನ್ನೂ ಉತ್ತಮ ಸೇವೆ ಲಭ್ಯವಾಗಲಿದೆ.  
ತಾಲೂಕಾ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸರಾಸರಿ 150 ಹೆರಿಗೆಗಳು ಆದಲ್ಲಿ ತಾಯಿ, ಮಗು ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರಾತಿ ಸಿಗುತ್ತದೆ. ತಾಯಿ, ಮಗು ಆಸ್ಪತ್ರೆಗೆ ಪ್ರತ್ಯೇಕವಾದ ಸಿಬ್ಬಂದಿ ನೇಮಕವಾಗುತ್ತಾರೆ. ಇದರಿಂದಾಗಿ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಮುಂಬರುವ ದಿನಗಳಲ್ಲಿ 142 ಹಳ್ಳಿಗಳ ಕೇಂದ್ರವಾಗಿರುವ ಸಿಂದಗಿ ಪಟ್ಟಣದಲ್ಲಿ ತಾಯಿ, ಮಗು ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.  
ಪಟ್ಟಣದಲ್ಲಿ 3ನೇ ನಮ್ಮ ಕ್ಲಿನಿಕ್ ಆರಂಭವಾಗಿದೆ. ಇದರಿಂದ ಈ ಭಾಗದ ಜನರಿಗೆ ಸುಲಭವಾಗಿ ಆರೋಗ್ಯ ಸೌಲಭ್ಯಗಳು ಸಿಗುತ್ತಿವೆ. ಪ್ರತಿಯೊಬ್ಬ ಬಡವನ ಬದುಕನ್ನು ಹಸನುಗೊಳಿಸುವ ಕಾರ್ಯವನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಮ್ಮ ಸರಕಾರ ಮಾಡುತ್ತಿದೆ ನಾಡಿನ ಪ್ರತಿಯೊಬ್ಬ ಪ್ರಜೆಯ ಆರೋಗ್ಯ ಸುಧಾರಣೆ ನಮ್ಮ ಸರಕಾರ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ನಗರವಾಸಿಗಳ ಉತ್ತಮ ಆರೋಗ್ಯಕ್ಕಾಗಿ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ ಎಂದು ಹೇಳಿದರು. 
ಬಾಡಿಗೆ ಕಟ್ಟಡದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗಿದ್ದು, ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ತಲಾ ಒಬ್ಬ ವೈದ್ಯರು, ಶುಶ್ರೂಷಕಿ, ಲ್ಯಾಬ್ ಟೆಕ್ನಿಷಿಯನ್ ಕಾರ್ಯನಿರ್ವಹಿಸಲಿದ್ದಾರೆ. ಗರ್ಯಿಣಿಯರ ತಪಾಸಣೆ, ಸಕ್ಕರೆ ಕಾಯಿಲೆ ಮುಂತಾದ ಕಾಯಿಲೆಗಳ ತಪಾಸಣೆ ಉಚಿತವಾಗಿದ್ದು, ಉಚಿತ ಓಷಧವೂ ದೊರೆಯಲಿದೆ ಎಂದು ಹೇಳಿದರು. 
ಕ್ಷೇತ್ರದಲ್ಲಿ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಂಜೂರಾತಿಯಿದೆ. ಆದರೆ 9 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದ್ದರಿಂದ 5 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಲು, ಆಲಮೇಲದಲ್ಲಿ ಸಮುದಾಯ ಆಸ್ಪತ್ರೆಯನ್ನು ತಾಲೂಕಾ ಆಸ್ಪತ್ರೆಯನ್ನಾಗಿ, ತಾಂಬಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆ ಕೇಂದ್ರವನ್ನಾಗಿ ಸ್ಥಾಪಿಸಲು ಕಳೆದ 6 ತಿಂಗಳಿಂದ ಪ್ರಯತ್ನಿಸುತ್ತಿದ್ದೇನೆ. ಶಿಘ್ರದಲ್ಲಿ ಪ್ರಾರಂಭವಾಗುತ್ತವೆ ಎಂದು ಹೇಳಿದರು. 
ತಾಲೂಕಾ ವೈದ್ಯಾಧಿಕಾರಿ ಡಾ.ಎ.ಎ. ಮಾಗಿ ಮಾತನಾಡಿ, ಜನರು ಸಣ್ಣ ಪುಟ್ಟ ಕಾಯಿಲೆಗಳ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗಳಿಗೆ ಹೋಗಿ ಸಾಕಷ್ಟು ಸಮಯ ಕಾಯುವ ಪರಿಸ್ಥಿತಿಯಿತ್ತು. ಅದನ್ನು ತಪ್ಪಿಸಲು ಆರೋಗ್ಯ ಇಲಾಖೆ ಈ ಕ್ರಮ ವಹಿಸಿದೆ. ನಮ್ಮ ಕ್ಲಿನಿಕ್‌ನಲ್ಲಿ ಸಿಗುವ ಸೌಲಭ್ಯಗಳನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದರು. 
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಡಿ. ಕುಲಕರ್ಣಿ ಮಾತನಾಡಿ, ಶಾಸಕ ಅಶೋಕ ಮನಗೂಳಿ ಅವರ ಪ್ರಯತ್ನದಿಂದ ಸಿಂದಗಿ ಪಟ್ಟಣದಲ್ಲಿ 3 ನಮ್ಮ ಕ್ಲಿನಿಕ್ ಕೇಂದ್ರಗಳು ಪ್ರಾರಂಭವಾಗಿವೆ. ಅಲ್ಲದೇ ಪಟ್ಟಣದಲ್ಲಿ ತಾಯಿ, ಮಗು ಆಸ್ಪತ್ರೆ ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದರು. 
 ಜಿಪಂ ಕೆಡಿಪಿ ಸದಸ್ಯ ನೂರಹ್ಮದ ಅತ್ತಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಆರೋಗ್ಯ ಇಲಾಖೆಯ ಡಾ.ಜ್ಯೋತಿ ತಮದಡ್ಡಿ, ವಿರೇಂದ್ರ ಪವಾಡೆ, ಪಿ.ವಾಯ್ ಚೌಡಕಿ, ಮಹಾಲಿಂಗ ಪಕೀರಪೂರ, ಯಲ್ಲಾಲಿಂಗ ಕಟಕದೊಂಡ, ಬಸವರಾಜ ಶಹಾಪೂರ, ಜಯಶ್ರೀ ಚಿಕರೆಡ್ಡಿ, ಎಆರ್‌ಎಸ್ ಕಮೀಟಿ ಸದಸ್ಯರಾದ ಜಹಾಂಗೀರ ಸಿಂದಗಿಕರ, ವಿನಾಯಕ ಕುಲಕರ್ಣಿ, ಚನ್ನು ಗೋಣಿ,  ಪುರಸಭೆ ಸದಸ್ಯ ಸಾಯಬಣ್ಣ ಪುರದಾಳ, ಸಿದ್ದು ಮಲ್ಲೇದ, ಶ್ರಿಶೈಲ ಬೀರಗೊಂಡ, ಭಾಗಣ್ಣ ಭೀರಗೊಂಡ, ಶ್ರಿಶೈಲ ನಂದಿಕೋಲ, ಕಾಂಗ್ರೇಸ್ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಹದ್ನೂರ, ಕೆಡಿಪಿ ಸದಸ್ಯೆ ಮಹಾನಂದಾ ಬಮಣ್ಣಿ ಸೇರಿದಂತೆ ಕನಕದಾಸ ಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.