ಗೋವಾ ರಾಜ್ಯಪಾಲೆ ಸೀಬರ್ಡ ನೌಕಾನೆಲೆಗೆ ಭೇಟಿ

ಕಾರವಾರ: ಗೋವಾ ರಾಜ್ಯದ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರು ಎ.24 ರಿಂದ ಎ.26 ರವರಗೆ ಕಾರವಾರ ಬಳಿಯ  ಸೀಬರ್ಡ ಐಎನ್ಎಸ್ ಕದಂಬ ನೌಕಾನೆಲೆಗೆ ಭೇಟಿ ನೀಡಿ ಅಲ್ಲಿನ ಎರಡನೇ ಹಂತದ ಕಾಮಗಾರಿಗಳನ್ನು ವೀಕ್ಷಿಸಿದರು. 

   ಕದಂಬ ನೌಕಾನೆಲೆಯನ್ನು ಕಂಡು ತೃಪ್ತಿ ವ್ಯಕ್ತಪಡಿಸಿದ ಅವರು ಶಿಫ್ ಲಿಫ್ಟ್ ವ್ಯವಸ್ಥೆ ಸೇರಿದಂತೆ ನೌಕಾನೆಲೆಯ ಅಗಧತೆಯನ್ನು ಕಣ್ತುಂಬಿಕೊಂಡರು. ಯುದ್ಧನೌಕೆಗಳ ನೆಲೆ ಹಾಗೂ ವಿಶಾಲ ಕಡಲು ಹಾಗೂ ಯುದ್ಧನೌಕೆಗಳ ನಿಲುಗಡೆಗೆ ಸಂಬಂಧಿಸಿದಂತೆ ನಿಮರ್ಿತವಾಗಿರುವ ಬಂದರನ್ನು ವೀಕ್ಷಿಸಿದರು. 

  ಹೆಚ್ಚಿನ ಯುದ್ಧನೌಕೆಗಳು ಹಾಗೂ ಸಬ್ ಮರೀನ್ ನೌಕೆಗಳ ತಾಣದ ಬಗ್ಗೆ ನೌಕಾ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಿಬ್ಬಂದಿಗಳ ಕಾರ್ಯಕ್ಷಮತೆ ಮತ್ತು ನೌಕಾನೆಲೆ ನಿಮರ್ಾಣದಲ್ಲಿ ವಿಸ್ತಾರವಾಗಿ ನಡೆದಿರುವ ಕಾಮಗಾರಿಗಳ ವಿವರ ಕೇಳಿ ಸಂತೃಪ್ತಿ ವ್ಯಕ್ತಪಡಿಸಿದರು. 

ದೇಶದ ರಕ್ಷಣೆಯಲ್ಲಿ ನೇವಿಯ ಮಹತ್ವ ಕಂಡು ನೇವಿ ಸಿಬ್ಬಂದಿಯನ್ನು ಅಭಿನಂದಿಸಿದರು. ಅಲ್ಲದೇ ತಲವಾರ್ ನೌಕೆಯಲ್ಲಿ ಕುಳಿತು ಸ್ವಲ್ಪ ದೂರ ಸಮುದ್ರಯಾನ ಸಹ ಮಾಡಿದರು. ನೌಕಾ ಸೇನೆಯ ನೆನಪಿನ ಕಾಣಿಕೆಯನ್ನು ರಾಜ್ಯಪಾಲೆ ಮೃದುಲಾ ಸಿನ್ಹಾ ಅವರಿಗೆ  ನೀಡಲಾಯಿತು. ಕರ್ನಾಟಕ  ನೇವಿ ವಿಭಾಗದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.