ಗ್ಲೋಬಲ್ ಎಕ್ಸೆಲೆನ್ಸ್ ಟೀಚರ್ ಅವಾರ್ಡ್ ಪ್ರಶಸ್ತಿ ಪ್ರದಾನ
Global Excellence Teacher Award Presentation
ಹೂವಿನ ಹಡಗಲಿ 27: ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ ಕೊಟ್ರಗೌಡ ಅಭಿಮತ ವ್ಯಕ್ತಪಡಿಸಿದರು.ತಾಲೂಕಿನ ಹೊಳಗುಂದಿ ಗ್ಲೋಬಲ್ ಪದವಿ ಪೂರ್ವ ಕಾಲೇಜಿನಲ್ಲಿ ದಲಾಯತ್ ಸುಭಾನಸಾಬ್ ವೆಲ್ ಫೇರ್ ಎಜುಕೇಷನ್ ಟ್ರಸ್ಟ್ ವತಿಯಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ಡಾ ರಾಧಾಕೃಷ್ಣನ್ ಸ್ಮರಣಾರ್ಥ ಗ್ಲೋಬಲ್ ಎಕ್ಸೆಲೆನ್ಸ್ ಟೀಚರ್ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ಲೋಬಲ್ ಶಾಲಾ ಕಾಲೇಜು ಗ್ರಾಮೀಣ ಪ್ರದೇಶಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವರದಾನವಾಗಿದೆ ಎಂದರು. ಪ್ರಾಂಶುಪಾಲರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೋರಿ ಹಾಲೇಶ್ ,ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯ ಸುರೇಶ ಅಂಗಡಿ, ಲೇಖಕ ಆರ್ ಬಿ ಗುರುಬಸವರಾಜ, ಪತ್ರಕರ್ತರಾದ ಬಿಚ್ಚುಗತ್ತಿ ಖಾಜಾ ಹುಸೇನ್, ವೀರೇಶ್ ಕಲ್ಮಠ, ಗಣಿತ ವಿಜ್ಞಾನ ವೇದಿಕೆಯ ಕೋರಿ ವಿಶ್ವನಾಥ್,ಕೆ ನಿಂಗಪ್ಪ ಮಾತನಾಡಿದರು.ದಾವಣಗೆರೆ ಶೈನ್ ಪಿಯುಸಿ ಕಾಲೇಜಿನ ಶಹಬಾಜ್ ಅಹ್ಮದ್ ಶೇಖ್, ಪ್ರಾಚಾರ್ಯರಾದ ಥಾಮಸ್ ಸಂತೋಷ್, ಅಶ್ವಿನ ಕುಮಾರ್, ಆಡಳಿತಾಧಿಕಾರಿ ಡಿ ಕರೀಮಸಾಬ್ ಶಂಕರ್ ಬೆಟಗೇರಿ,ಸಹ ಶಿಕ್ಷಕರ ಸಂಘದ ಶಿವಬಸವಸ್ವಾಮಿ ಹಿರೇಮಠ,ಕಸ್ತೂರಿ ಮುದ್ದಿ ಇತರರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಫಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ ಸರ್ಕಾರಿ ಅನುದಾನಿತ ಅನುದಾನರಹಿತ ಮೊರಾರ್ಜಿ ವಸತಿ ಪ್ರೌಢಶಾಲೆಗಳ ಗಣಿತ ಹಾಗೂ ವಿಜ್ಞಾನ ಶಿಕ್ಷಕರಿಗೆ ಗ್ಲೋಬಲ್ ಎಕ್ಸೆಲೆನ್ಸ್ ಟೀಚರ್ ಅವಾರ್ಡ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಎಂ ದಯಾನಂದ, ಮಹಾದೇವ ಸೋಗಿ, ಎಚ್ ಬಸವರಾಜ,ಟಿ ಅಬುಸಲೇಹ ನಿರ್ವಹಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 