ಲೋಕದರ್ಶನವರದಿ
ಮಹಾಲಿಂಗಪುರ 11: ಶಾಲೆ ಜೀವಂತ ದೇವಾಲಯವಾಗಿದ್ದು ತಿಮ್ಮಪ್ಪನ ಹುಂಡಿಗೆ ಹಾಕುವ ಕಾಣಿಕೆಯನ್ನು ನಿಮ್ಮೂರಿನ ಶಾಲೆಗೆ ನೀಡಿ ಅದೇ ನಿಜವಾದ ಜನಾರ್ಧನನ ಸೇವೆಯಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಸಮೀಪದ ಕೆಸರಗೊಪ್ಪ ಗ್ರಾಮದಲ್ಲಿ 2014-15 ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿಮರ್ಿಸಿದ ಪ್ರೌಢಶಾಲೆಯ ಹೆಚ್ಚುವರಿ ಶಾಲಾ ಕೊಠಡಿ ಉದ್ಘಾಟನೆ ಹಾಗೂ ಕನರ್ಾಟಕ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಅನುದಾನದಡಿಯಲ್ಲಿ 96 ಲಕ್ಷ ರೂ. ಪಿಯು ಕಾಲೇಜಿನ ಹೆಚ್ಚುವರಿ ಕಟ್ಟಡ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದರು.
ಈ ಸಮಯದಲ್ಲಿ ಮಾತನಾಡಿದ ಶಾಸಕರು, ಇಂದು ದೇವರ ಹೆಸರಿನಲ್ಲಿ ಸಾಕಷ್ಟು ಕಾಣಿಕೆಯನ್ನು ದೇವಸ್ಥಾನಗಳಿಗೆ ಕೊಡುತ್ತಿದ್ದೀರಿ ಅದರ ಬದಲಾಗಿ ನಿಮ್ಮೂರಿನ ಶಾಲೆಗಳಿಗೆ ಕೊಟ್ಟರೆ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ, ಸಕರ್ಾರವೇ ಎಲ್ಲದನ್ನೂ ಭರಿಸಲು ಸಾಧ್ಯವಿಲ್ಲವೆಂದು ಸ್ಥಳೀಯರನ್ನು ಶಿಕ್ಷಣಕ್ಕಾಗಿ ದಾನ ನೀಡಲು ಪ್ರೇರೇಪಿಸಿದರು.
ಇಂದಿನ ಮಕ್ಕಳಿಗೆ ಉದಾತ್ತ ಗುರಿಯೊಂದಿಗೆ ಪ್ರಾಮಾಣಿಕ ಪ್ರಯತ್ನವೂ ಅಷ್ಟೇ ಮುಖ್ಯ. ಸೋಲು ಗೆಲುವು ಏನೇ ಬಂದರು ಸಮಾನವಾಗಿ ಸ್ವೀಕರಿಸಿ ಎನ್ನುತ್ತ ದೇಶಾಭಿಮಾನವೂ ಮೊದಲ ಆದ್ಯತೆಯಾಗಿರಲಿ ಎಂದು ವಿದ್ಯಾಥರ್ಿಗಳಲ್ಲಿ ಆತ್ಮಸ್ಥೈರ್ಯ ಹಾಗೂ ದೇಶಾಭಿಮಾನ ಬಿತ್ತಿದರು.
ದಾನೇಶ್ವರಿ ಸಸಾಲಟ್ಟಿ ಮತ್ತು ಸಂಗಡಿಗರು ಪ್ರಾಥರ್ಿಸಿ, ಡಿ. ಎಚ್.ಮುಜಾವರ ಸ್ವಾಗತಿಸಿ, ಕುರಂದವಾಡ ಮಾಲಾರ್ಪಣೆ ಮಾಡಿ, ಮುಖ್ಯೋಪಾಧ್ಯಾಯ ಸಿ.ವಿ.ಚೌದ್ರಿ ನಿರೂಪಿಸಿದರು.
ಮುದಕಯ್ಯ ಹಿರೇಮಠ ಶ್ರೀಗಳು ಸಾನಿಧ್ಯ ವಹಿಸಿ ಗ್ರಾಪಂ ಅಧ್ಯಕ್ಷ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷ ತಿಮ್ಮಣ್ಣ ಬಟಕುಕರ್ಿ, ಉಪಾಧ್ಯಕ್ಷೆ ವೀಣಾ ದೇಸಾಯಿ, ಗ್ರಾಪಂ ಉಪಾಧ್ಯಕ್ಷೆ ಸಕ್ಕೂಬಾಯಿ ಮಾದರ, ಸದಸ್ಯ ಪರಪ್ಪ ಜನವಾಡ, ಭಾಜಪ ಗ್ರಾಮೀಣ ಅಧ್ಯಕ್ಷ ಸುರೇಶ ಅಕ್ಕಿವಾಟ, ಮನೋಹರ ಶಿರೋಳ, ಆನಂದ ಕಂಪು, ಸಂಗಪ್ಪ ಹಲ್ಲಿ, ಲಾಲಸಾಬ ಪೆಂಡಾರಿ, ಪ್ರಕಾಶ ಚನ್ನಾಳ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಮಾರುತಿ ಖರೋಷಿ, ಶ್ರೀಶೈಲ ಸತ್ತಿಗೇರಿ, ಮಹಾದೇವ ಸತ್ತಿಗೇರಿ, ಮಾನಿಂಗ ಸತ್ತಿಗೇರಿ, ಮಾನಿಂಗ ಮಾದರ, ಅಶೋಕ ಗಾಣಿಗೇರ, ಬಾಳಪ್ಪ ಸತ್ತಿಗೇರಿ, ವಿಠ್ಠಲ ಬ್ಯಾಕೋಡ, ಚನ್ನು ದೇಸಾಯಿ, ಮಾರುತಿ ಬ್ಯಾಕೋಡ, ಮಹಾದೇವ ಸಸಾಲಟ್ಟಿ, ಜ್ಯೋತೆಪ್ಪ ಕಪರಟ್ಟಿ, ಶಂಕ್ರಪ್ಪ ಪೂಜಾರಿ, ವಿಠ್ಠಲ ಢವಳೇಶ್ವರ , ಸಾವಿತ್ರಿ ಢವಳೇಶ್ವರ, ಗಣಪತಿ ಢವಳೇಶ್ವರ ಇತರರು ಇದ್ದರು.