ನಶಿಸಿ ಹೋಗುವ ಸಂಪತ್ತಿಗೆ ಹೆಚ್ಚಿನ ಮಹತ್ವ ನೀಡಿ
Give more importance to perishable wealth
ಮಹಾಲಿಂಗಪುರ 26: ನಶಿಸಿ ಹೋಗುವ ಸಂಪತ್ತಿಗೆ ಹೆಚ್ಚಿನ ಮಹತ್ವ ನೀಡದೆ, ಆ ಸಂಗ್ರಹದಿಂದಲೆ ದಾನ, ಧರ್ಮ ಮಾಡಿದಲ್ಲಿ, ನಮಗೆರಗುವ ಕಷ್ಟ ಕಾರ್ಪಣಯಗಳು ದೂರವಾಗಿ ನೆಮ್ಮದಿಯ ಬದುಕು ನಿಮ್ಮದಾಗುತ್ತದೆ ಎಂದು ಅಭಿನವ ರೇವಣಸಿದ್ಧ ಪಟ್ಟದೇವರು ಭಕ್ತರಿಗೆ ಆಶಿರ್ವಚನ ನೀಡಿದರು.
ಸ್ಥಳೀಯ ಬನಶಂಕರಿದೇವಿ ದೇವಸ್ಥಾನದಲ್ಲಿ ಗುರುವಾರ ಸಂಜೆ ನಾಲ್ಕನೇ ದಿನದ ನವರಾತ್ರಿ ಉತ್ಸವದ ಆದಿ ಶಕ್ತಿ ಪಾರಾಯಣ ಮಾಡುತ್ತ ಒಳಿತು ಕೆಡುಕುಗಳ ಕುರಿತು ಪ್ರವಚನ ನೀಡಿದರು.
ಕೆಟ್ಟ ಬುಧ್ಧಿ ರಾಕ್ಷಸ ಕುಲ ಪ್ರತಿನಿಧಿಸಿದರೆ, ಒಳ್ಳೆಯ ಆಲೋಚನೆ ಮತ್ತು ಸನ್ಮಾರ್ಗ ದೇವ ಲೋಕವನ್ನು ಪ್ರತಿನಿಧಿಸುತ್ತದೆ.ಭೂಮಿ ಮೇಲಿನ ಪ್ರತಿಯೊಂದು ಚರಾಚರ ವಸ್ತುವಿಗೆ ಅಳಿವು ಇದ್ದೆ ಇದೆ.ಚಿರಂಜೀವಿ ಪಟ್ಟ ಧರಿಸಿದ ಮಹಿಷಾಸುರನ ಅಟ್ಟಹಾಸದಿಂದ ದೇವಲೋಕ ಸಂಕಷ್ಟದಲ್ಲಿರುವಾಗ ದೇವಿ ಪುರಾಣದಲ್ಲಿ ಹುಟ್ಟಿದ ಹುಳು ಒಮ್ಮೆ ಸಾಯಲೆ ಬೇಕು ಎಂಬ ಅಂಶವನ್ನು ವಿವರಿಸಿದರು.
ಮಲ್ಪೆಯ ಪ್ರಕಾಶಜೀ ಮಾತನಾಡಿದರು. ಮಾಳಿ, ಹಡಪದ, ಜೈನ, ಗುರವ ಸಮಾಜ ಬಾಂಧವರುಗಳಿಂದ ಶ್ರೀಗಳಿಗೆ ಮಾಲಾರೆ್ಣ ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಮುಖರಾದ ಡಾ ಬಿ. ಡಿ.ಸೋರಗಾಂವಿ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಗುರುಪಾದ ಅಂಬಿ, ರವಿ ಜವಳಗಿ, ರಾಜು ಚಮಕೇರಿ, ಚನ್ನಪ್ಪ ಪಟ್ಟಣಶೆಟ್ಟಿ, ಈರಣ್ಣ ಹಲಗತ್ತಿ, ಬಸು ಢಪಾಳಾಪುರ, ಶಿವಲಿಂಗ ಟಿರ್ಕಿ, ಬಿ ಸಿ ಪೂಜಾರಿ, ಸಿದ್ದಗಿರೆಪ್ಪ ಕಾಗಿ, ಪ್ರಭು ಬೆಳಗಲಿ, ಭೀಮಶೆಪ್ಪ ಹೊಸೂರ, ಮಹಾಂತೇಶ ಹಡಪದ, ಜಿ. ಎಸ್.ಗೊಂಬಿ, ಪಾಪು ಓಸ್ವಾಲ, ಅಶೋಕ್ ಓಸ್ವಾಲ, ಶ್ರೀಶೈಲ್ ಕಿರಗಟಗಿ ಮುಂತಾದವರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 